ಅರ್ಜುನ ಆನೆಯಾಗಿ ಸಕ್ರೆಬೈಲಿನ ಸಾಗರ್​ ಆನೆ.? ಸಂಪೂರ್ಣವಾಗಿ ಸಕ್ರೆಬೈಲಿನಲ್ಲಿ ಚಿತ್ರೀಕರಣಗೊಂಡ ಈ ಚಿತ್ರ ಜನವರಿ 30 ಕ್ಕೆ ತೆರೆಗೆ

ಶಿವಮೊಗ್ಗ : ಅರಣ್ಯ ಸಂರಕ್ಷಣೆಯಲ್ಲಿ ಮಾವುತ ಮತ್ತು ಆನೆಯ ಪಾತ್ರ ಎಷ್ಟು ದೊಡ್ಡದು ಎಂಬ ಕಥಾಹಂದರ ಹೊಂದಿರುವ ಮಾವುತ ಚಿತ್ರವು ಇದೇ ಜನವರಿ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 

SUNCONTROL_FINAL-scaled

ಶಿವಮೊಗ್ಗ ಸುದ್ದಿ ರೌಂಡ್ಸ್​ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್​ ಕುಮಾರ್|ಕಾಶಿಪುರ ಗೇಟ್​ ಬಳಿ ವೃದ್ಧನ ಸಾವು!

ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ.ಚಿತ್ರದ ನಾಯಕ ನಟ ಹಾಗೂ ನಿರ್ಮಾಪಕ ಲಕ್ಷ್ಮೀಪತಿ ಬಾಲಾಜಿ ಮಾತನಾಡಿ, ಕಾಡಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ಮಾವುತ ಮತ್ತು ಆನೆ ಹೇಗೆ ಎದುರಿಸುತ್ತಾರೆ ಹಾಗೂ ಅರಣ್ಯ ರಕ್ಷಣೆಯಲ್ಲಿ ಅವರ ಕೊಡುಗೆ ಏನು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಪ್ರತಿಯೊಂದು ಜೀವಿಗೂ ಅಗತ್ಯವಿರುವ ಕಾಡನ್ನು ಉಳಿಸಿ ಬೆಳೆಸಿ ಎಂಬ ಸಂದೇಶವೇ ಚಿತ್ರದ ಜೀವಾಳವಾಗಿದೆ. ವಿಶೇಷವಾಗಿ ಸಕ್ರೆಬೈಲಿನ ‘ಸಾಗರ್’ ಎಂಬ ಆನೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ನಿರ್ದೇಶಕ ರವಿಶಂಕರ್ ನಾಗ್ ಅವರು ಕಥೆಯ ಹುಟ್ಟಿನ ಬಗ್ಗೆ ವಿವರಿಸುತ್ತಾ, ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಯ ಸಾವು ಮತ್ತು ಆ ಸಂದರ್ಭದಲ್ಲಿ ಮಾವುತ ವಿನು ಪಟ್ಟ ವೇದನೆ ಈ ಚಿತ್ರಕಥೆಗೆ ಪ್ರೇರಣೆ ನೀಡಿತು. ಆನೆ ಮತ್ತು ಮಾವುತನ ನಡುವಿನ ಅವಿನಾಭಾವ ಸಂಬಂಧ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ಅವರ ಪಾತ್ರದ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ರೂಪಿಸಲಾಗಿದೆ. ಈ ಚಿತ್ರದಲ್ಲಿ ಸಕ್ರೆಬೈಲಿನ ಸಾಗರ್​  ಆನೆಗೆ ಅರ್ಜುನ ಎಂದು ಹೆಸರಿಟ್ಟಿದ್ದು , ಇದನ್ನು ಚಿತ್ರದಲ್ಲಿ ಪೂರ್ಣಪ್ರಮಾಣದಲ್ಲಿ ಬಳಸಿಕೊಂಡಿದ್ದೇವೆ, ಚಿತ್ರದ ಬಹುಪಾಲು ಚಿತ್ರೀಕರಣ ಸಕ್ರೆಬೈಲಿನಲ್ಲಿ ನಡೆದಿದೆ ಎಂದರು.

Mavutha Movie Sakrebailu Sagar Elephant as Arjuna
Mavutha Movie Sakrebailu Sagar Elephant as Arjuna

ಚಿತ್ರದಲ್ಲಿ ಮಹಾಲಕ್ಷ್ಮಿ ನಾಯಕಿಯಾಗಿ ನಟಿಸಿದ್ದು, ಥ್ರಿಲ್ಲರ್ ಮಂಜು, ಪದ್ಮಾವಾಸಂತಿ, ಲಯಕೋಕಿಲ ಹಾಗೂ ಮಿಮಿಕ್ರಿ ಮಂಜು ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ವಿನು ಮನಸು ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸ್ವತಃ ಲಕ್ಷ್ಮೀಪತಿ ಬಾಲಾಜಿ ಬಂಡವಾಳ ಹೂಡಿದ್ದಾರೆ.

shivamogga car decor sun control house
shivamogga car decor sun control house

Mavutha Movie Sakrebailu Sagar Elephant as Arjuna

SUNCONTROL_FINAL-scaled