ತೀರ್ಥಹಳ್ಳಿ ತಂತ್ರ- ತಿರುಮಂತ್ರ! ಯಾರಿಗೆ ಒಲಿಯಲಿದೆ ಕ್ಷೇತ್ರ? ಫೆವಿಕಾಲ್​ನಂತೆ ಗಟ್ಟಿಯಾದರಷ್ಟೆನಾ ಗೆಲುವು? ಇಲ್ಲಿದೆ ಟುಡೆ ವಿಶ್ಲೇಷಣೆ!

Political Review of Theerthahalli Assembly Constituency

ತೀರ್ಥಹಳ್ಳಿ ತಂತ್ರ- ತಿರುಮಂತ್ರ! ಯಾರಿಗೆ ಒಲಿಯಲಿದೆ ಕ್ಷೇತ್ರ? ಫೆವಿಕಾಲ್​ನಂತೆ ಗಟ್ಟಿಯಾದರಷ್ಟೆನಾ ಗೆಲುವು? ಇಲ್ಲಿದೆ ಟುಡೆ ವಿಶ್ಲೇಷಣೆ!
ತೀರ್ಥಹಳ್ಳಿ ತಂತ್ರ- ತಿರುಮಂತ್ರ! ಯಾರಿಗೆ ಒಲಿಯಲಿದೆ ಕ್ಷೇತ್ರ? ಫೆವಿಕಾಲ್​ನಂತೆ ಗಟ್ಟಿಯಾದರಷ್ಟೆನಾ ಗೆಲುವು? ಇಲ್ಲಿದೆ ಟುಡೆ ವಿಶ್ಲೇಷಣೆ!

MALENADUTODAY.COM  |SHIVAMOGGA| #KANNADANEWSWEB

ಪ್ರಜ್ಞಾವಂತ ಮತದಾರರ ಕ್ಷೇತ್ರ ತೀರ್ಥಹಳ್ಳಿಯಲ್ಲಿ  ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕ.. ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದವರಿಗೆ ಮಣೆ ಹಾಕುವರೇ ಮತದಾರರು.?ಈ ಬಾರಿಯೂ ನಡೆಯುತ್ತಾ ಹಿಂದುತ್ವದ ಅಜೆಂಡಾ.? ವರ್ಕೌಟ್ ಆಗುತ್ತಾ ಆರಗಾ ಜ್ಞಾನೇಂದ್ರರಿಗೆ?  ಕಿಮ್ಮನೆ ಮತ್ತು ಗೌಡರ ಒಗ್ಗಟ್ಟು ಕಾಂಗ್ರೆಸನ್ನ ಗೆಲ್ಲಿಸುತ್ತಾ...? ಟುಡೆ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ

ಒಟ್ಟು ಮತದಾರರು 1,84,122 (2018 ಕ್ಕೆ ಸಂಬಂಧಿಸಿದಂತೆ)

ಒಕ್ಕಲಿಗ- 54027,  ಲಿಂಗಾಯಿತ-6847, ಮುಸ್ಲಿಂ-15020,

ಈಡಿಗ-42068, ಕ್ರಿಶ್ಚಿಯನ್—2750, ಬಂಟ್ಸ್-9849, ಬ್ರಾಹ್ಮಣ-14800

ಮರಾಠ ಲಂಬಾಣಿ-5250, ಎಸ್ಸಿ-24834, ಎಸ್ಟಿ—5656, ಇತರೆ-6178  ಒಟ್ಟು, ಮತದಾರರು-1,87,279

READ | Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು ಮಹತ್ವದ್ದು! ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಇಲ್ಲಿದೆ

ಪ್ರಬಲ ಅಭ್ಯರ್ಥಿಗಳ ಪೈಪೋಟಿಯಲ್ಲಿ ತ್ರಿಕೋನ ಸ್ಪರ್ಧೆ.

ವಿಧಾನಸಭೆ ಚುನಾವಣೆ ಸನಿಹವಾಗುತ್ತಿದ್ದಂತೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಆಕಾಂಕ್ಷಿ ಅಭ್ಯರ್ಥಿಗಳ ಪಟ್ಟಿ ಬೆಳೆಯುತ್ತಿದ್ದು. ಮತದಾರರ ಮನಗೆಲ್ಲುವ ಪ್ರಯತ್ನಗಳು ಜೊರಾಗಿಯೇ ನಡೆಯುತ್ತಿದೆ. ಇದಕ್ಕೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಕೂಡ ಹೊರತಾಗಿಲ್ಲ. ಪ್ರಜ್ಞಾವಂತ ಮತದಾರರ ಕ್ಷೇತ್ರ ಎಂಬ ಹೆಗ್ಗಳಿಕೆ ಪಡೆದಿರುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ, ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ವಿಸ್ತಾರ ಹೊಂದಿರುವ ದೊಡ್ಡ ಕ್ಷೇತ್ರವಾಗಿದೆ. ಕ್ಷೇತ್ರದಲ್ಲಿ ಹಣ ಹೆಂಡಕ್ಕಿಂತಲೂ ವ್ಯಕ್ತಿಯ ರಾಜಕೀಯ ಅನುಭವ, ಕ್ಷೇತ್ರದಲ್ಲಿ ಮಾಡಿರುವ ಕೆಲಸವನ್ನು ಗುರುತಿಸುವ ಮತದಾರರು ಇರುವುದರಿಂದಲೇ, ಇಲ್ಲಿ ಯಾವ ಅಭ್ಯರ್ಥಿಗಳು ತಕ್ಷಣಕ್ಕೆ ಸ್ಪರ್ಧಿಸಿದರೆ ಗೆಲ್ಲಲು ಸಾಧ್ಯವಿಲ್ಲ. 

ಸತತ ಸೋಲು ಕಂಡ ಅಭ್ಯರ್ಥಿಗಳಿಗೆ ರಾಜಕೀಯ ಅನುಭವ ಉಣಿಸಿ ನಂತರ ನಡೆಯುವ ಚುನಾವಣೆಯಲ್ಲಿ ಗೆಲ್ಲಿಸುವ ಮತದಾರರು ಅನುಕಂಪಕ್ಕೆ ಬೆಲೆ ಕೊಡುವುದು ಹೆಚ್ಚು. ಆದರೆ 2013 ರಲ್ಲಿ  ನಡೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಹಣ ಹೆಂಡದ ಹೊಳೆಯೇ ಹರಿದಿದ್ದು, ಕ್ಷೇತ್ರಕ್ಕೆ ಕಪ್ಪುಚುಕ್ಕೆ ಯಾಗಿತ್ತು. ಕೆಜೆಪಿ ಪಕ್ಷದಿಂದಾಗಿ ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮತಗಳು ವಿಭಜನೆಯಾಗಿ ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ್ ಗೆಲುವು ಸಾಧಿಸಿದರು. ಕೆಜೆಪಿ ಇಲ್ಲದ 2018 ರ  ಚುನಾವಣೆಯಲ್ಲಿ  ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಿಮ್ಮನೆ ರತ್ನಾಕರ್ ಮತ್ತು ಬಿಜೆಪಿಯಿಂದ ಆರಗ ಜ್ಞಾನೇಂದ್ರ ನಡುವೆ ನೇರ ಸ್ಪರ್ಧೆ ಎಂದು ವಿಶ್ಲೇಷಿಸಲಾಗಿತ್ತು. 

