SHIVAMOGGA | MALENADUTODAY NEWS | ಮಲೆನಾಡು ಟುಡೆ Feb 11, 2025
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಸೀಗೇಬಾಗಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ತಡೆದ ಮಹಿಳಾ ಅಧಿಕಾರಿ ವಿರುದ್ಧ ಅಶ್ಲೀಲ ನಿಂದನೆ ಬೆದರಿಕೆ ಹಾಕಿದ ವಿಡಿಯೋ ಪ್ರಕರಣದಲ್ಲಿ ಇವತ್ತು ಅಧಿಕಾರಿ ಜ್ಯೋತಿ ದೂರು ನೀಡಿದ್ದಾರೆ. ಇದರ ಬೆನ್ನಲ್ಲೆ ಮೂವರನ್ನ ಭದ್ರಾವತಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣ ಬೇರೆಯದ್ದೆ ಹಾದಿ ಹಿಡಿಯುತ್ತಿರುವ ಆರೋಪ ಕೇಳಿ ಬರುತ್ತಿರುವ ನಡುವಲ್ಲೆ ಭದ್ರಾವತಿ ಪೊಲೀಸರು ದೀಢಿರ್ ಆಗಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ಪೈಕಿ ಚನ್ನಗಿರಿ ಹಾಗೂ ಹಾಸನ ಜಿಲ್ಲೆ ಅರಕಲಗೂಡು ನಿವಾಸಿಯು ಇದ್ದಾರೆ. ಜ್ಯೋತಿ ದೂರು ನೀಡಿದ ಬೆನ್ನಲ್ಲೆ ಪೊಲೀಶರು ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ನಿವಾಸಿಯಾದ ರವಿ (30), ಹಾಸನ ಜಿಲ್ಲೆಯ ಅರಕಲಗೋಡಿನ ವರುಣ್ (34) ಸುರೇಂದ್ರ ಗೌಡ ಕ್ಯಾಂಪ್ ನ ಅಜಯ್ (28) ಎಂಬುವರನ್ನ ಬಂಧಿಸಿದ್ದಾರೆ ಎನ್ನಲಾಗುತ್ತಿದೆ.
ಇಡೀ ಪ್ರಕರಣದಲ್ಲಿ ವಿಡಿಯೋ ದೃಶ್ಯಾವಳಿಯಲ್ಲಿರುವ ಆಡಿಯೋ ಎಂಎಲ್‌ಎ ಮಗನದ್ದೇ ಎಂಬುದನ್ನಾಗಲಿ, ಅಥವಾ ಯಾವ ಎಂಎಲ್‌ಎ ಮಗ ತಮಗೆ ಬೆದರಿಕೆ ಹಾಕಿದ್ದಾನೆ ಎಂಬ ವಿಚಾರವನ್ನಾಗಲಿ ಜ್ಯೋತಿಯವರು ತಮ್ಮ ದೂರಿನಲ್ಲಿ ಖಚಿತ ಪಡಿಸಿಲ್ಲ. ಆ ಧ್ವನಿ ಯಾರದ್ದು ಎಂಬುದನ್ನು ತನಿಖೆ ನಡೆಸುವ ಹೊರೆಯನ್ನು ಭದ್ರಾವತಿ ಪೊಲೀಸರ ಮೇಲೆ ಇದೀಗ ಬಿದ್ದಿದೆ. ಈ ನಿಟ್ಟಿನಲ್ಲಿ ತನಿಖೆ ನೈಜತೆಯಿಂದ ನಡೆದರೆ ಮಾತ್ರ ಪ್ರಕರಣ ಸರಿಯಾದ ರೂಪದಲ್ಲಿ ಇತ್ಯರ್ಥಗೊಳ್ಳಲಿದೆ.
SUMMARY | bhadravathi old town case , Viral video of abusive phone call to government official, Viral video of mla son, abusive phone call of mla son,
KEY WORDS | bhadravathi old town case , Viral video of abusive phone call to government official, Viral video of mla son, abusive phone call of mla son,