political news : ಕಾಂಗ್ರೆಸ್​ ಸರ್ಕಾರದ ವಿರುದ್ದ ಚಾರ್ಜ್​ ಶೀಟ್​ ಬಿಡುಗಡೆ ಮಾಡಿದ ಜಿಲ್ಲಾ ಬಿಜೆಪಿ

prathapa thirthahalli
Prathapa thirthahalli - content producer

political news : ಕಾಂಗ್ರೆಸ್​ ಸರ್ಕಾರದ ವಿರುದ್ದ ಚಾರ್ಜ್​ ಶೀಟ್​ ಬಿಡುಗಡೆ ಮಾಡಿದ ಜಿಲ್ಲಾ ಬಿಜೆಪಿ

political news : ಶಿವಮೊಗ್ಗ : ಒಂದು ಲಕ್ಷ ಕುಟುಂಬಗಳಿಗೆ ಸೂರು ಕೊಡುತ್ತಿದ್ದೇವೆ ಎನ್ನುವ ಮೂಲಕ ಕಾಂಗ್ರೆಸ್​ ಸರ್ಕಾರ ತನ್ನ ದುರಾಡಳಿತವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು  ಶಿವಮೊಗ್ಗ ನಗರ ಶಾಸಕ ಎಸ್​ ಎನ್​ ಚನ್ನಬಸಪ್ಪ ಆರೋಪಿಸಿದರು.

ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್​ ಸರ್ಕಾರದ ವಿರುದ್ದ ಕರ್ನಾಟಕ ಕಾಂಗ್ರೆಸ್​ ಸರ್ಕಾರದ ವೈಪಲ್ಯಗಳ ಚಾರ್ಚ್​ಶೀಟ್​ ಎಂಬ ಶೀರ್ಷಿಕೆ ಇರುವ 8 ಪುಟದ ಕರಪತ್ರವನ್ನು ಬಿಜೆಪಿ ಮುಖಂಡರು  ಬಿಡುಗಡೆ ಮಾಡಿದರು. ನಂತರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್​ ಎನ್​ ಚನ್ನಬಸಪ್ಪ,  ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳಲ್ಲಿ ಜನತೆಗೆ ಹೇಗೆ ಮೋಸ ಮಾಡಬಹುದು ಎಂದು ತೋರಿಸಿಕೊಟ್ಟಿರುವ ಸರ್ಕಾರವಾಗಿದೆ. ಪಂಚ ಗ್ಯಾರಂಟಿ ಎಂದು ಹೇಳಿ ಕಾಂಗ್ರೆಸ್​ ಕರ್ನಾಟಕವನ್ನು  ಅಭಿವೃದ್ದಿ ಶೂನ್ಯ ರಾಜ್ಯವನ್ನಾಗಿ  ಮಾಡಿದೆ. ದುರಂಹಕಾರದ ನಡುವಳಿಕೆ ಕಾಂಗ್ರೆಸ್ ನ ನೀತಿಯಾಗಿದ್ದು, ಬಹುಮತ ಇದೆ ಎಂದು ದುರಹಂಕಾರ ಮಾಡುವುದನ್ನ ಬಿಜೆಪಿ ಖಂಡಿಸುತ್ತದೆ. ಹಾಲಿನದರ ಏರಿಕೆ, ಮುಡಾ ಹಗರಣ, ಸೇರಿದಂತೆ ಅನೇಕ ಹಗರಣಗಳು ಈ ಸರ್ಕಾರದಲ್ಲಿ ನಡೆದಿದ್ದು, ದಲಿತರ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆದಿದೆ. ಅಷ್ಟೇ ಅಲ್ಲದೆ ಹನಿಟ್ರ್ಯಾಪ್ ಬಗ್ಗೆ ಅವರದ್ದೇ ಸಚಿವರುಮಾತನಾಡಿದರು ಅವರಿಗೆ ನ್ಯಾಯ ಕೊಡಿಸಲು  ಸಾಧ್ಯವಾಗಲಿಲ್ಲ. ಹನಿಟ್ರ್ಯಾಪ್ ವಿರುದ್ದ ಧ್ವನಿ ಎತ್ತಿದ್ದ ಶಾಸಕರನ್ನ ಸದನದಿಂದ ಹೊರಹಾಕುತ್ತಾರೆ. ಹುಟ್ಟಿನಿಂದ ಸಾವಿನವರೆಗೆ ಜನತೆ ಮೇಲೆ ಹೇರಿದ ಹೆಚ್ಚುವರಿ ತೆರಿಗೆ ಇವರ ಎರಡು ವರ್ಷದ ಸಾಧನೆಯಾಗಿದೆ. ಈ ಹಿನ್ನಲೆ ಎರಡು ವರ್ಷದ ಕಾಂಗ್ರೆಸ್ ನ ತುಘಲಕ್ ದರ್ಬಾರ್ ಕುರಿತು ಬಿಜೆಪಿ ರಾಜ್ಯದಾಧ್ಯಂತ  ಚಾರ್ಚ್ ಶೀಟ್ ಬಿಡುಗಡೆ ಮಾಡುತ್ತಿದೆ ಎಂದರು.

 

Share This Article