SHIVAMOGGA NEWS TODAY

ಶಿವಮೊಗ್ಗ: ಜೈಲ್ ಸರ್ಕಲ್ ಬಳಿ ಫುಟ್‌ಪಾತ್ ಒತ್ತುವರಿ: ಜಾಹೀರಾತು ಫಲಕಗಳೇ ಸಾರ್ವಜನಿಕರಿಗೆ ತಲೆನೋವು

Prathapa thirthahalli ನವೀಕರಣ: 07 ಜುಲೈ 2026, 2:08 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shimoga ಶಿವಮೊಗ್ಗದ ಅನೇಕ ಕಡೆ ಟ್ರಾಫಿಕ್ ಪೊಲೀಸರು ಫುಟ್‌ಪಾತ್ ತೆರವುಗೊಳಿಸುವ ಕಾರ್ಯವನ್ನು ಭರದಿಂದ ನಡೆಸುತ್ತಿದ್ದಾರೆ. ಆದರೆ, ಇದರ ನಡುವೆ ನಗರದ ಜೈಲ್ ಸರ್ಕಲ್ ಟ್ರಾಫಿಕ್ ಸಿಗ್ನಲ್ ಬಳಿ ಇರುವ ಜಾಹೀರಾತು ಫಲಕವೊಂದು ಪಾದಚಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಶಿವಮೊಗ್ಗ: ಕಳೆದ 6 ತಿಂಗಳಲ್ಲಿ ಪೊಲೀಸ್​ ಇಲಾಖೆ ವಶಪಡಿಸಿಕೊಂಡ ಗಾಂಜಾ ಎಷ್ಟು ಕೆ ಜಿ ಗೊತ್ತಾ ? 

​ಜೈಲ್ ಸರ್ಕಲ್‌ನ ಸಿಗ್ನಲ್ ಬಳಿ ಅಡಿಕೆ ದಬ್ಬೆಗಳು ಟ್ರಾಫಿಕ್​​ ಸಿಗ್ನಲ್​​ನ ಕಂಬ ಹಾಗೂ ವಿದ್ಯುತ್​ ಕಂಬಗಳನ್ನು ಬಳಸಿಕೊಂಡು ಬೃಹತ್ ಗಾತ್ರದ ಜಾಹೀರಾತು ಬೋರ್ಡ್ ಒಂದನ್ನು ನಿರ್ಮಿಸಲಾಗಿದೆ. ಈ ಬೋರ್ಡ್‌ನಲ್ಲಿ ರಾಜಕೀಯ ವ್ಯಕ್ತಿಗಳ ಹುಟ್ಟುಹಬ್ಬ ಸೇರಿದಂತೆ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಹಾಕಲಾಗುತ್ತದೆ. ಆದರೆ, ಈ ಜಾಹೀರಾತು ಬೋರ್ಡ್ ಈಗ ಫುಟ್‌ಪಾತ್‌ ಅನ್ನು ಆವರಿಸಿಕೊಂಡಿದೆ.

​ಫುಟ್‌ಪಾತ್‌ಗೆ ಚಾಚಿಕೊಂಡಿರುವ ಈ ಬೋರ್ಡ್ ಪಾದಚಾರಿಗಳಿಗೆ ಸಾಕಷ್ಟು ತೊಂದರೆಯನ್ನು ಉಂಟುಮಾಡುತ್ತಿದೆ. ಗಮನಿಸದೆ ಆ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋದರೆ, ಚಾಚಿಕೊಂಡಿರುವ ಮರದ ದಬ್ಬೆಗಳು ತಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ.

​ಆದ್ದರಿಂದ, ಇತ್ತೀಚೆಗೆ ಫುಟ್‌ಪಾತ್ ಒತ್ತುವರಿಗಳನ್ನು ತೆರವುಗೊಳಿಸುತ್ತಿರುವ ಟ್ರಾಫಿಕ್ ಪೊಲೀಸರು, ಈ ಜಾಹೀರಾತು ಫಲಕ ಆಕ್ರಮಿಸಿಕೊಂಡಿರುವ ಜಾಗವನ್ನು ತೆರವುಗೊಳಿಸುವ ಮೂಲಕ ಪಾದಚಾರಿಗಳಿಗೆ ಅನುವು ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.