ಸೊರಬ : ಅನೈತಿಕ ಸಂಬಂಧಕ್ಕೆ ತಮ್ಮನನ್ನೇ ಕೊಂದ ಅಣ್ಣ 

ಹಂಚಿಕೊಳ್ಳಿ
WhatsApp Facebook X Telegram
ಸೊರಬ : ಅನೈತಿಕ ಸಂಬಂಧಕ್ಕೆ ತಮ್ಮನನ್ನೇ ಕೊಂದ ಅಣ್ಣ 
Shimoga news Areca Nut Theft Copper Utensils Theft Woman Narrowly Escapes Chain Snatching Attempt in Soraba While Riding Scooty

ಶಿವಮೊಗ್ಗ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಅಣ್ಣನೇ ತನ್ನ ಸ್ವಂತ ತಮ್ಮನನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ವ್ಯಾಪ್ತಿಯಲ್ಲಿ ನಡೆದಿದೆ.ರಾಮಚಂದ್ರಪ್ಪ (28) ಮೃತ ದುರ್ದೈವಿ.

ಶಿವಮೊಗ್ಗ, ಅಬಕಾರಿ ಇಲಾಖೆಯಿಂದ ದಿಢೀರ್ ದಾಳಿ, 51.75 ಲೀಟರ್ ಗೋವಾ ಮದ್ಯ ವಶ

Shimoga news  ಘಟನೆಯ ಹಿನ್ನೆಲೆ

ದೂರುದಾರರಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಮಾಲತೇಶ (35 ವರ್ಷ) ಮತ್ತು ಕಿರಿಯ ಮಗ ರಾಮಚಂದ್ರಪ್ಪ (28 ವರ್ಷ). ಮಾಲತೇಶನ ಪತ್ನಿ ಭಾಗ್ಯ ಹಾಗೂ ರಾಮಚಂದ್ರಪ್ಪನ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ವಿಷಯವಾಗಿ ಮನೆಯಲ್ಲಿ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದವು.ಕಳೆದ ಸೆಪ್ಟೆಂಬರ್ 08, 2025 ರಂದು ಕಿರಿಯ ಮಗ ರಾಮಚಂದ್ರಪ್ಪ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಸುಮಾರು ಒಂದೂವರೆ ತಿಂಗಳಾದರೂ ಮಗ ಮನೆಗೆ ಬಾರದಿದ್ದಾಗ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಡಿಸೆಂಬರ್ 10, 2025 ರಂದು ದೂರುದಾರರ ಸೊಸೆ ಭಾಗ್ಯ, ತನ್ನ ಅತ್ತೆಯ ಬಳಿ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ರಾಮಚಂದ್ರಪ್ಪ ಮತ್ತು ತನ್ನ ನಡುವಿನ ಸಂಬಂಧದ ಬಗ್ಗೆ ಮಾಲತೇಶನಿಗೆ ದ್ವೇಷವಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 8 ರಂದು ಮಧ್ಯಾಹ್ನ 12:30 ರ ಸುಮಾರಿಗೆ ಮಾಲತೇಶನು ರಾಮಚಂದ್ರಪ್ಪನನ್ನು ತೋಟದ ಮನೆಗೆ ಕರೆದೊಯ್ದು, ಅಲ್ಲಿ ಆತನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಗುಂಡಿ ತೋಡಿ ಹೂತುಹಾಕಿದ್ದಾನೆ ಎಂಬ ಸತ್ಯವನ್ನು ಭಾಗ್ಯ ತಿಳಿಸಿದ್ದಾಳೆ.

ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಪೋಷಕರು  ಸೊರಬ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮಾಲತೇಶ ಮತ್ತು ಆತನ ಪತ್ನಿ ಭಾಗ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Shimoga news  Brother Kills Younger Brother Over Illicit Relationship

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor