ಅವರ percentage ತಿಂದು, ಇವರ percentage ತಗೊಂಡು ಅವರು ಹೋದರು! ನಾನು ಜನರ ಹತ್ರ ಬೈಸ್ಕೋಬೇಕಾ! ಕ್ಷೇತ್ರದಲ್ಲಿನ ಅಧಿಕಾರಿಗಳ ಕೆಲಸಕ್ಕೆ ಸಿಟ್ಟಾದ ಆರಗ ಜ್ಞಾನೇಂದ್ರ

Malenadu Today

ಶಾಸಕರು, ಸಚಿವರು ಸರ್ಕಾರದ ಮಟ್ಟದಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಲು ಹಣ ಮಂಜುರಾತಿ ಮಾಡಿಸಿಕೊಂಡು ಬರುತ್ತಾರೆ. ಆದರೆ, ಆ ಅನುದಾನದಲ್ಲಿ ಸಮರ್ಪಕವಾಗಿ ಕೆಲಸ ಮಾಡದಿದ್ದರೇ ಯಾರಿಗಾದರೂ ಸಿಟ್ಟು ಬಂದೆ ಬರುತ್ತದೆ.ತೀರ್ಥಹಳ್ಳಿ ಆರಗ ಜ್ಞಾನೇಂದ್ರರವರು ಸಹ ಇದೇ ಕಾರಣಕ್ಕೆ ಸಿಟ್ಟುಮಾಡಿಕೊಂಡ ಘಟನೆ ನಡೆದಿದೆ.

ನಡೆದಿದ್ದೇನು? 

ತೀರ್ಥಹಳ್ಳಿಯ ಬಾಳೆ ಕೂಡ್ಲು, ಗುಡ್ಡೆಪಾಲ್ ರಸ್ತೆ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು,ಅಲ್ಲದೆ ಇದೇ ವಿಚಾರವನ್ನು ಸಚಿವ ಆರಗ ಜ್ಞಾನೇಂದ್ರರವರ ಗಮನಕ್ಕೆ ತಂದಿದ್ದರು. ಹೀಗಾಗಿ ಗುಣಮಟ್ಟವನ್ನ ಖುದ್ದು ವೀಕ್ಷಿಸುವ ಸಲುವಾಗಿ ಸಚಿವರು ಸ್ಥಳಕ್ಕೆ ದೌಡಾಯಿಸಿದ್ಧಾರೆ. ಈ ವೇಳೆ ರಸ್ತೆಯ ಸ್ಥಿತಿಯನ್ನು ಗಮನಿಸಿದ ಆರಗ ಜ್ಞಾನೇಂದ್ರರವರು, ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಗುಣಮಟ್ಟದ ಕಾಮಗಾರಿಯನ್ನ ಕೈಗೊಳ್ಳದ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಸಚಿವರು, ನಾವು ಕಷ್ಟಪಟ್ಟು ಸರ್ಕಾರದಿಂದ ದುಡ್ಡು ತಂದು ಕಾಮಗಾರಿ ಮಾಡಿಸ್ತೀವಿ, ಕಷ್ಟಪಟ್ಟು ಕೆಲಸ ಮಾಡಿ ಜನರ ಕೈಲಿ ನಾವು ಬೈಸ್ಕೋಬೇಕಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ರು. ಅಲ್ಲದೆ, ಮಾನ ಮರ್ಯಾದೆ ಇರಬೇಕು ಎಂದ ಸಚಿವರು, ನಾನು ನಿಷ್ಟೂರ ಮಾಡಿಸಿಕೊಳ್ಳಬೇಕಾ? ನಾನು ರೋಡಿನಲ್ಲಿ ನಿಂತು ನಾನು ಕೆಲಸ ಮಾಡಿಸೋಕೆ ಆಗುತ್ತಾ ಎಂದು ಪ್ರಶ್ನಿಸಿದರು. ಅಲ್ಲದೆ ಅವರ ಪರ್ಸಂಟೇಜ್​ ಅವರು ತಿಂದು ಇವರ ಪರ್ಸೆಂಟೇಜ್​ ಇವರು ತಗೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಸದ್ಯ ಆರಗ ಜ್ಞಾನೇಂದ್ರರವರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಚರ್ಚೆಗು ಗ್ರಾಸವಾಗಿದೆ. 

Read/ comrade lingappa shivamogga/ ಈ ವಿಶೇಷ ಮಹನೀಯರು ಇನ್ನು ಮಾತಿಗೆ ಸಿಗರು! ಕ್ರಾಮೆಡ್​ ಲಿಂಗಪ್ಪರ ಹೆಗ್ಗಳಿಕೆ ಎಂತದ್ದು ಗೊತ್ತಾ

Read / ಗೊಂಬೆ ಭವಿಷ್ಯದಲ್ಲಿ ರಾಜಕಾರಣದ ಬಲಾವಣೆಯ ಸುಳಿವು! ಬಿಎಸ್​ವೈರ ಅಧಿಕಾರದ ಬಗ್ಗೆಯು ತಿಳಿಸಿದ್ದ ಯುಗಾದಿ ಅಮಾವಾಸ್ಯೆಯ ಹೇಳಿಕೆ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today,Araga Jnanendra, Guliga, Shivaduthe Pillige, Thirthahalli Politics, Araga Jnanendra, Kimmane Ratnakar, RM Manjunath Gowda, Shimoga Politics, Shimoga News, Home Minister, Insult to Guliga, Viral, Congress, Thirthahalli, BJP Karnataka, ಆರಗ ಜ್ಞಾನೇಂದ್ರ, ಗುಳಿಗ, ಶಿವದೂತೆ ಗುಳಿಗೆ, ತೀರ್ಥಹಳ್ಳಿ ರಾಜಕಾರಣ, ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಆರ್​ಎಂ ಮಂಜುನಾಥ್ ಗೌಡ, ಶಿವಮೊಗ್ಗ ರಾಜಕಾರಣ, ಶಿವಮೊಗ್ಗ ಸುದ್ದಿ, ಗೃಹಸಚಿವರು, ಗುಳಿಗಕ್ಕೆ ಅವಮಾನ, ವೈರಲ್, ಕಾಂಗ್ರೆಸ್​, ತೀರ್ಥಹಳ್ಳಿ, ಬಿಜೆಪಿ ಕರ್ನಾಟಕ, 

Share This Article