ಮಾಡಾಳ್ ಲೋಕಾ ರೇಡ್​ ಎಫೆಕ್ಟ್! ಚೆನ್ನಗಿರಿ ಕ್ಷೇತ್ರಕ್ಕೆ ಜೀವಪರವಾಗುತ್ತಾರಾ ಡಾ.ಧನಂಜಯ್ ಸರ್ಜಿ!? ಏನಿದು ಚರ್ಚೆ!?

Malenadu Today

MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ನಗರದ ಕ್ಷೇತ್ರದಲ್ಲಿ ಜೀವಪರ ಧ್ವನಿ ಇಟ್ಟುಕೊಂಡು ಚುನಾವಣಾ ಅಖಾಡಕ್ಕೆ ಇಳಿಯಲು ಮುಂದಾಗಿದ್ದ ಡಾ.ಧನಂಜಯ್​ ಸರ್ಜಿ ಬಳಿಕ ಬಿಜೆಪಿ ಸೇರಿ, ಅಲ್ಲಿಯೇ ಟಿಕೆಟ್​ಗಾಗಿ ಪ್ರಯತ್ನಿಸ್ತಿದ್ದಾರೆ. ಇದರ ನಡುವೆ ಅವರಿಗೆ ಚೆನ್ನಗಿರಿ ಕ್ಷೇತ್ರ ನೀಡುತ್ತಾರೆ ಎಂಬ ಮಾತುಗಳು ಚರ್ಚೆಯಾಗುತ್ತಿದೆ. ‘

Malenadu Today

READ | ಶಿವಮೊಗ್ಗ ವಿಮಾನ ನಿಲ್ದಾಣದ ಈ ದೃಶ್ಯವನ್ನು ನೀವು ನೋಡಿದ್ದೀರಾ!? ಇಲ್ಲಿದೆ ನೋಡಿ ವಿಡಿಯೋ

ಮಾಡಾಳ್ ವಿರೂಪಾಕ್ಷಪ್ಪರ ಕ್ಷೇತ್ರದಲ್ಲಿ ಮತ್ತೆ ಮಾಡಾಳ್ ರಿಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಮುಖಭಂಗ ಪಕ್ಕಾ! ಅಲ್ಲದೆ ಅವರು ಸಹ ಸದ್ಯ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತಮ ಇಮೇಜ್ ಇರುವ ವ್ಯಕ್ತಿಗಾಗಿ ಬಿಜೆಪಿ ಹುಡುಕಾಡುತ್ತಿದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಘಪರಿವಾರದ ಕಣ್ಣು, ಡಾ.ಧನಂಜಯ್ ಸರ್ಜಿಯವರ ಮೇಲೆ ಬಿದ್ದಿದೆ ಎಂಬ ಮಾತು ಸಹ ಕೇಳಿಬಂದಿದೆ. 

Malenadu Today

ಅಸಲಿಗೆ ಮೂಲತಃ ಚೆನ್ನಗಿರಿಯವರಾದ ಡಾ.ಧನಂಜಯ್ ಸರ್ಜಿಯವರು, ಅಲ್ಲಿಯೇ ಅಪಾರ ಬಂಧುಬಳಗವನ್ನು ಸಹ ಹೊಂದಿದ್ದಾರೆ. ಆದರೆ ಶಿವಮೊಗ್ಗ ಅವರ ಕಾರ್ಯಕ್ಷೇತ್ರವಾಗಿದ್ದು, ಶಿವಮೊಗ್ಗ ನಗರದ ಟಿಕೆಟ್ ಗಾಗಿಯೇ ಅವರು ಪ್ರಯತ್ನಿಸುತ್ತಿದ್ಧಾರೆ. ಇದರ ಮಧ್ಯೆ ಚೆನ್ನಗಿರಿ ಕ್ಷೇತ್ರದ ಗೆಲುವಿಗೆ ಪಕ್ಷ ಯೋಚಿಸುತ್ತಿದ್ದು, ಅದಕ್ಕಾಗಿ ಸರ್ಜಿಯವರ ಆಯ್ಕೆ ಉತ್ತಮ ಎಂಬ ಚರ್ಚೆ ನಡೆದಿದೆಯಂತೆ. ಇನ್ನೂ ಈ ಕ್ಷೇತ್ರದಲ್ಲಿ ವಿರೂಪಾಕ್ಷಪ್ಪರ ಪುತ್ರ  ಮಲ್ಲಿಕಾರ್ಜುನ್​ ಹಾಗೂ  ಹೆಚ್​.ಎಸ್​.ಶಿವಕುಮಾರ್ ರ ನಡುವೆ ಟಿಕೆಟ್​ಗಾಗಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಸರ್ಜಿಯವರ ಹೆಸರು ತೂರಿಕೊಂಡು ಬಂದಿದೆ. ಅಂತಿಮವಾಗಿ ಯಾರಿಗೆ ಟಿಕೆಟ್? ಅದನ್ನ ಬಿಜೆಪಿ ಹೈಕಮಾಂಡ್ ಹೇಳುತ್ತದೆ

READ| SHIVAMOGGA AIRPORT ಗೆ ಪ್ರಧಾನಿ ಮೋದಿ ಬರುವ ಮುನ್ನ, ವಾಯುಸೇನೆ ವಿಮಾನದ ಟ್ರಯಲ್​ ರನ್​! ಏನಿದು? ಏತಕ್ಕಾಗಿ? ಹೇಗೆ ನಡೀತು? ವಿವರ ಇಲ್ಲಿದೆ

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!

Share This Article