Shivamogga Mar 7, 2024 ಇಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಮೆಸ್ಕಾಂ ಶಿವಮೊಗ್ಗ ತಿಳಿಸಿದೆ.
ಏನಿದೆ ಪ್ರಕಟಣೆಯಲ್ಲಿ
220 ಕೆವಿ ಶರಾವತಿ-ಬಳ್ಳಿಗಾವಿ ಮಾರ್ಗದ ಗೋಪುರ ಸಂಖ್ಯೆ 45 ರ ಅಡ್ಡಪಟ್ಟಿ ಮುರಿದು ಹೋಗಿದ್ದು, ಸುರಕ್ಷತಾ ದೃಷ್ಟಿಯಿಂದ ಸದರಿ ಗೋಪುರದ ಅಡ್ಡಪಟ್ಟಿಯನ್ನು ಅತೀ ಜರೂರಾಗಿ ಬದಲಾಯಿಸಬೇಕಾಗಿದೆ. ಸದರಿ ಕೆಲಸ ನಿರ್ವಹಿಸಲು ಇಂದು 220 ಕೆವಿ ಶರಾವತಿ-ಬಳ್ಳಿಗಾವಿ ಮಾರ್ಗದ ಮಾರ್ಗ ಮುಕ್ತತೆಯನ್ನು ತೆಗೆದುಕೊಳ್ಳಲಾಗುತ್ತದೆ.
ಹೀಗಾಗಿ ಮೆಸ್ಕಾಂ ಶಿಕಾರಿಪುರ ಉಪವಿಭಾಗ ವ್ಯಾಪ್ತಿಯಲ್ಲಿನ ಶಿಕಾರಿಪುರ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಮಧ್ಯಾಹ್ನ 01 ರಿಂದ ಸಂಜೆ 7 ರವರೆಗೆ, ಅಂಬಾರಗೊಪ್ಪ, ಹೊಸೂರು,ಕಿಟ್ಟದಹಳ್ಳಿ, ಸಂಡದಲ್ಲಿನ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ, ಈಸೂರು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬೆಳಗ್ಗೆ 11 ರಿಂದ ಸಂಜೆ 7 ರವರೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಇಲ್ಲಿನ ಮೆಸ್ಕಾಂ ಎಇಇ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
