shivamogga news today: ಕಾಂಗ್ರೆಸ್ ಸರ್ಕಾರ ಮಲೆನಾಡು ರೈತರ ಸಮಸ್ಯೆಯನ್ನು ನಿರ್ಲಕ್ಷಿಸಿದ್ದು, ಅವರ ಫ್ರೀ ಭಾಗ್ಯಕ್ಕಿಂತಾ ನಮಗೆ ನಮ್ಮ ಭೂಮಿ ಭಾಗ್ಯ ದೊಡ್ಡದು ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕರಾದ ತೀನಾ ಶ್ರೀನಿವಾಸ್ ಹೇಳಿದರು.
ಇಂದು ಪತ್ರಿಕಾಭವನದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಶರಾವತಿ ಮುಳುಗಡೆ ಸಂತ್ರಸ್ಥರ ಹಾಗೂ ರಾಜ್ಯದ ಮಲೆನಾಡು ರೈತರ ಸಮಸ್ಯೆ ಬಗೆಹರಿಸಲು ಅನೇಕ ಹೋರಾಟಗಳು ನಡೆದಿದ್ದವು. ಈ ವಿಚಾರವಾಗಿ ಆಗ ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಆಯನೂರಿನಿಂದ ಶಿವಮೊಗ್ಗದವರಿಗೆ ಪಾದಯಾತ್ರೆ ನಡೆಸಿದ್ದರು. ಅದೇ ದಿನ ಸಂಜೆ ಎಂಎಎಸ್ ಕಾಲೇಜು ಮೈದಾನದಲ್ಲಿ ನಡೆದ ರೈತ ಸಮಾವೇಶದಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿಕೆ ಶಿವಕುಮಾರ್ ಬೃಹತ್ ರೈತರ ಸಮಾವೇಶದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ತಕ್ಷಣ ಮಲೆನಾಡು ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಸಿಎಂ, ಡಿ ಸಿಎಂ ಇದರ ಬಗ್ಗೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
shivamogga news today : ಮಲೆನಾಡು ರೈತ ಹೋರಾಟ ಸಮಿತಿ ಮಾಡುತ್ತಿರುವ ಆರೋಪಗಳೇನು
- ರಾಜ್ಯ ಸರ್ಕಾರ ಹಕ್ಕುಪತ್ರ ನೀಡಿದ ಎಲ್ಲಾ ಸಂತ್ರಸ್ತರು ಭೂಮಿ ಸರ್ವೆ ಆಗುತ್ತಿಲ್ಲ, ಅರಣ್ಯ ಇಲಾಖೆ ಸಂತಸ್ತರಿಗೆ ಬಿಡುಗಡೆ ಮಾಡಿದ ಎಲ್ಲ ಭೂಮಿಯನ್ನು ಸರ್ವೇ ಮಾಡಿಸಲಾಗುತ್ತಿಲ್ಲ.
- ಇದರ ಬಗ್ಗೆ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳದಿದ್ದರೆ. ರೈತರ ಸಮಸ್ಯೆ ಹಾಗೆ ಉಳಿಯುವ ಸಾಧ್ಯತೆ ಇದೆ.
- ತುಂಗಾ ಮುಳುಗಡೆ ಸಂತ್ರಸ್ತರಿಗೆ 1952ರಲ್ಲಿ ಸರ್ಕಾರವೇ ಮಂಜೂರು ಮಾಡಿದ ಹಕ್ಕು ಪತ್ರಗಳನ್ನು ಹೊಂದಿದವರಿಗೂ ಅರಣ್ಯ ಇಲಾಖೆ ಕಂದಾಯ ಇಲಾಖೆ ಅಕ್ರಮ ಮಂಜೂರಾತಿ ಎಂದು ಇವರು ಕೊಟ್ಟು ಕೇಸ್ ನಡೆಸಲಾಗುತ್ತಿದೆ .
- ಭದ್ರಾ ಡ್ಯಾಮ್ ಮುಳುಗಡೆ ಸಂತ್ರಸ್ಥರ ಪರಿಸ್ಥಿತಿಯೂ ಇದೆ ಆಗಿದೆ.
- ಈ ಹಿಂದೆ ಅರಣ್ಯ ಭೂಮಿ ಸಾಗುವಳಿ ಮಾಡಿದವರು ಕೈಬರಹ ಪಹಣಿ ಹೊಂದಿದವರಿಗೆ ಕೇಂದ್ರ ಸರ್ಕಾರ 3 ಎಕರೆ ಭೂಮಿ ಕೊಡಬೇಕೆಂದು 10 ಸರ್ಕಾರಿ ಆದೇಶ ಇದ್ದರೂ ಜಿಲ್ಲೆಯಲ್ಲಿರುವ 5000 ಕುಟುಂಬಗಳಿಗೆ ಹಕ್ಕು ಪತ್ರ ಕೊಟ್ಟಿಲ್ಲ .
- ಅರಣ್ಯ ಹಕ್ಕು ಕಾಯ್ದೆ ಇಡಿ ರಾಜ್ಯದಲ್ಲಿ 3 ಲಕ್ಷ ಅರ್ಜಿ ವಜಾ ಮಾಡಲಾಗಿದೆ. ಒಂದೆಡೆ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತ್ ಪ್ರತಿನಿಧಿಗಳು ಬರುವವರೆಗೂ ಸಭೆ ನಡೆಸಲು ಸಾಧ್ಯವಾಗಲ್ಲ ಎಂದು ಸುಪ್ರೀಂ ಕೋರ್ಟ್ ನಲ್ಲಿ ಪ್ರಮಾಣ ಪತ್ರ ಹಾಕಿ ಇನ್ನೊಂದೆಡೆ ರೈತರ ಅರ್ಜಿ ವಜಾ ಮಾಡಲಾಗಿದೆ.
shivamogga news today: ಮದ್ಯ ಮಾರಾಟದ ಸಂಘದವರು ಸೇರಿದಂತೆ ಇತರರು ಹೋರಾಟ ಮಾಡಿದಾಗ ಅವರ ಸಮಸ್ಯೆಗಳನ್ನು ದಿನದೊಳಗೆ ಬಗೆ ಹರಿಸುತ್ತೀರ. ಆದರೆ ಮಲೆನಾಡಿನ ರೈತರ ವಿಚಾರದಲ್ಲಿ ಏಕೆ ಬಹಳಷ್ಟು ಉದಾಸೀನ ತೋರುತ್ತೀರಿ ಎಂದು ಪ್ರಶ್ನಿಸಿದ ಅವರು ಇದೇ ರೀತಿ ಮಲೆನಾಡು ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾ ಹೋದರೆ ನಾವು ಇದರ ಬಗ್ಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