ಈ ಮಧ್ಯೆ ಕೆಜೆಪಿಯಿಂದ ಹೊರಬಂದ ಆರ್​ಎಂ ಮಂಜುನಾಥ್ ಗೌಡರು  ನಂತರ ಕಾಂಗ್ರೆಸ್ ಪಕ್ಷ ಸೇರಿದ್ದರು. 2018 ರಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿಯುವ ಅಭಿಲಾಷೆ ಹೊಂದಿದ್ದರು ಆದರೆ, ಕಿಮ್ಮನೆ ರತ್ನಾಕರ್ ಸಚಿವ ಸ್ಥಾನ ತೊರೆದ ನಂತರ  ಕ್ಷೇತ್ರದಲ್ಲಿ ಕ್ರೀಯಾಶೀಲರಾಗಿದ್ದು, ಪ್ರತಿ ಮತದಾರರನ್ನು ಮುಟ್ಟುವ ಕೆಲಸ ಮಾಡುತ್ತಿದ್ದರು. ಪಾದಯಾತ್ರೆ ಮೂಲಕ ಜನತೆಯ ಸಮಸ್ಯೆಗೆ ಸ್ಪಂದಿಸಿದ್ರು. ಅವರಿಗೆ ಟಿಕೆಟ್ ನಿಕ್ಕಿ ಎಂಬುದು ಗೊತ್ತಾಗಿ, ಮಂಜುನಾಥ್ ಗೌಡರು ಜೆಡಿಎಸ್​ ಸೇರಿ, ಆ ಪಕ್ಷದಿಂದ  2018 ರ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು, ಇದು ಬಿಜೆಪಿಗೆ ಅಂದು ವರದಾನವಾಯಿತು ಆರಗ ಜ್ಞಾನೇಂದ್ರ 67, 206 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಿಮ್ಮನೆ ರತ್ನಾಕರ್ ವಿರುದ್ಧ  21,880 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಿಮ್ಮನೆ ರತ್ನಾಕರ್ 45, 326 ಮತಗಳನ್ನು ಪಡೆದರೆ, ಆರ್ ಎಂ ಮಂಜುನಾಥ್ ಗೌಡ 39,961 ಮತಗಳನ್ನು ಪಡೆದು ಸೋಲು ಅನುಭವಿಸಿದ್ರು.

ಅಂದು ಮಂಜುನಾಥ್ ಗೌಡರು ಕಾಂಗ್ರೆಸ್ ನಲ್ಲಿದ್ದುಕೊಂಡೇ ಕಿಮ್ಮನೆಯವರಿಗೆ ಕೈ ಜೋಡಿಸಿದ್ರೆ, ಕಿಮ್ಮನೆ ರತ್ನಾಕರ್ ಗೆಲವು ನಿಶ್ವಿತವಾಗಿತ್ತು. ಅದಕ್ಕೂ ಮೊದಲು ಎರಡು ಬಾರಿ ಸತತ ಸೋಲು ಕಂಡಿದ್ದ ಬಿಜೆಪಿಯ ಆರಗ ಜ್ಞಾನೇಂದ್ರರಿಗೆ ಕ್ಷೇತ್ರದ ಮತದಾರರು ಕೈ ಹಿಡಿದಿದ್ದರು. ನಂದಿತಾ ಪ್ರಕರಣದಿಂದಾದ ಹಿಂದುತ್ವದ ಅಲೆ, ಸೋಲಿನ ಅನುಕಂಪ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು, ಆರಗ ಜ್ಞಾನೇಂದ್ರರಿಗೆ ಹೆಚ್ಚಿನ ಮೈಲೇಜ್ ನೀಡಿತ್ತು.

READ | Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು ಮಹತ್ವದ್ದು! ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಇಲ್ಲಿದೆ

ಜೋಡೆತ್ತುಗಳಾದ್ರೆ ಮಾತ್ರ ನೊಗ ಎಳೆಯಲು ಸಾಧ್ಯ

ಹಿಂದಿ ಎರಡು ಎಲೆಕ್ಷನ್​ನಲ್ಲಿ ಕಂಡುಬಂದಂತೆ ಈ ಸಲವೂ ಕ್ಷೇತ್ರದಲ್ಲಿ ಮತ್ತದೆ ನಾಯಕರ ನಡುವೆ ರಾಜಕಾರಣ ಸುತ್ತುತ್ತಿದೆ.  ಒಂದೇ ಪಕ್ಷದಲ್ಲಿದ್ದುಕೊಂಡು ರಾಜಕೀಯ ವಿರೋಧಿಗಳಂತಿರುವ ಕಿಮ್ಮನೆ ರತ್ನಾಕರ್ ಮತ್ತು ಆರ್ ಎಂ ಮಂಜುನಾಥ್ ಗೌಡರು ಜನತೆ ಎದುರು ಒಂದಾಗಿದ್ದಾರೆ. ಇಬ್ಬರು ಆಂತರ್ಗತವಾಗಿ ಒಂದಾಗಿದ್ದೇ ಆದರಲ್ಲಿ ಇಬ್ಬರ ಪ್ರಭಾವಳಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೆ. ಇಬ್ಬರು ವೈಯಕ್ತಿಕವಾಗಿ ಮತದಾರರನ್ನು ಸೆಳೆಯುವಲ್ಲಿ ನಿಸ್ಸೀಮರು. ಇಬ್ಬರ ಮತಗಳು ಕ್ರೋಢೀಕರಣವಾದರೆ, ಬಿಜೆಪಿ ಶಕ್ತಿ ಕುಂಟಿತವಾಗುತ್ತದೆ. ಇಲ್ಲಿ ಕೊಂಚ ಒಳಪೆಟ್ಟು ಬಿದ್ದರೂ ಆರಗ ಜ್ಞಾನೇಂದ್ರರವರು ಮನೆಯಲ್ಲಿ ಕುಳಿತು ಗೆಲ್ಲಬಹುದಾದ ಸಾಧ್ಯತೆಗಳು ಹೆಚ್ಚಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಪೂರಕ ವಾತಾವರಣವಿದೆ, ಹೇಗಂತಿರಾ

ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕವಾಗಿರುವ ತೀರ್ಥಹಳ್ಳಿ ಕ್ಷೇತ್ರದಲ್ಲಿ ಸಧ್ಯದ ಸ್ಥಿತಿಯಲ್ಲಿ ಕಾಂಗ್ರೆಸ್​ಗೆ ಪೂರಕ ವಾತಾವರಣವಿದೆ. ಚುನಾವಣೆಯಲ್ಲಿ ಸೋತರೂ ರಾಜಕೀಯದಲ್ಲಿ ಸಕ್ರೀಯರಾಗಿರುವ ಕಿಮ್ಮನೆ, ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಹಲವು ಸಮಸ್ಯೆಗಳ ಬಗ್ಗೆ ಪಾದಯಾತ್ರೆ ಪ್ರತಿಭಟನೆ ಮಾಡಿದ್ದಾರೆ. ಹಳ್ಳಿಯ ಬೇಲಿ ಸಮಸ್ಯೆ, ಅರಣ್ಯ ಇಲಾಖೆ ಪೊಲೀಸ್ ಇಲಾಖೆಯ ದೌರ್ಜನ್ಯ ಕಿರುಕುಳದ ಬಗ್ಗೆ ಧ್ವನಿ ಎತ್ತಿ ನೊಂದವರಿಗೆ ನೆರವಾಗಿದ್ದಾರೆ. ಆರ್.ಎಂ ಮಂಜುನಾಥ್ ಗೌಡರು ಸಹಕಾರಿ ಕ್ಷೇತ್ರದಲ್ಲಿರುವಾಗಲೇ ತೀರ್ಥಹಳ್ಳಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಪ್ರತಿಮನೆಯ ಪ್ರತಿ ಸಹಕಾರ ಕ್ಷೇತ್ರದ ಸದಸ್ಯರುಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಇವರಿಬ್ಬರ ಶಕ್ತಿ ಒಂದುಗೂಡಿದರೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಹಾದಿ ಸುಗಮವಾಗಿದೆ. ಇನ್ನೊಂದೆಡೆ ಆರಗ ಜ್ಞಾನೇಂದ್ರ ಕೊನೆಯ ಒಂದುವರೆ ವರ್ಷ ಗೃಹಮಂತ್ರಿಯಾದ ನಂತರ ಕ್ಷೇತ್ರದಲ್ಲಿ ಒಳ್ಳೆಯ ಮತ್ತು ಕೆಟ್ಟ ರೀತಿಯ ಬದಲಾವಣೆಗಳು ನಡೆದು ಹೋಗಿದೆ. ರಾಜಕೀಯ ಎದುರಾಳಿಗಳನ್ನು ಶತ್ರುಗಳಂತೆ ಕಾಣುವ ಸ್ಥಿತಿ ಕ್ಷೇತ್ರದಲ್ಲಿ ಎದುರಾಗಿದ್ದಕ್ಕೆ ಮತದಾರರು ಬೇಸರಗೊಂಡಿದ್ದಾರೆ. 

