job in shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚಾಲಕರ ಹುದ್ದೆಗೆ ಅರ್ಜಿ ಆಹ್ವಾನ ! ವಿವರ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram
job in shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚಾಲಕರ ಹುದ್ದೆಗೆ ಅರ್ಜಿ ಆಹ್ವಾನ ! ವಿವರ ಇಲ್ಲಿದೆ

Shivamogga Mar 7, 2024  ಚಾಲಕರ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಸೈನಿಕ ಪುನರ್ವಸತಿ ಇಲಾಖೆ

ಕಚೇರಿಯಲ್ಲಿ ಲಿಪಿಕ ಕಂ ಚಾಲಕ ಹುದ್ದೆಗೆ ಅನುಭವವುಳ್ಳ ಮಾಜಿ ಸೈನಿಕರಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಅರ್ಜಿದಾರರು ಸೇನೆಯಲ್ಲಿ ವಾಹನ ಪರವಾನಗಿ ಪಡೆದಿರುವ ಮತ್ತು ಸೇನಾ ವಾಹನ ಚಲಾಯಿಸಿದ ಚಾಲಕ ಪ್ರವೃತ್ತಿಯುಳ್ಳವರಾಗಿರಬೇಕು. 

ಜೊತೆಗೆ ಸರ್ಕಾರದ ಮೋಟಾರು ಕಾಯಿದೆಯಡಿ ಮಾ.1 ರಂದು ಮೊದಲು ಪಡೆದ ಲಘು ಮೋಟಾರು ವಾಹನದ ಪರವಾನಗಿ ಹೊಂದಿರಬೇಕು. ಸೈನ್ಯದಲ್ಲಿ ದುರ್ನಡತೆ ಸಲುವಾಗಿ ಯಾವುದೇ ವೈದ್ಯಕೀಯ ಕಾರಣಗಳಿಂದ ಬಿಡುಗಡೆಗೊಂಡಿರಬಾರದು. 

ಆಸಕ್ತರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ಕಚೇರಿಗೆ ಸ್ವಯಂ ಲಿಖಿತ ಅರ್ಜಿ ಮತ್ತು ಸ್ವವಿವರಗಳೊಂದಿಗೆ ಮಾ.11 ರೊಳಗೆ ಕಚೇರಿ ವೇಳೆಯಲ್ಲಿ ಅರ್ಜಿ ಸಲ್ಲಿಸುವಂತೆ ಇಲಾಖೆ ಉಪನಿರ್ದೇಶಕ ಡಾ. ಸಿ.ಎ. ಹಿರೇಮಠ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗೆ ಶಿವಮೊಗ್ಗ ಕಚೇರಿಯ ದೂ: 08182-2200925 ಅಥವಾ  [email protected] ಮುಖಾಂತರ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor