KARNATAKA NEWS/ ONLINE / Malenadu today/ Apr 25, 2023 GOOGLE NEWS
ಶಿವಮೊಗ್ಗ/ ಶಿವಮೊಗ್ಗದಲ್ಲಿ ಜೆಡಿಎಸ್ ಸೇರುವ ಪ್ರವರ ಮುಂದುವರಿದಿದೆ. ನಿನ್ನೆಯಷ್ಟೆ ಕಾಂಗ್ರೆಸ್ ಹಾಗೂ ಬಿಜೆಪಿಯ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಪಕ್ಷವನ್ನು ಸೇರಿದ್ದರು.
ಇವತ್ತು ಸಂವಿಧಾನ ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ವಕೀಲರು ಎ ಗಂಗಾಧರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಪ್ಪ ಆರ್ ಜೆಡಿಎಸ್ ಪಕ್ಷವನ್ನು ಸೇರಿದ್ದಾರೆ.
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಇವತ್ತು ಬೆಳಗ್ಗೆ ಸುಮಾರು 500 ಮಂದಿ ತಮ್ಮ ಬೆಂಬಲಿಗರೊಡನೆ ಪಕ್ಷದ ಭಾವುಟ ಹಿಡಿದು ಸೇರ್ಪಡೆಗೊಂಡರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಈ ವೇಳೆ ಮಾತನಾಡಿ, 32 ವಾರ್ಡ್ಗಳಲ್ಲಿ ಪಕ್ಷದ ಸಂಘಟನೆ ಕೆಲಸವಾಗುತ್ತಿದೆ. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವರು ಜೆಡಿಎಸ್ ಸೇರುತ್ತಿದ್ದಾರೆ.
ಇವತ್ತು ದೊಡ್ಡ ಸಂಖ್ಯೆಯಲ್ಲಿ ಪಕ್ಷವನ್ನು ಹಲವರು ಸೇರಿದ್ದಾರೆ. ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮವಹಿಸಿ ಎಂದು ನೂತನ ಕಾರ್ಯಕರ್ತರಿಗೆ ಕರೆಕೊಟ್ಟರು.
ಪಕ್ಷ ಸೇರ್ಪಡೆಗೊಂಡ ಗಂಗಾಧರ್ ಮಾತನಾಡಿ, ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ನಗರ ಕ್ಷೇತ್ರದಲ್ಲಿ ವಿಶೇಷವಾಗಿ ಜೆಡಿಎಸ್ಗೆ ಶಕ್ತಿ ತುಂಬಲು ಪಕ್ಷ ಸೇರುತ್ತಿರುವುದಾಗಿ ತಿಳಿಸಿದರು.
ಹಿರಿಯರಾದ ಆಯನೂರು ಮಂಜುನಾಥ್ರವರು, ಶಿವಮೊಗ್ಗ ಶಾಂತಿಗಾಗಿ ಗೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ನಿಂದ ಕೆ.ಬಿ ಪ್ರಸನ್ನಕುಮಾರ್ ಕೂಡ ಜೆಡಿಎಸ್ ಸೇರ್ಪಡೆಗೊಂಡಿದ್ದು, ಪಕ್ಷದ ಕೈ ಬಲಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗದ ಹೊಸಮನೆ, ಶರಾವತಿ ನಗರ, ಗಾಡಿಕೊಪ್ಪ, ಬೊಮ್ಮನಕಟ್ಟೆ, ರಾಗಿಗುಡ್ಡ, ಮಿಲಘಟ್ಟ, ಸೀಗೆಹಟ್ಟಿ, ಕುಂಬಾರಗುಂಡಿ, ವಿದ್ಯಾನಗರ,ಬುದ್ದಾ ನಗರ , ಗೋಪಾಳ ಸೇರಿದಂತೆ ವಿವಿಧ ವಾರ್ಡ್ಗಳ ಕಾರ್ಯಕರ್ತರು ಪಕ್ಷವನ್ನು ಸೇರ್ಪಡೆಗೊಂಡರು.
Read/ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಟೂರಿಸ್ಟ್ ಬಸ್ ಪಲ್ಟಿ! ಓರ್ವರ ಸಾವು/ 20 ಕ್ಕೂ ಹೆಚ್ಚು ಮಂದಿಗೆ ಗಾಯ!
Malenadutoday.com Social media