ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಇವತ್ತಿನ ಅಡಿಕೆ ವಹಿವಾಟಿಗೆ ಸಂಬಂಧಿಸಿದಂತೆ ಅಡಕೆ ದರದ ಮಾಹಿತಿ ಇದೀಗಷ್ಟೆ ಲಭ್ಯವಾಗಿದೆ. ಸರಕು ಅಡಿಕೆಗೆ ಗರಿಷ್ಠ ₹93,496 ದರ ದಾಖಲಾಗಿದೆ. ರಾಶಿ ಗರಿಷ್ಠ ₹48,889 ರೇಟು ಪಡೆದುಕೊಂಡಿದೆ.
ಶಿವಮೊಗ್ಗ ಎಪಿಎಂಸಿಯಲ್ಲಿನ ವಹಿವಾಟು
ವಿವರವಾಗಿ ಗಮನಿಸುವುದಾದರೆ, ಸರಕು ಅಡಿಕೆಗೆ ಕನಿಷ್ಠ ₹51,569, ಗರಿಷ್ಠ ₹93,496 ಹಾಗೂ ಮಾದರಿ ದರ ₹84,639 ದಾಖಲಾಗಿದೆ. ಬೆಟ್ಟೆ ಅಡಿಕೆಗೆ ಕನಿಷ್ಠ ₹50,009, ಗರಿಷ್ಠ ₹59,409 ಹಾಗೂ ಮಾದರಿ ದರ ₹57,472 ನಿಗದಿಯಾಗಿದೆ.

ರಾಶಿ ಅಡಿಕೆಗೆ ಕನಿಷ್ಠ ₹42,199, ಗರಿಷ್ಠ ₹48,889 ಹಾಗೂ ಮಾದರಿ ದರ ₹45,199 ಇದೆ. ಗೋರಬಲು ಅಡಿಕೆಗೆ ಕನಿಷ್ಠ ₹19,001, ಗರಿಷ್ಠ ₹37,599 ಹಾಗೂ ಮಾದರಿ ದರ ₹35,089 ದಾಖಲಾಗಿದೆ.
ಹೊಸ ರಾಶಿ ಅಡಿಕೆಗೆ ಕನಿಷ್ಠ ₹42,009, ಗರಿಷ್ಠ ₹46,509 ಹಾಗೂ ಮಾದರಿ ದರ ₹45,009 ದಾಖಲಾಗಿದೆ.
