ಶಿವಮೊಗ್ಗದಲ್ಲಿ 72ನೇ ವನ್ಯಜೀವಿ ಸಪ್ತಾಹ: ಪರಿಸರ ಜಾಗೃತಿ ಮೂಡಿಸಿದ ಬೃಹತ್ ಸೈಕಲ್ ಜಾಥಾ

ಹಂಚಿಕೊಳ್ಳಿ
WhatsApp Facebook X Telegram
72 ನೇ ವನ್ಯಜೀವಿ ಸಪ್ತಾಪ
72 ನೇ ವನ್ಯಜೀವಿ ಸಪ್ತಾಪ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗ ವನ್ಯಜೀವಿ ವಿಭಾಗದ ವತಿಯಿಂದ 72ನೇ ವನ್ಯಜೀವಿ ಸಪ್ತಾಹ-2026ರ ಅಂಗವಾಗಿ ಅಕ್ಟೋಬರ್ 04 ರಂದು ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಸಪ್ತಾಹ-2026ರ ಕಾರ್ಯಕ್ರಮದ ಭಾಗವಾಗಿ ಆವಾಸಸ್ಥಾನಗಳ ಸಂಪರ್ಕ, ವನ್ಯಜೀವಿಗಳ ಸಮೃದ್ಧಿ – ವನ್ಯಜೀವಿಗಳಿಗಾಗಿ ವೇಗವನ್ನು ಕಡಿಮೆ ಮಾಡಿ, ರಸ್ತೆಯಲ್ಲಿ ಅವಕಾಶ ಕಲ್ಪಿಸಿ, ಭೂ ಪ್ರದೇಶದಲ್ಲಿ ಅವಕಾಶ ಕಲ್ಪಿಸಿ ಎಂಬ ಧ್ವೇಯವಾಕ್ಯದೊಂದಿಗೆ ಅಕ್ಟೋಬರ್ 04 ರಂದು ಬೆಳಿಗ್ಗೆ 06:30ಕ್ಕೆ ವನ್ಯಜೀವಿ ಸೈಕಲ್ ಜಾಥಾವನ್ನು ಆಯೋಜಿಸಲಾಗಿತ್ತು. ವನ್ಯಜೀವಿ ವಿಭಾಗದ ಕಚೇರಿಯಿಂದ ಪ್ರಾರಂಭಗೊಂಡ ಸೈಕಲ್  ಜಾಥಾವು ಕುವೆಂಪು ರಸ್ತೆ, ಆಲ್ಕೋಳ ಸರ್ಕಲ್, ಆಯನೂರು, ಸಿರಿಗೆರೆ, ಸಂಪಿಗೆಹಳ್ಳ ಮಾರ್ಗವಾಗಿ ಹಣಗೆರೆಯಲ್ಲಿ ಮುಕ್ತಾಯಗೊಂಡಿತು.

ಭಾರತ್ ಜೋಡೋ ಯಾತ್ರೆ 2.0

ಈ ವನ್ಯಜೀವಿ ಸೈಕಲ್ ಸವಾರಿ ಕಾರ್ಯಕ್ರಮಕ್ಕೆ ಭಾರತೀಯ ಅರಣ್ಯ ಸೇವೆಯ (IFS) ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಅಜ್ಜಯ್ಯ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಸನ್ನ ಕೃಷ್ಣ ಪಟಗಾರ , ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್, ಕಾರ್ಯಕ್ರಮದ ನೋಡಲ್ ಅಧಿಕಾರಿಯಾದ ವಲಯ ಅರಣ್ಯಾಧಿಕಾರಿ ಬಾಬು ಕೆ, ಅರಣ್ಯ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಈ ವನ್ಯಜೀವಿ ಸೈಕಲ್ ಸವಾರಿಯಲ್ಲಿ ಮಕ್ಕಳು, ಸೈಕಲಿಸ್ಟ್‌ಗಳು, ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ಸೇರಿ 100ಕ್ಕೂ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor