ನಿಮಗೆ ತಾಕತ್ತು! ದಮ್ಮು ಇದ್ದರೇ? ಮಾಜಿ ಸಚಿವ, ಹಾಲಿ ಸಂಸದರಿಗೆ ರಮೇಶ್​ ಹೆಗ್ಡೆ ಹಾಕಿದ್ರು ಸವಾಲ್?

Ramesh Hegde said that if they want to protect the interests of the people of the Western Ghats, they should protest against the Narendra Modi government. ಪಶ್ಚಿಮಘಟ್ಟದ ಜನಗಳ ಹಿತಾಸಕ್ತಿ ಕಾಪಾಡಬೇಕು ಎನ್ನುವ ಇಚ್ಚೆ ಇದ್ರೆ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು ರಮೇಶ್ ಹೆಗ್ಡೆಯವರು ಹೇಳಿದ್ದಾರೆ.

ನಿಮಗೆ ತಾಕತ್ತು! ದಮ್ಮು ಇದ್ದರೇ? ಮಾಜಿ ಸಚಿವ, ಹಾಲಿ ಸಂಸದರಿಗೆ ರಮೇಶ್​ ಹೆಗ್ಡೆ ಹಾಕಿದ್ರು ಸವಾಲ್?

KARNATAKA NEWS/ ONLINE / Malenadu today/ Aug 3, 2023 SHIVAMOGGA NEWS 

ಆರಗ ಜ್ಞಾನೇಂದ್ರ ಅಥವಾ ಸಂಸದರಾಗಲಿ ಇವರೆಲ್ಲಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡೋದಲ್ಲ. ನಿಜವಾಗ್ಲೂ ಇವರು ತಾಕತ್ತು ಧಮ್​ ಇದ್ರೆ, ಪಶ್ಚಿಮಘಟ್ಟದ ಜನಗಳ ಹಿತಾಸಕ್ತಿ ಕಾಪಾಡಬೇಕು ಎನ್ನುವ ಇಚ್ಚೆ ಇದ್ರೆ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಕೆಪಿಸಿಸಿ ವಕ್ತಾರರು ಆದ ರಮೇಶ್ ಹೆಗ್ಡೆಯವರು ಹೇಳಿದ್ದಾರೆ. ಯಾಕೆ ಎಂದರೆ, 2014 ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ನಾವು ಕೇಂದ್ರದಲ್ಲಿ ಆಡಳಿತಕ್ಕೆ ಬಂದರೆ, ಯಾವುದೇ ಕಾರಣಕ್ಕೂ ಡಾ.ಕಸ್ತೂರಿರಂಗನ್​ ವರದಿಯನ್ನು ಜಾರಿಗೆ ತರುವುದಿಲ್ಲ ಎಂದಿದ್ದರು. ಆದರೆ, ಮೋದಿ ಸರ್ಕಾರ, ಅಧಿಕಾರಕ್ಕೆ ಬಂದ ನಂತರ 2016 ರಲ್ಲಿ ರಾಷ್ಟ್ರೀಯ ಹಸಿರು ಪೀಠಕ್ಕೆ ಕೇಂದ್ರ ಸರ್ಕಾರ ಅಫಿಡವಿಟ್ ನ್ನ ಸಲ್ಲಿಸಿತ್ತು. ಗೋವಾ ಫೌಂಡೇಶನ್​ Vs ಭಾರತ ಸರ್ಕಾರದ ನಡುವಿನ ಕೇಸ್​ನಲ್ಲಿ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿತ್ತು. ನಾವು ಡಾ.ಕಸ್ತೂರಿರಂಗನ್​ ವರದಿಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ರಾಷ್ಟ್ರೀಯ ಹಸಿರು ಪೀಠದಲ್ಲಿ ಅಫಿಡವಿಟ್​ ಹಾಕಿತ್ತು. 2014 ಮತ್ತು 2016 ರಲ್ಲಿ ಒಟ್ಟು ಎರಡು ಸಲ ಅಫಿಡವಿಟ್ ಸಲ್ಲಿಸಿತ್ತು. ಇದನ್ನ ಆರಗ ಜ್ಞಾನೇಂದ್ರ ಹಾಗೂ ಸಂಸದ ರಾಘವೇಂದ್ರರವರು ಮರೆಯಬಾರದು ಎಂದರು.

 

04-09-2015, 22-07-2017, 03-10-2018, 06-07-2022 ಹೀಗೆ ನಾಲ್ಕು ಭಾರಿ ಕಸ್ತೂರಿರಂಗನ್​ ವರದಿ ಮಾದರಿಯ ಪಶ್ಚಿಮಘಟ್ಟದ ಪ್ರಕೃತಿ ಸೂಕ್ಷ್ಮ ಪ್ರದೇಶದ ಕರಡು ಅಧಿಸೂಚನೆಗಳನ್ನು ನರೇಂದ್ರ ಮೋದಿ ಸರ್ಕಾರ ಹೊರಡಿಸಿತ್ತು. ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಹಲವಾರು ಸಲ ಬಂದ ನರೇಂದ್ರ ಮೋದಿಯವರು ಹಾಗೂ ಅರಣ್ಯ ಸಚಿವರಾಗಿದ್ದ ಪ್ರಕಾಶ್ ಜಾವ್ಡೇಕರಾಗಲಿ, ಈಗಿನ ಅರಣ್ಯ ಸಚಿವ ಭೂಪೇಂದ್ರ ಯಾದವ್ ಕರ್ನಾಟಕಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಒಮ್ಮೆಯು ಕಸ್ತೂರಿರಂಗನ್​ ವರದಿ ಪ್ರಸ್ತಾಪಿಸಲೇ ಇಲ್ಲ.ಆದರೆ ನಿನ್ನೆ ಮಾಜಿ ಸಚಿವ ಆರಗ ಜ್ಞಾನೇಂದ್ರರವರು ನಾನು ದೆಹಲಿಯಲ್ಲಿ ಕೇಂದ್ರ ಅರಣ್ಯ ಸಚಿವರಿಗೆ  ಎಚ್ಚರಿಕೆ ಕೊಟ್ಟಿದ್ದೆ ಎಂದಿದ್ದರು. ಆದರೆ ಅವರ ಎಚ್ಚರಿಕೆಗೆ ದೆಹಲಿಯಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ ಎಂದು ರಮೇಶ್ ಹೆಗ್ಡೆ ವ್ಯಂಗ್ಯವಾಡಿದ್ರು. ಕರ್ನಾಟಕವನ್ನು ಪ್ರತಿನಿಧಿಸುವ ಯಾವುದೇ ಮಂತ್ರಿಗೂ ಸಹ ನರೇಂದ್ರ ಮೋದಿ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂದ ರಮೇಶ್​ ಹೆಗ್ಡೆ, ಇಲ್ಲಿಯ ನಾಯಕರು ಕೇವಲ ರಾಜಕೀಯ ನಾಟಕವನ್ನು ಆಡುತ್ತಿದ್ದಾರೆ ಎಂದರು. 

ರಾಷ್ಟ್ರೀಯ ಹಸಿರು ಪೀಠ, ಈ ಕಸ್ತೂರಿರಂಗನ್​ ವರದಿಯನ್ನು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅಂತಿಮಗೊಳಿಸುವ ಹಂತದಲ್ಲಿದೆ.ಬಿಜೆಪಿ ಸರ್ಕಾರ ನಾಲ್ಕು ಸಲ ಅಫಿಡವಿಟ್​ ಹಾಕಿದ ಕಾರಣಕ್ಕೆ ಈ ರೀತಿ ಹಸಿರುಪೀಠ ವರದಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಇದಕ್ಕೆ ನೇರ ಹೊಣೆ ನರೇಂದ್ರ ಮೋದಿ ನೇರ ಹೊಣೆ ಎಂದು ಕೆಪಿಸಿಸಿ ವಕ್ತಾರರು ಟೀಕಿಸಿದ್ರು.ಇದನ್ನ ಮರೆಮಾಚುವ ಕಾರಣಕ್ಕೆ ಆರಗ ಜ್ಞಾನೇಂದ್ರರವರು ಕಾಂಗ್ರೆಸ್​ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನ ಮಾಡುತ್ತಿದ್ದಾರೆ. ಕೇಂದ್ರ ಅರಣ್ಯ ಇಲಾಖೆಯು ನಿವೃತ್ತ ಅರಣ್ಯಾಧಿಕಾರಿ ಸಂಜಯ್​ ಕುಮಾರ್ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿ ರಚನೆ ಮಾಡಿ ಒಂದುವರ್ಷ ಕಳೆದಿದೆ. ಆದರೆ ರಾಜ್ಯದ 1572 ಗ್ರಾಮಗಳಲ್ಲಿ ಇದುವರೆಗೂ ಬೌತಿಕ ಸರ್ವೆಯನ್ನು ನಡೆಸಲಾಗಿಲ್ಲ ಎಂದು ವಿವರಿಸಿದ ರಮೇಶ್ ಹೆಗ್ಡೆಯವರು, ಅರಣ್ಯದೊಳಗೆ ಇರುವಂತಹ ಆರಗ ಜ್ಞಾನೇಂದ್ರರವರು ಈ ಸಂದರ್ಭದಲ್ಲಿ ಸರ್ವೆ ಮಾಡಿಸಿದೇ ಕಡಬು ತಿನ್ನುತ್ತಿದ್ದರಾ ಎಂದು ಪ್ರಶ್ನಿಸಿದ್ರು. ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರ ಅರಣ್ಯ ಸಚಿವರ ಜೊತೆ ವಿಡಿಯೋ ಕಾನ್ಪರೆನ್ಸ್​ನಲ್ಲಿ ಮಾತನಾಡಿದ್ರು. ಆ ಸಂದರ್ಭದಲ್ಲಿ ಅಂದಿನ ಸಿಎಂ ಬಸವರಾಜ್​ ಬೊಮ್ಮಾಯಿಯವರು ಕೇಂದ್ರಕ್ಕೆ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದರು. ಇದರ ಪರಿಣಾಮವಾಗಿ ವರದಿ ಜಾರಿಯಾಗುವ ಹಂತಕ್ಕೆ ಬಂದಿದೆ. 

