ಪೊಲೀಸ್​ ಚೌಕಿ ಸೇರಿದಂತೆ ಇವತ್ತು ಪ್ರಮುಖ ಎರಿಯಾಗಳಲ್ಲಿ ಕರೆಂಟ್ ಕಟ್! ವಿವರ ಓದಿ

Malenadu Today

ಪೊಲೀಸ್​ ಚೌಕಿ ಸೇರಿದಂತೆ ಪ್ರಮುಖ ಎರಿಯಾಗಳಲ್ಲಿ ಇವತ್ತು ಕರೆಂಟ್ ಇರಲ್ಲ ಎಂದು ಮೆಸ್ಕಾಂ ಶಿವಮೊಗ್ಗ ವಿಭಾಗ ಪ್ರಕಟಣೆಯನ್ನು ನೀಡಿದೆ. ಮೆಸ್ಕಾಂ ನೀಡಿರುವ ಪ್ರಕಟಣೆಯ ಪ್ರಕಾರ, ಇವತ್ತು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್ -11 ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇವತ್ತು ಅಂದರೆ ಮೇ.7 ಬೆಳಿಗಗೆ 10 ರಿಂದ ಸಂಜೆ 5 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.  

ಪೊಲೀಸ್​ ಚೌಕಿ ಸೇರಿದಂತೆ ಎಲ್ಲೆಲ್ಲಿ ಇರಲ್ಲ ಕರೆಂಟ್

ವಿನೋಬನಗರ  ಪೊಲೀಸ್ ಚೌಕಿ,  ಅರವಿಂದ ನಗರ, ಸೂರ್ಯ ಲೇ ಔಟ್, ಮೈತ್ರಿ ಅಪಾರ್ಟ್‌ಮೆಂಟ್, ಶಾರದಮ್ಮ ಲೇ ಔಟ್,  ಪಿ ಅಂಡ್ ಟಿ ಕಾಲೋನಿ,  ಬೊಮ್ಮನಕಟ್ಟೆ ರಸ್ತೆ, ವೀರಣ್ಣ ಲೇ ಔಟ್,  ಹಾಗೂ ಹುಚ್ಚರಾಯ ಸ್ವಾಮಿ ಕಾಲೋನಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇವತ್ತು ಕರೆಂಟ್ ಇರಲ್ಲ.

- Advertisement -
Share This Article