Shivamogga news/ ತುಂಗಾ ನದಿ ಹಳೆಸೇತುವೆಯಿಂದ ನದಿಗೆ ಹಾರಲು ಮುಂದಾದ ಯುವ ಜೋಡಿ! ಯುವತಿ ಬಚಾವ್! ಯುವಕ ಸೀರಿಯಸ್​!

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗ ನಗರದ ಹಳೆ ಸೇತುವೆಯ ಬಳಿಯಲ್ಲಿ ಯುವ ಜೋಡಿಯೊಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನೂ ಈ ವೇಳೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ. 

Shivamogga news/ ತುಂಗಾ ನದಿ ಹಳೆಸೇತುವೆಯಿಂದ ನದಿಗೆ ಹಾರಲು ಮುಂದಾದ ಯುವ ಜೋಡಿ! ಯುವತಿ ಬಚಾವ್! ಯುವಕ ಸೀರಿಯಸ್​!

ನಡೆದಿದ್ದೇನು? 

ಯವಜೋಡಿಯೊಂದು ತುಂಗಾನದಿಯ (tunga bridge) ಹಳೆಸೇತುವೆ ಬಳಿ ಬಂದಿದೆ. ಕೆಲಹೊತ್ತು ಮಾತನಾಡ್ತಿದ್ದ ಜೋಡಿ ಬಳಿಕ ಬ್ರಿಡ್ಜ್​ನಿಂದ ನದಿಗೆ ಹಾರಲು ಮುಂದಾಗಿದ್ದನ್ನ ಅಲ್ಲಿದ್ದವರು ಗಮನಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಯುವಕ ನದಿಗೆ ಹಾರಿದ್ದಾನೆ. ಯುವತಿಯನ್ನು ಅಲ್ಲಿದ್ದವರು ಹಿಡಿದು ರಕ್ಷಿಸಿದ್ದಾರೆ. ಇನ್ನೂ ನದಿಗೆ ಹಾರಿದ ಯುವಕ ನೇರವಾಗಿ ಹೊಳೆಯ ಬಂಡೆಯ ಮೇಲೆ ಬಿದ್ದಿದ್ದ. ಪರಿಣಾಮ ಆತನಿಗೆ ಗಂಭೀರ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲವಾದರೂ, ಸ್ಥಳೀಯರು ಪ್ರೇಮ ವೈಫಲ್ಯ ಕಾರಣ ಇರಬಹುದು ಎನ್ನುತ್ತಿದ್ದಾರೆ. ಇನ್ನೂ ಯುವಯೋಡಿಯ ಗುರುತು ಪರಿಚಯ ಇನ್ನಷ್ಟೆ ಆಗಬೇಕಿದೆ. 

Shivamogga news/ ತುಂಗಾ ನದಿ ಹಳೆಸೇತುವೆಯಿಂದ ನದಿಗೆ ಹಾರಲು ಮುಂದಾದ ಯುವ ಜೋಡಿ! ಯುವತಿ ಬಚಾವ್! ಯುವಕ ಸೀರಿಯಸ್​!

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor