ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಹಾಗೂ ಮಲೆನಾಡಿನ ಪ್ರಮುಖ ಬೆಳವಣಿಗೆಗಳನ್ನು ಒಳಗೊಂಡ ಮಲೆನಾಡು ಟುಡೆಯ ಇಂದಿನ ಇ-ಪೇಪರ್ ಇಲ್ಲಿದೆ ಇವತ್ತಿನ ಇ ಪತ್ರಿಕೆಯಲ್ಲಿ ಸಾಗರದಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಜನರ ಮನೆ ಬಾಗಿಲಿಗೇ ಸರ್ಕಾರಿ ಸೇವೆ ತಲುಪಿಸುವುದು ಸರ್ಕಾರದ ಆಶಯ ಎಂದು ಸಚಿವ ಎಸ್. ಮಧು ಬಂಗಾರಪ್ಪ ಹೇಳಿದ್ದಾರೆ. ಇದೇ ವೇಳೆ ಸಾಗರವನ್ನು ಬರಪೀಡಿತ ತಾಲೂಕಾಗಿ ಘೋಷಿಸಬೇಕು ಎಂಬ ಒತ್ತಾಯವೂ ಸಭೆಯಲ್ಲಿ ಕೇಳಿಬಂದಿದೆ.
ಇನ್ನು ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರು ಯಶವಂತಪುರವರೆಗೆ ವಿಸ್ತರಿಸಿ ಮೂಕಾಂಬಿಕಾ ರೋಡ್–ಬೈಂದೂರು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಿರುವ ಸುದ್ದಿ, ಅನ್ನಭಾಗ್ಯ ಫಲಾನುಭವಿಗಳು ಮೊಬೈಲ್‌ನಲ್ಲೇ ಇ-ಕೆವೈಸಿ ಪೂರ್ಣಗೊಳಿಸಲು ಪರಿಚಯಿಸಿರುವ ‘ಅನ್ನ ಸೇವೆ’ ಆ್ಯಪ್ ಕುರಿತ ಮಾಹಿತಿ ಹಾಗೂ ಅಕ್ಟೋಬರ್ 14ರಿಂದ ನಡೆಯಲಿರುವ ‘ಶಿವಮೊಗ್ಗ ಸಿನಿ ದಸರಾ’ ಕುರಿತ ಸಮಗ್ರ ವಿವರ , ದೆಹಲಿಯಲ್ಲಿ ಪ್ರತಿಭಟನೆಯ ವರದಿಗೆ ತೆರಳಿದ್ದ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪಕ್ಕೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವ್ಯಕ್ತಪಡಿಸಿರುವ ಖಂಡನೆ ಹಾಗೂ ಮುಖ್ಯಮಂತ್ರಿಗಳ ಕುರಿತು ಶಾಸಕ ಬಿ.ವೈ. ವಿಜಯೇಂದ್ರ ನೀಡಿದ ಹೇಳಿಕೆಗೆ ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ನೀಡಿರುವ ಪ್ರತಿಕ್ರಿಯೆಯೂ ಇಂದಿನ ಸಂಚಿಕೆಯಲ್ಲಿದೆ

ಕ್ರೀಡಾ ವಿಭಾಗದಲ್ಲಿ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಮನೋಜ್ ಸಿ. ಚಿನ್ನದ ಪದಕ ಹಾಗೂ ರಿತೇಶ್ ಎಂ. ಬೆಳ್ಳಿ ಪದಕ ಪಡೆದಿರುವ ಸಾಧನೆ ವರದಿಯಾಗಿದೆ. ಚಿನ್ನದ ಪದಕ ಪಡೆದ ಮನೋಜ್ ಎಸ್‌ಜಿಎಫ್‌ಐ ರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾಗಿರುವ ಮಾಹಿತಿಯೂ ಪ್ರಕಟವಾಗಿದೆ. ಇದರೊಂದಿಗೆ ಓದುಗರಿಗಾಗಿ ವಿಶೇಷ ಲೇಖನಗಳು ಸಹ ಇವತ್ತಿನ ಇ-ಪೇಪರ್‌ನಲ್ಲಿ ದೆ
ಶಿವಮೊಗ್ಗ ಮತ್ತು ಮಲೆನಾಡಿನ ದಿನದ ಪ್ರಮುಖ ಸುದ್ದಿಗಳನ್ನು ಒಂದೇ ಕಡೆ ಓದಲು ‘ಮಲೆನಾಡು ಟುಡೆ’ ಇ-ಪೇಪರ್ ಓದಿ. ಪತ್ರಿಕೆಯ ಸಂಪೂರ್ಣ PDF ಓದಲು ಅಥವಾ ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಇ-ಪೇಪರ್ ಓದಿ | PDF ಡೌನ್‌ಲೋಡ್ ಮಾಡಿ