ಇದೇ ವಿಚಾರದ ಬಗ್ಗೆ ರಾಜ್ಯಸರ್ಕಾರದ ಅರಣ್ಯ ಸಚಿವರ ಈಶ್ವರ್ ಖಂಡ್ರೆ, ಈ ವಿಚಾರವನ್ನು ಸಂಪುಟದ ಉಪಸಮಿತಿಯ ಮುಂದೆ ಅದರ ಸಾಧಕ ಭಾದಕಗಳನ್ನು ಚರ್ಚೆ ಮಾಡಿ, ಪಶ್ಚಿಮ ಘಟ್ಟಗಳ ಹಳ್ಳಿಗಳ ಜನರ ಅಭಿಪ್ರಾಯ ಸಂಗ್ರಹಿಸಿ ಜನಪರವಾದಂತಹ ತೀರ್ಮಾನವನ್ನು ಕೈಗೊಳ್ಳುತ್ತೇವೆ ಎಂದಿದ್ದರು. ಆದರೆ ಆರಗ ಜ್ಞಾನೇಂದ್ರರವರು ಇವರು ಹಿಪ್ಪಿ ಬಿಟ್ಕೊಂಡಿದ್ದಾರೆ. ಕಪ್ಪುಗಿದ್ದಾರೆ, ಅರಣ್ಯದ ಬಗ್ಗೆ ಅವರಿಗೇನು ಗೊತ್ತು ಎಂದು ಹೇಳಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ಹೊರಹಾಕಿದ್ರು .

2015 ಮತ್ತು 2016 ರಲ್ಲಿ ಕೇಂದ್ರ ಸರ್ಕಾರ ಕರೆದಿದ್ದ ಅರಣ್ಯ ಸಚಿವರ ಸಭೆಯಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್​ ಪಾಲ್ಗೊಂಡಿರಲಿಲ್ಲ. ಒಂಬತ್ತು ವರ್ಷದಿಂದ ಸಂಸದರಾಗಿರುವ ಬಿ.ವೈ.ರಾಘವೇಂದ್ರರವರು ತಮ್ಮ ಅವಧಿಯಲ್ಲಿ ಕಸ್ತೂರಿರಂಗನ್​ ವರದಿ ಬಗ್ಗೆ ಪ್ರಸ್ತಾಪಿಸಿಲ್ಲ. ನಿಮಗೆ ತಾಕತ್ತಿದ್ದರೇ, ಕೇಂದ್ರ ಸರ್ಕಾರದಿಂದ ಕಸ್ತೂರಿ ರಂಗನ್​ ವರದಿ ಜಾರಿಗೆ ತರಲ್ಲ ಎಂದು ಹೇಳಿಕೆ ಕೊಡಿಸಿ, ಹಾಗೆ ಮಾಡಿದ್ದಲ್ಲಿ ಆರಗ ಜ್ಞಾನೇಂದ್ರರವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಕಸ್ತೂರಿ ರಂಗನ್​ ವರದಿ ಬೇಡ ಎಂದು ನರೇಂದ್ರ ಮೋದಿ ಯವರ ಬಳಿ ಮನವಿ ಸಲ್ಲಿಸಲು ರಾಜ್ಯದ ಬಿಜೆಪಿ ಸಂಸದರಿಗೆ ಭಯ ಕಾಡುತ್ತಿದೆ ಎಂದು ಟೀಕಿಸಿದರು. 




ಇನ್ನಷ್ಟು ಸುದ್ದಿಗಳು 



 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು