Pahalgam Terrorist Attack ಕಾಶ್ಮೀರದಲ್ಲಿ ಭಯೋದ್ಪಾದಕರ ದಾಳಿಗೆ ಬಲಿಯಾದ ಶಿವಮೊಗ್ಗ ಮೂಲದ ಮಂಜುನಾಥ್ ರಾವ್ರವರ ಮೃತ ದೇಹವನ್ನು ಮೆರವಣಿಗೆಯ ಮೂಲಕ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು.

ಪುಷ್ಪಾಲಂಕೃತ ವಾಹನದಲ್ಲಿ ಮೃತ ದೇಹವನ್ನು ಮೆರವಣಿಗೆ ಮೂಲಕ ಕೊಡೊಯ್ಯುವ ಸಂದರ್ಬದಲ್ಲಿ ಅಸಂಖ್ಯ ಹಿಂದೂ ಭಾಂದವರು ಪಾಲ್ಗೊಂಡು ಮಂಜುನಾಥ್ ಅಮರ್ ರಹೇ ಹಾಗೂ ಅಮಾಯಕ ಹಿಂದೂಗಳನ್ನು ಹತ್ಯೆಗೈದ ಪಾಕ್ ಪ್ರಚೋದಿತ ಉಗ್ರಗಾಮಿಗಳ ವಿರುದ್ದ ಘೋಷಣೆ ಕೂಗಿದರು.


ಮೆರವಣಿಗೆ ಸಾಗಿದ ಮಾರ್ಗದ ಇಕ್ಕೆಲಗಳಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ದುಖಃ ಮಡುವುಗಟ್ಟಿತ್ತು. ಮೃತರ ಗೌರವಾರ್ಥ ತಮ್ಮ ವಾಣಿಜ್ಯ ವಹಿವಾಟು ಬಂದ್ ಮಾಡಿ ಸಹಾನುಭೂತಿ ವ್ಯಕ್ತಪಡಿಸಿದರು. ಮೆರವಣಿಗೆಯ ಮುಂಬಾಗದಲ್ಲಿ ಹಿಂದೂ ಬಾಂದವರು ದ್ವಿಚಕ್ರ ವಾಹನಗಳಲ್ಲಿ ಹಾಗು ನಡಿಗೆಯಲ್ಲಿ ಕೇಸರಿ ಬಾವುಟ ಹಿಡಿದು ಘೋಷಣೆ ಮೊಳಗಿಸುತ್ತಾ ರೋಟರಿ ಚಿತಾಗಾರದ ವರೆಗೂ ಸಾಗಿದರು.

