SHIVAMOGGA NEWS TODAY

ಜೈಲ್​ ಸರ್ಕಲ್​ನಲ್ಲಿದ್ದ ಜಾಹೀರಾತು ಬ್ಯಾನರ್​​ ತೆರವು: ಮಾಧ್ಯಮದ ವರದಿಗೆ ತಕ್ಷಣವೇ ಸ್ಪಂದಿಸಿದ ಟ್ರಾಫಿಕ್ ಪೊಲೀಸರು!

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Traffic Police ಶಿವಮೊಗ್ಗ: ನಗರದ ಜೈಲ್​ ಸರ್ಕಲ್​ನಲ್ಲಿ ಫುಟ್‌ಪಾತ್‌ ಒತ್ತುವರಿ ಮಾಡಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದ ಬೃಹತ್​ ಗಾತ್ರದ ಜಾಹೀರಾತು ಫಲಕವನ್ನು ಟ್ರಾಫಿಕ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತೆರವುಗೊಳಿಸಿದ್ದಾರೆ.

ಶಿವಮೊಗ್ಗ: ಕಾಂಗ್ರೆಸ್ ಹಾಗೂ ಎನ್.ಎಸ್.ಯು.ಐ. ಬೃಹತ್ ಪ್ರತಿಭಟನೆ, ಸಾವಿರಾರು ವಿದ್ಯಾರ್ಥಿಗಳು ಭಾಗಿ

ಜೈಲ್​ ಸರ್ಕಲ್​ನ ಫುಟ್‌ಪಾತ್‌ ಒತ್ತುವರಿ ಮಾಡಿ ಬೃಹತ್​ ಗಾತ್ರದ ಜಾಹೀರಾತು ಬೋರ್ಡ್​​ ಒಂದನ್ನು ಅಳವಡಿಸಲಾಗಿತ್ತು. ಈ ಜಾಹೀರಾತು ಬೋರ್ಡ್​​ಗೆ ಬಳಸಲಾಗಿದ್ದ ಅಡಿಕೆ ದಬ್ಬೆಗಳು ಫುಟ್‌ಪಾತ್‌ನತ್ತ ಚಾಚಿಕೊಂಡಿದ್ದು, ಹಾದಿಹೋಕರು ಮತ್ತು ಪಾದಾಚಾರಿಗಳ ಓಡಾಟಕ್ಕೆ ತೀವ್ರ ಸಮಸ್ಯೆ ಉಂಟುಮಾಡುತ್ತಿದ್ದವು. ಅಪಾಯಕ್ಕೆ ಆಹ್ವಾನ ನೀಡುವಂತಿದ್ದ ಈ ಜಾಹೀರಾತು ಫಲಕದ ಕುರಿತು ನಮ್ಮ ಮಲೆನಾಡು ಟುಡೇ ಪತ್ರಿಕೆಯು “ಜೈಲ್ ಸರ್ಕಲ್ ಬಳಿ ಫುಟ್‌ಪಾತ್ ಒತ್ತುವರಿ: ಜಾಹೀರಾತು ಫಲಕಗಳೇ ಸಾರ್ವಜನಿಕರಿಗೆ ತಲೆನೋವು” ಎಂಬ ಶೀರ್ಷಿಕೆಯಡಿ ಸುದ್ದಿಯನ್ನು ಬಿತ್ತರಿಸಿತ್ತು.

ಪತ್ರಿಕಾ ವರದಿಯನ್ನು ಪರಿಗಣಿಸಿದ ಟ್ರಾಫಿಕ್​​ ಇನ್ಸ್ಪೆಕ್ಟರ್​​ ದೇವರಾಜ್​ ಅವರು ಕೂಡಲೇ . ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕಾಗಮಿಸಿದರು. ನಂತರ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಬೋರ್ಡ್​ನ್ನು ಸಂಪೂರ್ಣವಾಗಿ ತೆರವುಗೊಳಿಸಿದರು. ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುವ ರೀತಿಯಲ್ಲಿ ಯಾವುದೇ ಫ್ಲೆಕ್ಸ್​​ ಅಥವಾ ಬ್ಯಾನರ್‌ಗಳನ್ನು ಅಳವಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಇನ್ನುಮುಂದೆ ಯಾರೇ ಆಗಲಿ ಇಂತಹ ಸಾರ್ವಜನಿಕ ಪ್ರದೇಶಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸುವಂತೆ ಫ್ಲೆಕ್ಸ್​​ಗಳನ್ನು ಹಾಕಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಂದು ಇನ್ಸ್‌ಪೆಕ್ಟರ್ ದೇವರಾಜ್ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರ ಸಮಸ್ಯೆಗೆ ವರದಿ ಪ್ರಕಟವಾದ ತಕ್ಷಣವೇ ಸ್ಪಂದಿಸಿ, ಪಾದಾಚಾರಿಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟ ಟ್ರಾಫಿಕ್​ ಇನ್ಸಪೆಕ್ಟರ್​​ ಮತ್ತು ಅವರ ಸಿಬ್ಬಂದಿ ವರ್ಗವನ್ನು ಮಲೆನಾಡು ಟುಡೇ ಶ್ಲಾಘಿಸಿದೆ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.