ತೀರ್ಥಹಳ್ಳಿ : ತೀರ್ಥಹಳ್ಳಿಯ ಗ್ರಾಮವೊಂದರಲ್ಲಿ ಅಡಿಕೆ ಛೇಣೆ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೊಬ್ಬ, ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಪಿಕಪ್ ವಾಹನವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು ಗ್ಯಾರಂಟಿ
ದೂರುದಾರರು ತಮ್ಮ ಅಡಿಕೆ ಛೇಣಿ ಕೆಲಸಕ್ಕಾಗಿ ಹೊರ ಜಿಲ್ಲೆಗಳಿಂದ ಸುಮಾರು 40 ಕಾರ್ಮಿಕರನ್ನು ಕರೆತಂದಿದ್ದರು. ಅದರಲ್ಲಿ ವಿಜಯನಗರ ಜಿಲ್ಲೆಯ ವ್ಯಕ್ತಿಯೊಬ್ಬನೂ ಕೂಡ ಇದ್ದನು. ಆತನು ತಡರಾತ್ರಿ ಸುಮಾರು 12 ಗಂಟೆಯ ಸುಮಾರಿಗೆ ಮನೆಯ ಕಾಂಪೌಂಡ್ ಬಳಿ ನಿಲ್ಲಿಸಿದ್ದ ಮಹೇಂದ್ರ ಬುಲೇರೋ ವಾಹನವನ್ನ ಕಳ್ಳತನ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಾಹನ ಕಾಣೆಯಾದ ಕೂಡಲೇ ಮಾಲೀಕರು ಮತ್ತು ಮನೆಯವರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆರೋಪಿಯ ಊರಾದ ವಿಜಯನಗರದ ಗ್ರಾಮವೊಂದರಲ್ಲಿಯೂ ಸಹ ವಿಚಾರಿಸಲಾಗಿದ್ದು, ಆತ ಅಲ್ಲಿಗೂ ತಲುಪಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.