BREAKING / ಶಿವಮೊಗ್ಗದಲ್ಲಿ ಲೇಡಿಸ್ ನೈಟ್ ಪಾರ್ಟಿಗೆ ವಿರೋಧ!/ ಕುವೆಂಪು ರೋಡ್​ನಲ್ಲಿರೋ ಬಾರ್​ಗೆ ಭಜರಂಗದಳ ಕಾರ್ಯಕರ್ತರ ದಾಳಿ

ಜಾರಿ ನಿರ್ದೇಶನಾಲಯ ಅಧಿಕಾರಿಗಳು ಭೇಟಿ ನೀಡಿದ್ದೆ ಕಿಮ್ಮನೆಗೆ ಆಸ್ತ್ರವಾಯ್ತಾ...

ಇತ್ತಿಚ್ಚೆಗೆ ತೀರ್ಥಹಳ್ಳಿ ಕಾಂಗ್ರೆಸ್ ಕಛೇರಿಗೆ ಇಡಿ ಅಧಿಕಾರಿಗಳು ಭೇಟಿ ಮಾಡಿ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದನ್ನು ಮಾದ್ಯಮಗಳು ಭಿನ್ನವಾಗಿ ಪ್ರಕಟಿಸಿದ್ದವು. ಮಂಗಳೂರಿನ ಕುಕ್ಕರ್ ಬಾಂಬ್ ಸ್ಟೋಟ ವಿಡಿಯೋ ತೋರಿಸುತ್ತಾ ಇತ್ತಾ ಕಿಮ್ಮನೆ ರತ್ನಾಕರ್ ಭಾವಚಿತ್ರವನ್ನು ಪ್ರಕಟಿಸಿ ಏನೋ ಒಂದು ರೀತಿಯಲ್ಲಿ ಟೆರರಿಸ್ಟ್ ಲಿಂಕ್ ಅನ್ನೋ ರೀತಿಯಲ್ಲಿ ವರದಿ ಬಿತ್ತರಗೊಂಡಿದ್ವು. ಇದು ಕಿಮ್ಮನೆ ರತ್ನಾಕರ್ ಗಿಂತಲೂ ಕ್ಷೇತ್ರದಲ್ಲಿ ಜನತೆಯ ಟೀಕೆಗೆ ಗುರಿಯಾಗಿತ್ತು.

ರಾಜಕೀಯ ಎದುರಾಳಿಗಳಿಗೆ ಠಕ್ಕರ್ ಕೊಡಲು ಈ ರೀತಿಯ ದ್ಷೇಷ ಒಳ್ಳೆಯದಲ್ಲ ಎಂಬ ಅಭಿಪ್ರಾಯ ಮೂಡಿತ್ತು. ಆರಗ ಜ್ಞಾನೇಂದ್ರರಿಂದ ತಪ್ಪುಗಳು ನಡೆಯದೆ ಹೋದ್ರು ಅವರ ಕೆಲ  ನಿಕಟವರ್ತಿಗಳಿಂದ  ತಪ್ಪುಗಳು ನಡೆದು ಹೋಗಿದೆ. ಗೃಹ ಮಂತ್ರಿಗಳ ಝೆಡ್ ಪ್ಲ್ಲಸ್​​ ಭದ್ರತೆಯಲ್ಲಿ ಜೀಪಿನಲ್ಲಿ ಹೋಗುವ ಕಾರ್ಯಕರ್ತರ ದೃಶ್ಯಗಳೇ ಮತದಾರರನ್ನು ಕುಕ್ಕುತ್ತಿದೆ.

ಅಡಿಕೆ ವಿಚಾರದಲ್ಲಿ ಗೃಹ ಸಚಿವರು ತಳೆದ ನಿಲುವು ಬೆಳೆಗಾರರಲ್ಲಿ ಬೇರೆಯದ್ದೆ ಸಂದೇಶ ರವಾನಿಸಿದೆ. ಈ ಬಾರಿ ಕ್ಷೇತ್ರದಲ್ಲಿ ಹಿಂದುತ್ವದ ಫ್ಯಾಕ್ಟರ್​ ಕೆಲಸ ಮಾಡೋದು ಕಷ್ಟ.ಇದರ ನಡುವೆ ಹಣದ ಹೊಳೆ ಹರಿದರೂ ಅಚ್ಚರಿಯಿಲ್ಲ. ಇಂತಹ ಪರಿಸ್ಥಿತಿಯ ಲಾಭ ಪಡೆಯುವ ಅವಕಾಶ ಕಾಂಗ್ರೆಸ್​ಗೆ ಹೆಚ್ಚಿದೆ. ಆದ್ರೆ ಅದು ಕಿಮ್ಮನೆ ಮತ್ತು ಆರ್ ಎಂ ಎಂ ಫಿವಿಕಾಲ್ ನಂತೆ ಗಟ್ಟಿಯಾದ್ರೆ ಮಾತ್ರ. ಇಲ್ಲವಾದಲ್ಲಿ ಮತದಾರರೇ ಗೊಂದಲಕ್ಕೆ ಸಿಲುಕಿ ಅಂತಿಮವಾಗಿ ಬಿಜೆಪಿಯ ಕಮಲ ಅರಳಿಸಿದರೂ ಅಚ್ಚರಿಯಿಲ್ಲ.

