ಮೆಗ್ಗಾನ್ ಆಸ್ಪತ್ರೆಯಲ್ಲಿ 3 ತಿಂಗಳಿಂ ಸಿಕ್ತಿಲ್ಲಾ ಇನ್ಸುಲಿನ್, ಬಿಪಿ, ಶುಗರ್ ಮಾತ್ರೆ?

ajjimane ganesh

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಕಳೆದ 3 ತಿಂಗಳಿಂದ ಮಧುಮೇಹ ಮತ್ತು ರಕ್ತದೊತ್ತಡದ ಔಷಧಿಗಳ ವಿತರಣೆ ಸ್ಥಗಿತಗೊಂಡಿದೆ. ಈ ವಿಚಾರ ಗೊತ್ತಿಲ್ಲದೆ ಹಲವರು ಆಸ್ಪತ್ರೆಗೆ ಹೋಗಿ ಮಾತ್ರೆ ಪಡೆಯಲಾಗದೇ ವಾಪಸ್ ಆಗುತ್ತಿದ್ದಾರೆ.

ಬಿಪಿ ಶುಗರ್ ಮಾತ್ರೆಗಳನ್ನು ಉಚಿತವಾಗಿ ನೀಡುತ್ತಿದ್ದ ಆಸ್ಪತ್ರೆಯಲ್ಲಿ ಮೂರು ತಿಂಗಳಿನಿಂದ ಮಾತ್ರೆಗಳನ್ನು ನೀಡುವುದನ್ನು ಸ್ಥಗಿತಮಾಡಲಾಗಿದೆ. ಇದರಿಂದ ಹಲವರಿಗೆ ಸಮಸ್ಯೆಯಾಗುತ್ತಿದೆ. ದುಡ್ಡುಕೊಟ್ಟು ತೆಗೆದುಕೊಳ್ಳಲಾಗದ ಮಾತ್ರೆಯನ್ನು ಜನರು ಮೆಗ್ಗಾನ್ ನಲ್ಲಿ ಉಚಿತವಾಗಿ ಪಡೆಯುತ್ತಿದ್ದರು. ಮಾತ್ರೆ ವಿತರಣೆಯನ್ನ ಸ್ಥಗಿತಗೊಳಿಸಿರುವುದರಿಂದ ಸಮಸ್ಯೆಯಾಗುತ್ತಿದ್ದು, ಉಚಿತ ಮಾತ್ರೆ ವಿತರಣೆಯನ್ನು ತಕ್ಷಣವೇ ಪುನರಾರಂಭಿಸುವಂತೆ ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. 

McGann Hospital
McGann Hospital

ಇಂಡಿಗೋ ವಿಮಾನ ರದ್ದು : ಶಿವಮೊಗ್ಗ ಪ್ರಯಾಣಿಕರ ಪರದಾಟ 

ಮೆಗ್ಗಾನ್ ಆಸ್ಪತ್ರೆಗೆ ಶಿವಮೊಗ್ಗ ಸೇರಿದಂತೆ ದಾವಣಗೆರೆ, ಚಿಕ್ಕಮಗಳೂರು ಹಾಗೂ ಸುತ್ತಮುತ್ತಲ ಒಟ್ಟು 7 ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ. 

ಆದರೆ ರೋಗಿಗಳಿಗೆ ಉಚಿತವಾಗಿ ನೀಡುತ್ತಿದ್ದ ಇನ್ಸುಲಿನ್ ಬಾಟಲಿ ಹಾಗೂ ಬಿಪಿ ಮಾತ್ರೆಗಳನ್ನು ನೀಡದೆ ಖಾಸಗಿ ಮೆಡಿಕಲ್ ಸ್ಟೋರ್‌ಗಳಿಂದ ಖರೀದಿಸುವಂತೆ ಸೂಚಿಸಲಾಗುತ್ತಿದೆ.

ಇದರಿಂದ ಬಡ ರೋಗಿಗಳು ಅನಿವಾರ್ಯವಾಗಿ ಹಣ ಪಾವತಿಸಿ ಔಷಧಿ ತರುವಂತಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಉದ್ದೇಶವೇ ವಿಫಲವಾಗುತ್ತಿದೆ ಎಂದು ಟ್ರಸ್ಟ್‌ನ ಪ್ರಮುಖರು ದೂರಿದ್ದಾರೆ. 

26ರ ಯುವಕನಿಗೆ 2 ದಶಕಗಳ ಕಾಲ ಸೆರೆವಾಸ! 4 ಲಕ್ಷ ಪರಿಹಾರ! ಶಿವಮೊಗ್ಗ ನ್ಯಾಯಾಲಯದ ಮಹತ್ವದ ತೀರ್ಪು!

ಅಲ್ಲದೆ ಇದೇ ವೇಳೆ ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಓಪಿಡಿ ಸ್ಲಿಪ್ ಕೌಂಟರ್ ತೆರೆದು ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡುವಂತೆ ಮನವಿ ಸಲ್ಲಿಸಿದರು.

McGann Hospital
McGann Hospital

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, shivamogga McGann Hospital news ಮೆಗ್ಗಾನ್ ಆಸ್ಪತ್ರೆಯಲ್ಲಿ ಉಚಿತ ಔಷಧಿ ಸ್ಥಗಿತ; ಜಿಲ್ಲಾಧಿಕಾರಿಗೆ ಟ್ರಸ್ಟ್ ಮನವಿ Free medicines halted at McGann Hospital Trust petitions DC
Share This Article