rain alert malnad shivamogga / ಶಿವಮೊಗ್ಗವೂ ಸೇರಿ 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ! ತುಂಗಾ ಡ್ಯಾಂ ಭರ್ತಿ!

Malenadu Today

rain alert malnad shivamogga ಮಲೆನಾಡಿನಲ್ಲಿ ಕಳೆದ  ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಇವತ್ತು ಕೂಡ ಮಳೆ ಮುಂದುವರಯಿಯಲಿದೆ ಎಂದು ಹವಮಾನ ಇಲಾಖೆ ಹೇಳಿದೆ. ಮೇಲಾಗಿ ಮಳೆಯಿಂದಾಗಿ ಶಿವಮೊಗ್ಗದ  ಗಾಜನೂರಿನಲ್ಲಿರುವ ತುಂಗಾ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಕೃಸ್ಟ್​ ಗೇಟ್​ಗಳಿಂದ ನೀರನ್ನು ನದಿಗೆ ಬಿಡಲಾಗುತ್ತಿದೆ. ಸದ್ಯ ಸಣ್ಣಪ್ರಮಾಣದಲ್ಲಿ ನೀರು ನದಿಗೆ ಹರಿಯುತ್ತಿದ್ದು, ಮಳೆ ಹೆಚ್ಚಾದರೆ, ಇನ್ನಷ್ಟು ನೀರು ನದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.  ತುಂಗಾ ಜಲಾಶಯವು 3.24 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಪ್ರತಿ ಮಳೆ ಗಾಲದ ವೇಳೆ, ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲಿಗೆ ಭರ್ತಿಯಾಗುವ ಜಲಾಶಯ ಇದಾಗಿದೆ.

rain alert malnad shivamogga

ಇನ್ನೊಂದೆಡೆ ಶಿವಮೊಗ್ಗ , ಚಿಕ್ಕಮಗಳೂರು , ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಇವತ್ತು ರೆಡ್ ಅಲರ್ಟ್ ನೀಡಲಾಗಿದೆ. ಹವಾಮಾನ ಇಲಾಖೆಯ ಅಧಿಕೃತ ವೆಬ್​ಸೈಟ್ ನ ಮ್ಯಾಪ್​ನಲ್ಲಿ ರೆಡ್ ಅಲರ್ಟ್ ತೋರಿಸಲಾಗಿದೆ. ಇನ್ನೂ ಐಎಂಡಿ ನಿನ್ನೆ ಬಿಡುಗಡೆ ಮಾಡಿರುವ ಬುಲೆಟಿನ್​ಲ್ಲಿ ಕರ್ನಾಟಕದಲ್ಲಿಯೇ ನಿನ್ನೆ ದಿನ ಅತಿಹೆಚ್ಚು ಮಳೆ ಬಿದ್ದಿರುವ ಪ್ರದೇಶಗಳಲ್ಲಿ ಆಗುಂಬೆ ಎರಡನೇ ಸ್ಥಾನದಲ್ಲಿದೆ. ಕೊಟ್ಟಿಗೆಹಾರದಲ್ಲಿ 21 ಸೆಂಟಿಮೀಟರ್ ಮಳೆಯಾಗಿದ್ದು, ಆಗುಂಬೆಯಲ್ಲಿ 19 ಸೆಂಟಿ ಮೀಟರ್ ಮಳೆಯಾಗಿದೆ.  

Share This Article