ಹಳೆನಗರದಲ್ಲಿ ಕಂಪ್ಲೆಂಟ್ ಕೊಟ್ಟ ಜ್ಯೋತಿ | ನಿಂದನೆ ಬೆದರಿಕೆ ಕೇಸ್‌ನಲ್ಲಿ ಎಫ್ ಐ ಆರ್ ದಾಖಲಾಗಿದ್ದು ಯಾರ ವಿರುದ್ದ ಗೊತ್ತಾ?
An FIR has been registered at Bhadravathi taluk police station for allegedly abusing and threatening a woman officer of the mines and geology department at Seegebagi in Bhadravathi taluk of Shimoga district.

SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 11, 2025
ಶಿವಮೊಗ್ಗ | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಸೀಗೇಬಾಗಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ನಿಂದಿಸಿ, ಬೆದರಿಕೆ ಹಾಕಿದ ಆರೋಪ ಸಂಬಂಧ ಭದ್ರಾವತಿ ತಾಲ್ಲೂಕು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಪ್ರಕರಣದ ಸಂಬಂಧ ಅಧಿಕಾರಿ ಜ್ಯೋತಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಅಧಿಕಾರಿಯ ಕರ್ತವ್ಯ ನಿರ್ವಹಣೆಯ ಅಡ್ಡಿ, ಬೆದರಿಕೆ ಹಾಗೂ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದರೆ, ಮಹಿಳೆಗೆ ಅಶ್ಲೀಲ ನಿಂದನೆ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ಬಿಎನ್‌ಎಸ್ ಕಾಯ್ದೆಯ ಅಡಿಯಲ್ಲಿ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕೇಸ್ ದಾಖಲಾದ ಬಳಿಕ ಮಾತನಾಡಿದ ಅಧಿಕಾರಿ ಜ್ಯೋತಿ ಅಂದು ರಾತ್ರಿ ರೇಡ್ ನಡೆದಾಗ ನಮ್ಮ ಮೇಲೆ ದಾಳಿ ಮಾಡುವ ಸನ್ನಿವೇಶ ಎದುರಾಗಿತ್ತು. ಕೆಲವರು ನಮ್ಮನ್ನು ನಿಂದಿಸಿದರು, ಆ ನಂತರ ಫೋನ್ ಕಾಲ್‌ನಲ್ಲಿ ಬೆದರಿಸಿದರು. ಈ ವಿಚಾರವಾಗಿ ದೂರು ನೀಡಿದ್ದೇನೆ. ಮೊಬೈಲ್ ಕಾಲ್‌ನಲ್ಲಿ ಇರುವ ಸ್ವರ ಯಾರದ್ದು ಎಂಬುದು ಗೊತ್ತಿಲ್ಲ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಹಳೆ ನಗರದಲ್ಲಿ ಕಂಪ್ಲೇಂಟ್ ಕೊಟ್ಟ ಜ್ಯೋತಿ | ನಿಂದನೆ ಬೆದರಿಕೆ ಕೇಸ್ ನಲ್ಲಿ ಎಫ್ ಐ ಆರ್ ದಾಖಲಾಗಿದ್ದು ಯಾರವಿರುದ್ದ..? pic.twitter.com/KBlE804Xhm — Prathap Prathap shetty (@Prathap68840568) February 11, 2025
SUMMARY | An FIR has been registered at Bhadravathi taluk police station for allegedly abusing and threatening a woman officer of the mines and geology department at Seegebagi in Bhadravathi taluk of Shimoga district.
KEYWORDS | FIR, Shimoga, Bhadravathi, geology,