rain fall report ಮಾನ್ಸೂನ್ ಎಚ್ಚರಿಕೆ: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ, ಶಿವಮೊಗ್ಗಕ್ಕೆ “ಹಳದಿ” ಅಲರ್ಟ್!
ಬೆಂಗಳೂರು: ಕರ್ನಾಟಕದಾದ್ಯಂತ ಮಾನ್ಸೂನ್ ತನ್ನ ಅಬ್ಬರ ಮುಂದುವರೆಸಿದ್ದು, ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಇತ್ತೀಚಿನ ಮಳೆಯ ಮುನ್ಸೂಚನಾ ನಕ್ಷೆಯು ರಾಜ್ಯದ ಬಹುತೇಕ ಭಾಗಗಳಿಗೆ “ಹಳದಿ ಅಲರ್ಟ್” ಘೋಷಿಸಿದೆ. ಕೆಲವು ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮಾತ್ರ ಹಸಿರು ವಲಯದಲ್ಲಿ ಮುಕ್ತಿ ಸಿಕ್ಕಿದೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು, ಮಲೆನಾಡು ಭಾಗದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಚಾಮರಾಜನಗರ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗದಲ್ಲಿ ಇವತ್ತು ಯಲ್ಲೋ ಅಲರ್ಟ್ ನೀಡಲಾಗಿದೆ.
ಸ್ಥಳೀಯ ಆಡಳಿತಗಳು ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿವೆ. ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸುವಂತೆ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.

ಇನ್ನೂ ಹವಾಮಾನ ಇಲಾಖೆಯ ಡೈಲಿ ಬುಲೆಟಿನ್ ಪ್ರಕಾರ
ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿಲೋಮೀಟರ್ ವೇಗದಲ್ಲಿ ನಿರಂತರ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ತಿಳಿಸಲಾಗಿದೆ.
ಜೂನ್ 17, 2025 ರ ಮುನ್ಸೂಚನೆ: ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ನಿರಂತರವಾಗಿ ಬೀಸುವ (ಗಂಟೆಗೆ 40-50 ಕಿ.ಮೀ) ಗಾಳಿಯೊಂದಿಗೆ ಭಾರೀಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಜೂನ್ 18, 2025 ರ ಮುನ್ಸೂಚನೆ: ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ (ಗಂಟೆಗೆ 40-50 ಕಿ.ಮೀ) ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಕರ್ನಾಟಕದ ಪ್ರಮುಖ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆಯ ಪ್ರಮಾಣ ಮತ್ತು ಮುಂಬರುವ ದಿನಗಳಲ್ಲಿನ ಮಳೆ ಮುನ್ಸೂಚನೆಯನ್ನು ನೀಡಲಾಗಿದೆ.
ಈ ನಡುವೆ ಇವತ್ತು ಬೆಳಗ್ಗೆ ಆರು ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ, ಆದ ಮಳೆಯ ವಿವರ ಹೀಗಿದೆ
ಶಿವಮೊಗ್ಗ: ಆಗುಂಬೆ – 134.4 ಮಿ.ಮೀ
ಉತ್ತರ ಕನ್ನಡ: ಹಲ್ಗೇರಿ – 134 ಮಿ.ಮೀ
ಕೊಡಗು: ಚೆಂಬು – 117 ಮಿ.ಮೀ
ಚಿಕ್ಕಮಗಳೂರು: ಬೆಗರ್ – 80.5 ಮಿ.ಮೀ
ಹಾಸನ: ಹೊಂಗಡಹಳ್ಳ – 78.5 ಮಿ.ಮೀ
ಬೆಳಗಾವಿ: ಪರವಾಡ – 64.5 ಮಿ.ಮೀ
ಉಡುಪಿ: ನೀರೆ – 192 ಮಿ.ಮೀ
ದಕ್ಷಿಣ ಕನ್ನಡ: ಶಿರತಾಡಿ – 109 ಮಿ.ಮೀ
ಉತ್ತರ ಕನ್ನಡ: ನಾಗರಬಸ್ತಿಗೇರಿ – 136.5 ಮಿ.ಮೀ
ಇನ್ನೂ ಮಾನ್ಸೂನ್ನ ಚುರುಕುತನವು ಇಂದು (ಜೂನ್ 17) ಕಡಿಮೆಯಾಗುತ್ತಿದ್ದು, ವಾರಾಂತ್ಯದವರೆಗೆ ಅಲ್ಲಲ್ಲಿ ಅತಿ ಭಾರೀ ಮಳೆಯಿಂದ ಹಿಡಿದು ಸಾಕಷ್ಟು ವ್ಯಾಪಕವಾದ ಭಾರೀ ಹಾಗೂ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗ ಕಡಿಮೆಯಾಗುತ್ತಿರುವುದರಿಂದ ಕರಾವಳಿ ಪ್ರದೇಶಗಳಿಗೆ ಹೆಚ್ಚು ಅನುಕೂಲವಾಗಲಿದೆ. ಘಟ್ಟ ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರೀ ಮತ್ತು ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
rain fall report ಮಲೆನಾಡುಟುಡೇ.ಕಾಂನಲ್ಲಿ ಶಿವಮೊಗ್ಗದ ಅಡಿಕೆ ದರವನ್ನು ಪರಿಶೀಲಿಸಿ. (Check Areca price in Shivamogga on Malenadutoday.com)
ಕರ್ನಾಟಕ ಹವಾಮಾನ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
rain fall report ಭಾರತೀಯ ಹವಾಮಾನ ಇಲಾಖೆ (IMD)
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC)
ಕರ್ನಾಟಕ ಮಳೆ, ಮಳೆ ಮುನ್ಸೂಚನೆ, ಬೆಂಗಳೂರು ಮಳೆ, ಶಿವಮೊಗ್ಗ ಮಳೆ, ಚಿಕ್ಕಮಗಳೂರು ಮಳೆ, ಕೊಡಗು ಮಳೆ, ಮಾನ್ಸೂನ್, ಹವಾಮಾನ ಮುನ್ಸೂಚನೆ, KSNDMC, IMD ಬೆಂಗಳೂರು, Karnataka rain, rain forecast, Bengaluru rain, Shivamogga rain, Chikkamagaluru rain, Kodagu rain, Monsoon, weather forecast, KSNDMC, IMD Bengaluru.