ಅತ್ತಿಗೆ ಜೊತೆ ಮೈದುನನ ಸಲುಗೆ ಸಹಿಸದ ಅಣ್ಣ! ತಮ್ಮನನ್ನೆ ಕೊಂದು ಪೊಲೀಸರ ಬಳಿಯೇ ನಾಪತ್ತೆ ಕಥೆ ಕಟ್ಟಿದ! ತೋಟದ ಸಮಾದಿ ರಹಸ್ಯ ಹೊರಬಂದಿದ್ದೇಗೆ? ಎಸ್​ಪಿ ಏನಂದ್ರು ಓದಿ

ajjimane ganesh

Soraba Muder Case ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಹೆಂಡತಿಯ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಅಣ್ಣನೊಬ್ಬ ತನ್ನ ತಮ್ಮನನ್ನೇ ಕೊಲೆಮಾಡಿ ಹೂತುಹಾಕಿದ ಘಟನೆ ಸೊರಬ ತಾಲೂಕಿನ ಜೇಡಗೇರಿ ಗ್ರಾಮದ ಮಂಜುನಾಥ್ ಅವರ ತೋಟದಲ್ಲಿ ನಡೆದಿದೆ.ಆನವಟ್ಟಿ ಹೋಬಳಿ ಕಾನುಕೊಪ್ಪ ಹೊಸೂರು ಗ್ರಾಮದ ರಾಮಚಂದ್ರ (30) ಕೊಲೆಯಾದವ. ಆತನ ಹಿರಿಯ ಸಹೋದರ ಮಾಲತೇಶ್ ಕೊಲೆ ಆರೋಪಿ.

ಪುತ್ರ ರಾಮಚಂದ್ರ ಕಳೆದ ಸೆಪ್ಟೆಂಬರ್​ 8 ರಂದು ಮನೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಕೆಲವು ದಿನಗಳ ನಂತರ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪ್ರಕರಣದಲ್ಲಿ ಕಾಣೆಯಾದವ ಪತ್ತೆಯಾಗಿರಲಿಲ್ಲ. ಆದಾಗ್ಯು ಅನುಮಾನ ಬಲವಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯ ಜಾಡು ಬದಲಿಸಿದ್ದರು. ಅಲ್ಲದೆ ಪ್ರಕರಣದಲ್ಲಿ ಸಾಕಷ್ಟು ಸಂಶಯಗಳು ಮೂಡಿದ ಹಿನ್ನೆಲೆಯಲ್ಲಿ ರಾಮಚಂದ್ರರವರ ಸಹೋದರ ಮಾಲತೇಶ್ ರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. 

ನಾಯಕನಹಟ್ಟಿ ದೇಗುಲದಲ್ಲಿ ಕಳೆದಿದ್ದನ್ನ ಭಕ್ತರೇ ಹುಡುಕಿದರು! ಸಾಗರ ನಿವಾಸಿಯ 40 ಗ್ರಾಮ್​ ಚಿನ್ನದ ಕಥೆಯಿದು!

ಯಾವಾಗ ಪೊಲೀಸರ ವಿಚಾರಣೆಯು ಜೋರಾಯ್ತೋ ಮಾಲ್ತೇಶ್​ ನಡೆದಿದ್ದನ್ನು ಪೊಲೀಸರ ಎದುರು ಬಾಯಿಬಿಟ್ಟಿದ್ದಾನೆ.  ತಮ್ಮ ರಾಮಚಂದ್ರ ತನ್ನ ಪತ್ನಿ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದೇ ಕಾರಣಕ್ಕೆ ಆತನನ್ನು ಕೊಲೆ ಮಾಡಿರುವುದಾಗಿ ಆರೋಪಿ ಮಾಲತೇಶ್ ಒಪ್ಪಿಕೊಂಡಿದ್ದಾನೆ.

Soraba Muder Case
Soraba Muder Case

ಅಡಿಕೆ ದರದಲ್ಲಿ ಮತ್ತೆ ಸುಗ್ಗಿ: ಶಿವಮೊಗ್ಗ, ಸಿದ್ಧಾಪುರ, ಚಿತ್ರದುರ್ಗ ಸೇರಿ ಹಲವು ಮಾರ್ಕೆಟ್​ಗಳಲ್ಲು ಜೋರು ವಹಿವಾಟು! ಎಷ್ಟಿದೆ ರೇಟು

ಜೇಡಗೇರಿ ಗ್ರಾಮದಲ್ಲಿ ಮಂಜುನಾಥ್ ಅವರ ತೋಟ ಕಾಯಲು ಮಾಲತೇಶ್ ಹಾಗೂ ಅವರ ಹೆಂಡತಿ ನೆಲೆಸಿದ್ದರು.  ಆರೋಪಿ ತನ್ನ ತಮ್ಮನನ್ನು ಕೊಲೆ ಮಾಡಿ ಹೂತು ಹಾಕಿದ್ದ. ಯಾವುದೋ ಕಾರ್ಯಕ್ರಮವೊಂದನ್ನು ನಿಮಿತ್ತಮಾಡಿ ರಾಮಚಂದ್ರರನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಆರೋಪಿ ಆತನನ್ನು ಕೊಲೆ ಮಾಡಿ ಹೂತು ಹಾಕಿದ್ದ. ಇನ್ನೂ ನಿನ್ನೆ  ಮಂಗಳವಾರ ಪೊಲೀಸರು ಆಡಳಿತ ವ್ಯವಸ್ಥೆಯ ಸಮಕ್ಷಮದಲ್ಲಿ ಕಳೇಬರ ಹೊರತೆಗೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಿದ್ದಾರೆ. 

Soraba Muder Case
Soraba Muder Case

 

ಎಸ್​ಪಿ ಮಿಥುನ್ ಕುಮಾರ್ ಸಹ ಈ ಬಗ್ಗೆ ಮಾತನಾಡಿದ್ದು, ತನ್ನ ತಮ್ಮನನ್ನು ಕೊಲೆ ಮಾಡಲು ಒಂದು ತಿಂಗಳ ಹಿಂದೆಯೆ ಪ್ರೀಪ್ಲಾನ್​ ಮಾಡಿಕೊಂಡಿದ್ದ ಅಣ್ಣ ಮಾಲ್ತೇಶ್​, ಆತನಿಗೆ ತನ್ನ ಪತ್ನಿಯ ಜೊತೆಗೆ ಸಲುಗೆಯಿಂದ ಇರಬೇಡ ಎಂದು ಹಲವು ಸಹ ಎಚ್ಚರಿಕೆಯನ್ನು ನೀಡಿದ್ದ. ಆದರೆ ರಾಮಚಂದ್ರ ಅಣ್ಣ ಮಾತನ್ನ ಕೇಳಿಲ್ಲ. ಇದೇ ಕಾರಣಕ್ಕೆ ಕೊಲೆ ಮಾಡಲು ತೀರ್ಮಾನಿಸಿದ ಮಾಲ್ತೇಶ್​, ರಾಮಚಂದ್ರನಿಗೆ ಮದುವೆ ಮಾಡುವ ಪ್ರಸ್ತಾಪ ಮಾಡುತ್ತಾನೆ. ಅಲ್ಲದೆ, ಮದುವೆ ಮಾಡಿಸಲು ಸ್ವಾಮೀಜಿಯವರು ಪೂಜೆ ಹೇಳಿದ್ದಾರೆ ಎಂದು ರಾಮಚಂದ್ರನನ್ನು ಯಾಮಾರಿಸಿದ್ದಾನೆ. ಅಲ್ಲದೆ ಒಂದೆರೆಡು ಭಾರಿ ಸ್ವಾಮೀಜಿಯನ್ನು ಭೇಟಿ ಮಾಡಿಸಿ, ಅವರು ಹೇಳಿದ ಪೂಜೆಯನ್ನು ಮಾಡಿಸುತ್ತಾನೆ. ಕೊನೆಯಲ್ಲಿ ಇನ್ನೊಂದು ಪೂಜೆ ಮಾಡಬೇಕು ಎಂದು ಹೇಳಿ ಸೊರಬ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಂಜುನಾಥ್​ ಎನ್ನುವರಿಗೆ ಸೇರಿದ ತೋಟಕ್ಕೆ ತನ್ನ ತಮ್ಮನನ್ನು ಕರೆಸಿಕೊಳ್ಳುತ್ತಾನೆ. ಅಲ್ಲಿ ಆತನಿಗೆ ವಿಪರೀತ ಕುಡಿಸಿ ಕೈ ಕಾಲು ಕಟ್ಟಿ ಹಾಕಿ ಕೊಲೆ ಮಾಡುತ್ತಾನೆ. ಆನಂತರ ಆ ಮೊದಲೇ ತೆಗೆದಿದ್ದ ಗುಂಡಿಯಲ್ಲಿ ರಾಮಚಂದ್ರನನ್ನು ಹೂತು ಹಾಕಿದ ಮಾಲ್ತೇಶ್​ ಮರುದಿನ ಒಂದಿಬ್ಬರು ಕೆಲಸಗಾರರನ್ನು ಕರೆದು ತಂದು ಗುಂಡಿಯನ್ನು ಪೂರ್ಣವಾಗಿ ಮುಚ್ಚಿದ್ದ.

Soraba Muder Case
Soraba Muder Case

ಇಷ್ಟೆ ಅಲ್ಲದೆ, ತಾನೆ ಖುದ್ದಾಗಿ ಬಂದು ಪೊಲೀಸ್ ಠಾಣೆಯಲ್ಲಿ ತನ್ನ ತಮ್ಮ ಕಾಣುತ್ತಿಲ್ಲ. ಆತನಿಗೆ ಮದುವೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದೇವು. ಹಾಗೆ ಹೀಗೆ ಎನ್ನುತ್ತಾ ತಮ್ಮನ ಪರವಾಗಿ ಮಾತನಾಡಿ ಕಂಪ್ಲೇಂಟ್ ನೀಡಿದ್ದ. ಈ ನಿಟ್ಟಿನಲ್ಲಿ ಪೊಲೀಸರು ಉತ್ತಮವಾಗಿ ಕೆಲಸ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಸ್​ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ವಿಶೇಷ ಅಂದರೆ,   ಕಂಪ್ಲೇಂಟ್ ಕೊಟ್ಟ ಕೆಲ ದಿನಗಳ ನಂತರವೂ ಪದೇ ಪದೇ ಪೊಲೀಸ್ ಠಾಣೆಗೆ ಬರುತ್ತಿದ್ದ ಮಾಲ್ತೇಶ್  ಪೊಲೀಸರ ಬಳಿ ರಾಮಚಂದ್ರನ ಹುಡುಕಾಟದ ಬಗ್ಗೆ ಎನಾಯ್ತು ಅಂತಾ ವಿಚಾರಿಸುತ್ತಿದ್ದ. ಇದರ ಬಗ್ಗೆ ಅನುಮಾನಗೊಂಡ ಸೊರಬ ಪೊಲೀಸರಿಗೆ ಮಾಲ್ತೇಶ್​ ಈಸ್ ಸಸ್ಪೆಕ್ಟ್ ಅಂತಾ ಅನಿಸಿದೆ. ಹಾಗನಿಸಿದ ತಕ್ಷಣವೇ ಆತನ ಪೂರ್ವಪರ ಓಡಾಟ ಮತ್ತು ರಾಮಚಂದ್ರನ ನಡುವಿನ ಸಂಬಂಧ ಸೇರಿದಂತೆ ಇತರೆ ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿದ್ದಾರೆ.

ಸಂಶಯ ನಿಕ್ಕಿಯಾಗುತ್ತಲೆ ಏನಪ್ಪ ಮಾಲ್ತೇಶ ಅಂತಾ ಪೊಲೀಸರು ವಿಚಾರಿಸಿದ್ದರು. ಆಗ ಮಾಲ್ತೇಶ್​ ನಡೆದಿದ್ದನ್ನೆಲ್ಲಾ ಬಾಯ್ಬಿಟ್ಟಿದ್ದ. ಅಂತಿಮವಾಗಿ ಪೊಲೀಸರು ಒಂದುವರೆ ತಿಂಗಳ ಬಳಿಕ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.

Soraba Muder Case
Soraba Muder Case

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, Soraba Muder Case

ಹೃದಯಾಘಾತದಿಂದ ಹೊಸನಗರದ ಯುವಕ ಬಲಿ 

Share This Article