KARNATAKA NEWS/ ONLINE / Malenadu today/ Aug 6, 2023 SHIVAMOGGA NEWS
ಸ್ಟಾಫ್ ಸೆಲೆಕ್ಷನ್ ಕಮೀಷನ್ ಕೇಂದ್ರ ನೇಮಕಾತಿ ಪ್ರಾಧಿಕಾರವು ದೆಹಲಿ ಪೊಲೀಸ್ ಪಡೆಗಳಲ್ಲಿ ಸಬ್-ಇನ್ಸ್ಪೆಕ್ಟರ್ ಮತ್ತು ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ವೆಬ್ಸೈಟ್ https://ssc.nic.in/ ಆನ್ಲೈನ್ ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಬ್-ಇನ್ಸ್ಪೆಕ್ಟರ್ ಹುದ್ದೆಗಳಿಗೆ 20 ರಿಂದ 25 ವರ್ಷ ಮತ್ತು ಇಂಜಿನಿಯರ್ ಹುದ್ದೆಗಳಿಗೆ 30 ರಿಂದ 32 ವರ್ಷ ನಿರ್ದಿಷ್ಠ ವಯೋಮಿತಿ ಹೊಂದಿರುವ, ಮಾನ್ಯತೆ ಪಡೆದ ಮಂಡಳಿಯಿಂದ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಆನ್ಲೈನ್ ನೊಂದಣಿಗೆ ಸಬ್-ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆಗಸ್ಟ್ 15 ಮತ್ತು ಇಂಜಿನಿಯರ್ ಹುದ್ದೆಗಳಿಗೆ ಆಗಸ್ಟ್ 16 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080-25502520 ಅನ್ನು ಸಂಪರ್ಕಿಸಬಹುದಾಗಿದೆ
ತೀರ್ಥಹಳ್ಳಿ ಶಿಕಾರಿ ಶೂಟ್! ಪೊಲೀಸರು ದಾಖಲಿಸಿದ್ರು ಸುಮೋಟೋ ಕೇಸ್! ಎಫ್ಐಆರ್ನಲ್ಲಿ ಏನಿದೆ!? ನಡೆದಿದ್ದೇನು?
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ದಾಸನಗದ್ದೆ ಹಿರೆಗದ್ದೆ ಗ್ರಾಮದ ಸಮೀಪ ನಡೆದಿದ್ದ ಶಿಕಾರಿ ಶೂಟ್ ಪ್ರಕರಣ ಸಂಬಂದ ಪೊಲೀಸರು ಸುಮೋಟೋ ಕೇಸ್ ದರ್ಜ್ ಮಾಡಿದ್ದಾರೆ. ಈ ಸಂಬಂಧ : IPC 1860 (U/s-341,323,504,506) ಅಡಿಯಲ್ಲಿ ಕೇಸ್ ಆಗಿದೆ.
ಎಫ್ಐಆರ್ನಲ್ಲಿ ಏನಿದೆ?
ತೀರ್ಥಹಳ್ಳಿ ಪೊಲೀಸರು ದಾಖಲಿಸಿರುವ ಎಫ್ಐಆರ್ ನ ಪ್ರಕಾರ, ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ ಪಿಸಿ ಟೌನ ಕೊಪ್ಪ ಸರ್ಕಲ್ ಬಳಿಯಲ್ಲಿ, ಮಾಹಿತಿ ಸಂಗ್ರಹಣೆಯಲ್ಲಿದ್ಧಾಗ, ಅವರಿಗೆ ಶಿಕಾರಿಯ ಮಾಹಿತಿ ಲಭ್ಯವಾಗಿದ್ದು, ಗುಂಡು ತಗಲಿರುವ ವಿಚಾರ ಗೊತ್ತಾಗಿದೆ. ತಕ್ಷಣವೇ ಅವರು, ತೀರ್ಥಹಳ್ಳಿ, ಸರ್ಕಾರಿ ಜೆಸಿ, ಆಸ್ಪತ್ರೆಗೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಗಾಯಾಳು ಮಾಹಿತಿ ನೀಡಿದ್ಧಾರೆ.
ನಡೆದಿದ್ದೇನು?
ಎಫ್ಐಆರ್ನಲ್ಲಿ ಇರುವಂತೆ ರಾಕೇಶ್ ಹಾಗೂ ರಾಜೇಶ್ ಎಂಬ ಅಣ್ಣತಮ್ಮ ಕಾಡುಹಂದಿಯ ಶಿಕಾರಿಗೆ ಹೋಗಿದ್ದು, ದಾಸನಗದ್ದೆ ಬಳಿ ಕಾಣಿಸಿದ ಹಂದಿಗೆ ಗುಂಡು ಹೊಡೆದಿದ್ದಾರೆ. ಈ ವೇಳೆ ರಾಕೇಶ್ ಹೊಡೆದ ಗುಂಡು ಹಂದಿಗೆ ಬೀಳದ ಹಿನ್ನೆಲೆ ರಾಜೇಶ್ ಗುಂಡು ಹಾರಿಸಿದ್ಧಾರೆ. ಆದರೆ ಹಂದಿಗೆ ಗುಂಡು ಬೀಳುವ ಬದಲು ರಾಕೇಶ್ರ ಕಾಲಿಗೆ ಗುಂಡು ಬಿದ್ದಿದೆ ಎಂದು ಆರೋಪಿಸಲಾಗಿದೆ. ಸದ್ಯ ಈ ವಿಚಾರದ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.
ಇನ್ನಷ್ಟು ಸುದ್ದಿಗಳು
ತಾಯಿ ಜಗನ್ಮಾತೆ ಈ ಸುಂದರನ ಸರ್ವಾಂಗ ಸುಂದರನಾಗಿ ಮಾಡುವಳೇ!? ವೈರಲ್ ಆಯ್ತು ಹರಕೆ!
ಭದ್ರಾವತಿ ಭದ್ರಗಿರಿ, ಶಿವಮೊಗ್ಗ ಗುಡ್ಡೆಕಲ್ ಆಡಿ ಕೃತ್ತಿಕೆ ಜಾತ್ರೆ! ಯಾವಾಗ ಗೊತ್ತ ಭರಣಿ ಕಾವಡಿ ಉತ್ಸವ?
