ನಾಯಕನಹಟ್ಟಿ ದೇಗುಲದಲ್ಲಿ ಕಳೆದಿದ್ದನ್ನ ಭಕ್ತರೇ ಹುಡುಕಿದರು! ಸಾಗರ ನಿವಾಸಿಯ 40 ಗ್ರಾಮ್​ ಚಿನ್ನದ ಕಥೆಯಿದು!

ajjimane ganesh

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾಮಾನ್ಯವಾಗಿ ದೇವಸ್ಥಾನಗಳಿಗೆ ಹೋದಾಗ ಏನಾದರೂ ವಸ್ತು ಕಳೆದುಹೋಗೋದು ಸಾಮಾನ್ಯ! ಚಪ್ಪಲಿನೋ! ದುಡ್ಡಿಲ್ಲದಿರೋ ಪರ್ಸೋ ಹೋದ್ರೆ ಹೋಯ್ತು ಬಿಡು ಗೃಹಚಾರ ಅಂದುಕೊಂಡು ನಮ್ಮನ್ನ ನಾವೇ ಸಮಾಧಾನ ಮಾಡಿಕೊಳ್ತೀವಿ.ಅದೆ ಹಾಕಿಕೊಂಡ ಒಡವೇನೆ ಕಳೆದುಹೋದರೆ? ಮನಸ್ಥಿತಿ ಬಿಲ್​ಕುಲ್​ ಸುಮ್ಮನಿರಲ್ಲ! ಶಿವಮೊಗ್ಗದ ಪ್ರವಾಸಿಗರೊಬ್ಬರಿಗೂ ಚಿತ್ರದುರ್ಗದಲ್ಲಿ ಹೀಗೆ ಆಗಿತ್ತು. ಕಳೆದುಕೊಂಡ ಚಿನ್ನದ ಒಡವೆಗಾಗಿ ದೇವಾಲಯದಲ್ಲಿಯೇ ದೇವರನ್ನ ಬೇಡುವಂತೆ ಮಾಡಿತ್ತು. ಅದೃಷ್ಟಕ್ಕೆ ಅಲ್ಲಿ ಭಕ್ತರಿಂದಲೇ ಅಚ್ಚರಿ ನಡೆಯಿತು. 

Nayakanahatti Temple
Nayakanahatti Temple

ಏನಿದು ಘಟನೆ 

ಚಿತ್ರದುರ್ಗ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರ ನಾಯಕನಹಟ್ಟಿಯ ಗುರುತಿಪ್ಪೇರುದ್ರಸ್ವಾಮಿ ದೇಗುಲ. ಶಿವಮೊಗ್ಗ ಜಿಲ್ಲೆಯ ಸಾಗರದ ನಿವಾಸಿ ಬಸವರಾಜ್ ಮತ್ತು ಚನ್ನಬಸಪ್ಪ ಎಂಬವರು ಕುಟುಂಬ ಸಮೇತರಾಗಿ ಶನಿವಾರ ದೇಗುಲಕ್ಕೆ ಬಂದಿದ್ದರು. 

 ಶಿವಮೊಗ್ಗದ ಪುರೋಹಿತರ ಕೈ ಹಿಡಿದ ಅಹಮದಾಬಾದ್ ಯುವತಿ, ನೆಂಟಸ್ಥನ  ಬೆಳೆದಿದ್ದು ಹೇಗೆ

ಈ ವೇಳೆ ಬಸವರಾಜ್ ಅವರ ಪತ್ನಿ ದೇಗುಲದ ಆವರಣದಲ್ಲಿ ಉರುಳು ಸೇವೆ ನಡೆಸುತ್ತಿದ್ದಾಗ ಅವರ ಕೊರಳಲ್ಲಿದ್ದ ಮಾಂಗಲ್ಯ ಸರ ಎಲ್ಲಿಯೋ ಬಿದ್ದುಹೋಗಿತ್ತು. ಹತ್ತತ್ರ 40 ಗ್ರಾಂ ತೂಕದ ಬಂಗಾರ. ದೇವಸ್ಥಾನದ ಆವರಣದಲ್ಲಿಯೇ ಹೀಗಾಯ್ತಲ್ಲ ಎನ್ನುವಾಗಲೇ, ಅಲ್ಲೊಂದು ಘಟನೆ ನಡೆಯಿತು. 

ದೇವಾಲಯದ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಿತ್ರ ಶ್ರೀನಿವಾಸ್ರಿಗೆ  ಸರ ಸಿಕ್ಕಿತ್ತು. ಅವರನ್ನು ದೇವಾಲಯದ ಆಡಳಿತ ಕಚೇರಿಗೆ ತಲುಪಿಸಿದ್ದರು. ಸರ ಕಳೆದುಕೊಂಡು ಆತಂಕದಿಂದ ಹುಡುಕಾಟ ನಡೆಸುತ್ತಿರುವುದನ್ನ ಕಂಡ ಆಡಳಿತ ಮಂಡಳಿ ಸಿಬ್ಬಂದಿ ರುದ್ರೇಶ್ ಮತ್ತು ಪ್ರವಾಸಿ ಮಿತ್ರ ಶ್ರೀನಿವಾಸ್ ವಿಚಾರಿಸಿದ್ದಾರೆ. ಬಳಿಕ ಚಿನ್ನ ಅವರದ್ದೆ ಎಂದು ಖಾತರಿ ಪಡಿಸಿಕೊಂಡು, ಕುಟುಂಬಸ್ಥರಿಗೆ ವಾಪಸ್ ನೀಡಿದರು. ಕಳೆದುಹೋಯ್ತು ಎಂದುಕೊಂಡ ಚಿನ್ನ ಸಿಕ್ಕ ಖುಷಿಯಲ್ಲಿ ಭಕ್ತರು ದೇವರನ್ನು ನೆನೆದು ಹುಡುಕಿಕೊಟ್ಟವರಿಗೂ ಕೃತಜ್ಞತೆ ಸಲ್ಲಿಸಿದರು.

Nayakanahatti Temple
Nayakanahatti Temple

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್, ಬಿಗ್​ ಸುದ್ದಿ  

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, gold chain story in Nayakanahatti Temple chitradurga news today ನಾಯಕನಹಟ್ಟಿ ದೇಗುಲದಲ್ಲಿ ಕಳೆದುಹೋದ ಮಾಂಗಲ್ಯ ಸರ ಹಿಂತಿರುಗಿಸಿದ ಸಿಬ್ಬಂದಿ ಪ್ರಾಮಾಣಿಕತೆಗೆ ಮೆಚ್ಚುಗೆ Lost gold chain returned by temple staff at Nayakanahatti Honesty appreciated 
Share This Article