Missing case today : ಈ ಯುವತಿಯ ಬಗ್ಗೆ ಸುಳಿವು ಸಿಕ್ಕರೆ ಪೊಲೀಸರಿಗೆ ತಿಳಿಸಿ | ಎಡಕೈ ಮೇಲಿದೆ MOM DAD ಹಚ್ಚೆ

ಹಂಚಿಕೊಳ್ಳಿ
WhatsApp Facebook X Telegram
Missing case today
ಬ್ರಹ್ಮಾವರಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದ ಯುವತಿ ನಾಪತ್ತೆಯಾಗಿದ್ದಾಳೆ.

Missing case today | ಬ್ರಹ್ಮಾವರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ19 ವರುಷದ ಯುವತಿಯೊಬ್ಬಳು ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಪೊಲೀಸ್ ಇಲಾಖೆ ಪ್ರಕಟಣೆಯ ನೀಡಿದ್ದು, ಯುವತಿಯ ಪತ್ತೆಗೆ ಸಾರ್ವಜನಿಕರ ನೆರವು ಕೋರಿದ್ದಾರೆ. ಪೊಲೀಸ್ ಪ್ರಕಟಣೆಯ ಸಾರಾಂಶ ಹೀಗಿದೆ. 

Missing case today | ಹೊನ್ನೆತಾಳು ಯುವತಿ ನಾಪತ್ತೆ

ಶಿವಮೊಗ್ಗ ಪೊಲೀಸ್ ಇಲಾಖೆ ಈ ಪ್ರಕಟಣೆಯನ್ನು ನೀಡಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೊನ್ನೆತಾಳು ಗ್ರಾಮದ ನಿವಾಸಿ ಯುವತಿ ಪ್ರಿಯಾಂಕಾ ಅಲಿಯಾಸ್ ಪಾರ್ವತಿ ಬ್ರಹ್ಮಾವರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಏಪ್ರಿಲ್​ 21 ರಂದು ಬ್ರಹ್ಮಾವರಕ್ಕೆ ಹೋಗುವುದಾಗಿ ಹೇಳಿ ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೋಗಿದ್ದರು. ಆ ಬಳಿಕ ಅವರು ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ. ಈ ಬಗ್ಗೆ ಪೋಷಕರು ನೀಡಿದ ದೂರಿನನ್ವಯ ಪೊಲೀಸರು ಯುವತಿಗಾಗಿ ಹುಡುಕಾಟ ನಡೆಸ್ತಿದ್ದಾರೆ. 

 

ಎಡಗೈ ಮೇಲಿದೆ ಮಾಮ್ ಡ್ಯಾಡ್ ಹಚ್ಚೆ Missing case today

ಯುವತಿಯು ತೆಳುವಾದ ಮೈಕಟ್ಟು ಹೊಂದಿದ್ದು, 4 ಅಡಿ 5 ಇಂಚು ಎತ್ತರ ಇದ್ದಾಳೆ. ಕೋಲುಮುಖ, ತಲೆಯಲ್ಲಿ ಸುಮಾರು 14 ಇಂಚು ಉದ್ದದ ಕಪ್ಪು ಕೂದಲಿದೆ. ಎಡಕೈ ಮುಂಗೈ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ MOM DAD ಮತ್ತು Priya ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾಳೆ. ಕನ್ನಡ ಮಾತನಾಡಲು, ಓದಲು ಬರೆಯಲು ಬಲ್ಲವಳಾಗಿದ್ದಾಳೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. 

 

ಈ ಯುವತಿ ಪತ್ತೆಯಾದಲ್ಲಿ ಶಿವಮೊಗ್ಗಜಿಲ್ಲೆ :- 08182-261400, ತೀರ್ಥಹಳ್ಳಿ : 08181 – 220388, ಮಾಳೂರು : 9480803333, ಆಗುಂಬೆ :- 9480803314 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor