police fire in bhadravati ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿ ಪೇಟೆಯಲ್ಲಿ ನಿನ್ನೆ ಸೋಮವಾರ ನಡೆದಿದ್ದ ಕೊಲೆ ಪ್ರಕರಣದ ಸಂಬಂಧ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಫೈರ್ ಮಾಡಿದ್ದಾರೆ. ನಿನ್ನೆ ದಿನ ಭದ್ರಾವತಿಯಲ್ಲಿ ಕ್ರಿಕೆಟ್ ವಿಚಾರಕ್ಕೆ ಓರ್ವನ ಕೊಲೆಯಾಗಿದ್ದು, ಇನ್ನೊಬ್ಬನಿಗೆ ಗಂಭೀರವಾಗಿ ಗಾಯಗೊಂಡಿದ್ದ. ಸಂಜೆ ಇಲ್ಲಿನ ಯುವಕರ ಗುಂಪು, ಕ್ರಿಕೆಟ್ ಆಡಿದ್ದು, ಆನಂತರ ಕ್ರಿಕೆಟ್ನಲ್ಲಿನ ವಿಚಾರವೊಂದಕ್ಕೆ ಪರಸ್ಪರ ಕಿತ್ತಾಡಿದ್ದರು. ಈ ವಿಷಯ ಅಲ್ಲಿಗೆ ಮುಗಿದಿತ್ತಾದರೂ, ಒಂದು ಗುಂಪು ಪುನಃ ರಾತ್ರಿ ಮಾತನಾಡಬೇಕು ಎಂದು ಕರೆದು ತಗಾದೆ ತೆಗೆದು ಅರುಣ್ ಹಾಗೂ ಸಂಜಯ್ ಎಂಬಾತನ ಮೇಲೆ ಹಲ್ಲೆ ಮಾಡಿದೆ. ಈ ವೇಳೆ ಭರ್ಚಿಯಿಂದ ಇರಿದಿದ್ದು, ಘಟನೆಯಲ್ಲಿ ಅರುಣ್ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಸಂಜಯ್ ಗಂಭೀರವಾಗಿ ಗಾಯಗೊಂಡಿದ್ದ. ಇದೀಗ ಪ್ರಕರಣದ ಸಂಬಂಧ ಅರುಣ್ ಕುಮಾರ್ (19) ಎಂಬಾತನ ಕಾಲಿಗೆ ಹೊಸಮನೆ ಠಾಣೆ ಪಿಎಸ್‌ಐಯವರು ಗುಂಡು ಹಾರಿಸಿದ್ದಾರೆ. ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ರವರು, ಮಾಹಿತಿ ನೀಡಿದ್ದು, ಆರೋಪಿ ಅರುಣ್ ಕುಮಾರ್ ವಿರುದ್ಧ ಐದು ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.
police fire in bhadravati / ಭದ್ರಾವತಿಯಲ್ಲಿ ಮತ್ತೆ ಹಾರಿದ ಪೊಲೀಸ್ ಗುಂಡು! / ಆರೋಪಿಗೆ ಗಾಯ
Leave a Comment
