bhadravati crime news | ಕ್ರಿಕೆಟ್​ ಕಿರಿಕ್​, ಮಾತಿಗೆ ಕರೆದು ಕೊಂದರು! ನಡೆದಿದ್ದೇನು?

Malenadu Today

bhadravati crime news / ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಕ್ರಿಕೆಟ್ ವಿಚಾರಕ್ಕೆ ಓರ್ವನ ಕೊಲೆಯಾಗಿದ್ದು, ಇನ್ನೊಬ್ಬನಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ ಇಲ್ಲಿನ ಯುವಕರ ಗುಂಪು, ಕ್ರಿಕೆಟ್ ಆಡಿದ್ದು, ಆನಂತರ ಕ್ರಿಕೆಟ್​ನಲ್ಲಿನ ವಿಚಾರವೊಂದಕ್ಕೆ ಪರಸ್ಪರ ಕಿತ್ತಾಡಿದ್ದಾರೆ. ಈ ವಿಷಯ ಅಲ್ಲಿಗೆ ಮುಗಿದಿತ್ತಾದರೂ, ಒಂದು ಗುಂಪು ಪುನಃ ರಾತ್ರಿ ಮಾತನಾಡಬೇಕು ಎಂದು ಕರೆದು ತಗಾದೆ ತೆಗೆದು ಅರುಣ್ ಹಾಗೂ ಸಂಜಯ್​ ಎಂಬಾತನ ಮೇಲೆ ಹಲ್ಲೆ ಮಾಡಿದೆ. ಈ ವೇಳೆ ಭರ್ಚಿಯಿಂದ ಇರಿದಿದ್ದು, ಘಟನೆಯಲ್ಲಿ ಅರುಣ್ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಸಂಜಯ್ ಗಂಭೀರವಾಗಿ ಗಾಯಗೊಂಡಿದ್ದಾನೆ. 

bhadravati crime news/ ಎಸ್​ಪಿ ಮಿಥುನ್ ಕುಮಾರ್

ಈ ಬಗ್ಗೆ ಮಾಧ್ಯಮ ವಾಟ್ಸಾಪ್​ ಗ್ರೂಪ್​ನಲ್ಲಿ ಸಂದೇಶ ನೀಡಿರುವ ಎಸ್​ಪಿ ಮಿಥುನ್ ಕುಮಾರ್, ಕ್ರಿಕೆಟ್ ವಿಚಾರಕ್ಕೆ ಈ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಇನ್ನಷ್ಟು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Share This Article