ಅಚ್ಚರಿ ಮೂಡಿಸುತ್ತಾ ಜೆಡಿಎಸ್​ ಸ್ಪರ್ಧೆ

ಇನ್ನೂ ಈ ಸಲ ಜೆಡಿಎಸ್​ನಿಂದ ಯಡೂರು ರಾಜಾರಾಮ್​ರವರು ತೀರ್ಥಹಳ್ಳಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಯು ತೀರ್ಥಹಳ್ಳಿಗೆ ಬಂದು ಹೋಗಿದೆ. ಕಾಂಗ್ರೆಸ್​ ಹಾಗೂ ಬಿಜೆಪಿಯ ಮೈನಸ್ ಪಾಯಿಂಟ್​ಗಳು ಹೊಸಮುಖಕ್ಕೆ ಆಧ್ಯತೆ ನೀಡಿದ್ದೇ ಆದಲ್ಲಿ ಯಡೂರು ರಾಜರಾಮ್​ರವರು ಸಹ ಪ್ರಬಲ ಸ್ಪರ್ಧೆ ಒಡ್ಡುವ ಸಾಧ್ಯತೆ ಇದೆ.

READ / Agumbe Tiger/ಇದು ಶಿವಮೊಗ್ಗದ ರಾಜಾಹುಲಿಯಲ್ಲವೇ? ಆಗುಂಬೆಯಲ್ಲಿ ವ್ಯಾಘ್ರ ಸಂಚಾರ ನಿಜವೆ? ವೈರಲ್​ ಸತ್ಯ ಇಲ್ಲಿದೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilur  double attack, cow gun, pig anni murder case: karnataka assembly election 2023,karnataka assembly elections 2023,karnataka assembly election,karnataka election 2023,karnataka assembly elections,assembly election 2023,2023 assembly election,karnataka elections 2023,karnataka election,karnataka vidhan sabha election 2023,karnataka assembly 2023,karnataka polls 2023,karnataka elections,2023 assembly elections,assembly elections 2023,karnataka assembly election 2023 date,2023 election,karnataka politics, karnataka politics,politics,thirthahalli bjp mla,thirthahalli assembly,thirthahalli city,araga jnanendra thirthahalli,thirthahalli election,tirthahalli,tirthahalli mla,thirthahalli candidates,thirthahalli jds madan,thirthahalli araga jnanendra,tirthahalli constituency,shivamogga politics,karnataka political news, kimmane rathnakar,kimmane ratnakar,kimmane ratnakar on modi,kimmane ratnakar office ed raid,kimmane ratnakar fans,kimmane ratnakar hike,kimmane rathnakar news,kimmane rathnakar office,kimmane rathnakar today news,kimmane ratnakar news, rm manjunath gowda,jds manjunath gowda,manjunath gowda mla malur,manjunatha gowda,mla manjunath gowda,r m manjunatha gowda,kimmane rathnakar vs rm manjunatha gowda, araga jnanendra,home minister araga jnanendra,araga jnanendra latest news,araga jnanendra breaking,araga jnanendra today news,hm araga jnanendra interview,araga jnanendra insult guliga,home minsiter araga jnanendra,araga jnanendra home minister, ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ರಾಜಕಾರಣ, ಆರಗ ಜ್ಞಾನೇಂದ್ರ ಚುನಾವಣೆ 2023 , ವಿಧಾನಸಭಾ ಚುನಾವಣೆ, ಆರ್ ಎಂ ಮಂಜುನಾಥ್ ಗೌಡ