mangalore : ಮಂಗಳೂರಿನಲ್ಲಿ ಗುಡ್ಡ ಕುಸಿತ ಓರ್ವ ಮಹಿಳೆ ಸಾವು | ಉಳಿದವರ ಪತ್ತೆಗಾಗಿ ಎನ್ಡಿಆರ್ಎಫ್ ಶೋಧ
ಗುಡ್ಡ ಕುಸಿತ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿದ್ದು ಮೂವರು ಮಣ್ಣಿನಡಿ ಸಿಲುಕಿರುವ ಘಟನೆ ಮಂಗಳೂರು ಸಮೀಪದ ಉಳ್ಳಾಲದಲ್ಲಿ ನಡೆದಿದೆ. ಪ್ರೇಮ ಪೂಜಾರಿ 52 ಮೃತ ದುರ್ದೈವಿ.
ಮಂಗಳೂರಿನ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ. ಈ ಹಿನ್ನಲೆ ಮಂಗಳೂರಿನ ಮೊಂಟೆಪದವು ಬಳಿ ಇಂದು ಗುಡ್ಡ ಕುಸಿತ ಸಂಭವಿಸಿದೆ. ಇದರ ಪರಿಣಾಮ ನಾಲ್ವರು ಮಣ್ಣಿನಡಿ ಸಿಲುಕಿದ್ದು, ಅದರಲ್ಲಿ ಒಬ್ಬ ಮಹಿಳೆಯನ್ನು ಮಣ್ಣಿನಿಂದ ಹೊರತೆಗೆದು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನುಳಿದ ಮೂವರ ಪತ್ತೆಗಾಗಿ ಘಟನಾ ಸ್ಥಳಕ್ಕೆ ಎನ್ ಡಿ ಆರ್ ಎಫ್ ಸಿಬ್ಬಂದಿಗಳು ಧಾವಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
