ಶಿವಮೊಗ್ಗ : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 03 ರಂದು ಎಂಗೇಜ್ಮೆಂಟ್ಗೆಂದು ಹೋಗಿದ್ದ ತಾಯಿ ಮಗಳು ಇಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಈ ಹಿನ್ನೆಲೆ ನಾಪತ್ತೆಯಾದವರು ಎಲ್ಲಾದರು ಕಂಡರೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಗೆ, ಚಿಲಕಾದ್ರಿ ವಾಸಿ ಅವಿನಾಶ್ ಎಂಬುವವರ ಪತ್ನಿ 32 ವರ್ಷದ ವೀಣಾ ಎಂಬುವವರು ತನ್ನ 7 ವರ್ಷದ ಮಗಳು ಚೈತನ್ಯಳನ್ನು ಕರೆದುಕೊಂಡು ಡಿ. 03 ರಂದು ಮನೆಯಿಂದ ಎಂಗೆಜ್ಮೆಂಟ್ಗೆ ಹೋದವರು ಈವರೆಗೆ ಮನೆಗೆ ವಾಪಾಸ್ಸಾಗಿರುವುದಿಲ್ಲ.
ವೀಣಾರ ಚಹರೆ; 5 ಅಡಿ ಎತ್ತರ, ದುಂಡುಮುಖ, ಬಿಳಿ ಮೈಬಣ್ಣ, ದೃಢಕಾಯ ಮೈಕಟ್ಟು ಹೊಂದಿದ್ದು, ಎಡಕಣ್ಣಿನ ಹುಬ್ಬಿನ ಹತ್ತಿರ ಕಪ್ಪು ಮಚ್ಚೆ ಇರುತ್ತದೆ. ಮನೆಯಿಂದ ಹೋಗುವಾಗ ಆಕಾಶ್ ನೀಲಿ ಬಣ್ಣದ ಡ್ರೆಸ್ ಧರಿಸಿರುತ್ತರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಚೈತನ್ಯಾಳ ಚಹರೆ: 3.5 ಅಡಿ ಎತ್ತರ, ಕೋಲುಮುಖ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ನೀಲಿ ಬಣ್ಣದ ಫ್ರಾಕ್ ಧರಿಸಿರುತ್ತಾರೆ.ಈ ತಾಯಿ-ಮಗಳ ಕುರಿತು ಸುಳಿವು ದೊರೆತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂ.ಸಂ.: 08182-261400/261418/9480803332/9480803350 ಗಳನ್ನು ಸಂಪರ್ಕಿಸುವುದು.
Missing Alert Mother and Daughter Gone Missing
