Foot Patrolling | ಶಿವಮೊಗ್ಗದ ಎರಿಯಾಗಳಲ್ಲಿ ಲಾಠಿ ಹಿಡಿದು ಪೊಲೀಸರ ಬೀಟ್! 33 ಕೇಸ್​ ಫಿಟ್​!

Malenadu Today

Shivamogga | Feb 5, 2024 |  ಶಿವಮೊಗ್ಗದಲ್ಲಿ ಪೊಲೀಸರು Foot Patrolling ಮುಂದುವರಿಸಿದ್ದಾರೆ. ಮೊನ್ನೆಯಷ್ಟೆ ಹಳೇ ಶಿವಮೊಗ್ಗ ಭಾಗದಲ್ಲಿ ಪೂಟ್ ಪೆಟ್ರೋಲಿಂಗ್ ನಡೆಸಿದ್ದ ಶಿವಮೊಗ್ಗ ಪೊಲೀಸರು ನಿನ್ನೆ  ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಎಂ ಕೆ ಕೆ ರಸ್ತೆ, ಆರ್‌ಎಂಎಲ್ ನಗರ ಟೆಂಪೋಸ್ಟ್ಯಾಂಡ್, ಟಿಪ್ಪು ನಗರ, ಗೋಪಾಲ ಗೌಡ ಬಡಾವಣೆಯಲ್ಲಿ Foot Patrolling ನಡೆಸಿದ್ದಾರೆ. 

ಇಷ್ಟೆ ಅಲ್ಲದೆ ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಉಷಾ ವೃತ್ತ, ಕೆಇಬಿ ವೃತ್ತ, ಕುಂಸಿಯ ಮಾರಿಕಾಂಬ ದೇವಸ್ಥಾನದ ಹತ್ತಿರ, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಅಂಡರ್ ಬ್ರಿಡ್ಜ್, ಹೊಸ ಸೀಗೆಬಾಗಿ, ಭೋವಿ ಕಾಲೋನಿ, ಹೊಸಮನೆ, ರಂಗಪ್ಪ ವೃತ್ತ, ಬಾರಂದೂರು, ಶಂಕರಘಟ್ಟ, ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಶಿಕಾರಿಪುರ ಟೌನ್ ಅಂಬೇಡ್ಕರ್ ಸರ್ಕಲ್, ಹುಚ್ಚರಾಯ ಸ್ವಾಮಿ ದೇವಸ್ಥಾನದ ಹತ್ತಿರ, ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ನ ಆಜಾದ್ ನಗರ, ಜನ್ನತ್ ನಗರ ಮತ್ತು ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಬಾಳೆ ಬೈಲು ಹಾಗೂ ಮಹಿಷಿಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ನಡೆಸಿದೆ. 

ಜೊತೆಯಲ್ಲಿ ಆಯಾ ಠಾಣಾ ವ್ಯಾಪ್ತಿಗಳ ಹೊರ ವಲಯಗಳಲ್ಲಿ Area Domination ವಿಶೇಷ ಗಸ್ತು ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 33 ಲಘು ಪ್ರಕರಣಗಳನ್ನು ದಾಖಲಿಸಿದ್ದಾರೆ.


Share This Article