ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಯಲ್ಲಿ (Camp at Nanjappa Life Care Shimoga)ಕಾಲಿನ ರಕ್ತನಾಳದಲ್ಲಿ ಉಂಟಾಗುವ ಬ್ಲಾಕ್ ಅಥವಾ ಪೆರಿಫೆರಲ್ ಆರ್ಟರಿ ಡಿಸೀಸ್ (PAD) ಸಮಸ್ಯೆಗೆ ಚಿಕಿತ್ಸೆ ನೀಡಲು ವಿಶೇಷ ಶಿಬಿರ ಆಯೋಜಿಸಲಾಗಿದೆ.
ಡಿಸೆಂಬರ್ 8 ರಿಂದ 31 ರವರೆಗೆ ವಿಶೇಷ ಚಿಕಿತ್ಸಾ ಶಿಬಿರ ನಡೆಯಲಿದೆ. ರಕ್ತನಾಳದ ಬ್ಲಾಕ್‌ನಿಂದಾಗಿ ನಡೆಯುವಾಗ ತೊಡೆ ಅಥವಾ ಕಾಲಿನ ಹಿಂಬಾಗದಲ್ಲಿ ಆಗುವ ಸೆಳೆತ, ಕಾಲುಗಳಲ್ಲಿ ನೋವು, ಚರ್ಮದ ಬಣ್ಣ ಬದಲಾಗುವುದು ಅಥವಾ ಗುಣವಾಗದ ಗಾಯಗಳು ಕಂಡುಬಂದರೆ ಅಂತಹ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ಆಸ್ಪತ್ರೆ ತನ್ನ ಪ್ರಕಟಣೆ ತಿಳಿಸಿದೆ.

Camp at Nanjappa Life Care Shimoga
ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಗ್ಯಾಂಗ್ರೀನ್ ಉಂಟಾಗಿ ಕಾಲು ಕಳೆದುಕೊಳ್ಳುವ ಅಥವಾ ಹೃದಯಾಘಾತ ಮತ್ತು ಲಕ್ವ ಸಂಭವಿಸುವ ಅಪಾಯವಿದೆ. ಈ ನಿಟ್ಟಿನಲ್ಲಿ ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಆಯೋಜಿಸಿರುವ ಶಿಬಿರದಲ್ಲಿ ಅಲ್ಟ್ರಾಸೌಂಡ್ ಡಾಪ್ಲರ್ ಹಾಗೂ ಸಿ.ಟಿ ಆಂಜಿಯೋಗ್ರಾಮ್ ಪರೀಕ್ಷೆಗಳ ಮೂಲಕ ಸಣ್ಣ ಸೂಜಿ ಗಾತ್ರದ ರಂಧ್ರದ ಮೂಲಕ ಆಧುನಿಕ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಮೊಗ್ಗದ ಪುರೋಹಿತರ ಕೈ ಹಿಡಿದ ಅಹಮದಾಬಾದ್ ಯುವತಿ, ನೆಂಟಸ್ಥನ ಬೆಳೆದಿದ್ದು ಹೇಗೆ
ಈ ಶಿಬಿರದ ಅವಧಿಯಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆಗೆ ಶೇಕಡಾ 40 ರವರೆಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದ್ದು, ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ ಡಾ. ಎಸ್.ಎಚ್. ನಿಶಿತ ಅವರಿಂದ ಉಚಿತ ಸಮಾಲೋಚನೆ ಲಭ್ಯವಿರಲಿದೆ ಎಂದು ನಂಜಪ್ಪ ಲೈಫ್ ಕೇರ್ ಸಂಸ್ಥೆಯು ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, Shimoga news kannada live ನಂಜಪ್ಪ ಲೈಫ್ ಕೇರ್‌ನಲ್ಲಿ ಪೆರಿಫೆರಲ್ ಆರ್ಟರಿ ಡಿಸೀಸ್ ಚಿಕಿತ್ಸಾ ಶಿಬಿರ ಶೇ. 40 ರಿಯಾಯಿತಿ, Peripheral Artery Disease Camp at Nanjappa Life Care Shimoga; 40% Discount






