SHIVAMOGGA | MALENADUTODAY NEWS | ಮಲೆನಾಡು ಟುಡೆ Dec 10, 2024
ಕೆಲವೆ ದಿನಗಳ ಅಂತರದಲ್ಲಿ ಎರಡು ಸುಮುಟೋ ಕೇಸ್ಗಳನ್ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪನವರ ವಿರುದ್ಧ ದಾಖಲಿಸಲಾಗಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ ನನ್ನ ಮೇಲೆ ಒಂದೇ ವಾರದಲ್ಲಿ ಎರಡು ಕೇಸ್ ದಾಖಲಾಗಿದೆ. ಎರಡು ಸಹ ಜಾಮೀನು ರಹಿತ ಪ್ರಕರಣವಾಗಿದೆ. ಇಂತಹ ನೂರು ಎಫ್ ಐ ಆರ್ ಹಾಕಿದರು ನಾನು ಜಗ್ಗಲ್ಲ. ನನ್ನ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ.
ಎಸ್ಡಿಪಿಐ ಬಿಟ್ಟು ತನ್ನ ಹೇಳಿಕೆ ಎಲ್ಲರಿಗೂ ಸಮ್ಮತವಾಗಿದೆ ಎಂದರು. ಅಲ್ಲದೆ ನನ್ನ ಮೇಲೆ ಕೇಸ್ ಹಾಕಬೇಕೆಂದು ಕಾಂಗ್ರೆಸ್ ಸರ್ಕಾರದಿಂದ ಮಾರ್ಗದರ್ಶನ ಬಂತೋ ಅಥವಾ ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಎನ್ ಅನಿಸಿತೋ ಗೊತ್ತಿಲ್ಲ. ಆದರೆ ಕೇಸ್ ದಾಖಲು ಮಾಡಿದ್ದಾರೆ. ಇವತ್ತು ಹೇಳುತ್ತೇನೆ ಬಾಂಗ್ಲಾ ಮುಸ್ಲಿಮರು ಅನ್ನ ಹಾಕಿದವರ ಮೇಲೆ ಕನ್ನಾ ಹಾಕುತ್ತಾರೆ, ಬಾಂಗ್ಲಾ ಮುಸ್ಲಿಮರ ಪರವಾಗಿ ಯಾರು ಸಹ ನಿಲ್ಲಬಾರದು ಎಂದ ಕೆಎಸ್ ಈಶ್ವರಪ್ಪ ಎಷ್ಟು ಕೇಸ್ ಹಾಕಿದರು ಹೆದರುವುದಿಲ್ಲ ಎಂದಿದ್ಧಾರೆ.
SUMMARY | Former Deputy CM KS Eshwarappa reacts to two suo motu cases
KEY WORDS | Former Deputy CM KS Eshwarappa reacts , suo motu cases