ಆಕ್ಸಿಡೆಂಟ್ ಆಗಿ ಹೆದ್ದಾರಿಗೆ ಅಡ್ಡ ನಿಂತ ಲಾರಿ! ಅಪಘಾತದಿಂದ ಜಸ್ಟ್​ ಮಿಸ್ ಆಯ್ತು ಬಸ್! ಏನಿದು ಹೊಸನಗರದ ದಾರಿಯಲ್ಲಿ ನಡೆದ ಘಟನೆ?

Malenadu Today

KARNATAKA NEWS/ ONLINE / Malenadu today/ Jul 8, 2023 SHIVAMOGGA NEWS  

ಹೊಸನಗರ ತಾಲ್ಲೂಕಿನ ಸೂಡೂರು ಸೇತುವೆ ಬಳಿಯಲ್ಲಿ ಲಾರಿಯೊಂದು ಅಪ್​ಸೆಟ್ ಆಗಿ, ಮರಕ್ಕೆ ಗುದ್ದಿ,  ರಾಜ್ಯ ಹೆದ್ಧಾರಿಗೆ ಅಡ್ಡಲಾಗಿ ನಿಂತು ಬಿಟ್ಟಿತ್ತು. ಇನ್ನೂ ಇದೇ ಸಂದರ್ಭದಲ್ಲಿ ಶಿವಮೊಗ್ಗ ಕಡೆಯಿಂದ ಬಂದ ಬಸ್​ವೊಂದು, ಲಾರಿ ಅಡ್ಡವಾಗಿ ನಿಂತಿರುವುದು ಗೊತ್ತಾಗದೇ ಡಿಕ್ಕಿಯಾಗುವ ಸನ್ನಿವೇಶ ಸೃಷ್ಟಿಯಾಗಿತ್ತು. ಕೊನೆಕ್ಷಣದಲ್ಲಿ ಚಾಲಕ ಬಸ್​ನ್ನ ನಿಯಂತ್ರಣಕ್ಕೆ ತೆಗೆದುಕೊಂಡರಾದರೂ, ಒಂದು ಕಡೆ ರಸ್ತೆಬದಿಯಲ್ಲಿ ಬಸ್ ವಾಲಿ ನಿಂತಿದೆ. 

ಒಂದರ ಹಿಂದೆ ಒಂದರಂತೆ ನಡೆದ ಎರಡು ಘಟನೆಗಳಿಂದ ಹೊಸನಗರ ಹೆದ್ದಾರಿ  ಸುಮಾರು ಐದು ಗಂಟೆಗಳ ಕಾಲ ಬಂದ್ ಆಗಿತ್ತು. ಆನಂತರ ಸ್ಥಳಕ್ಕೆ ಕ್ರೇನ್​ ತರಿಸಿ ಲಾರಿಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯ್ತು.  


ನೇಣು ಬಿಗಿದುಕೊಂಡು ತೀರ್ಥಹಳ್ಳಿಯ ಯುವಕ ಆತ್ಮಹತ್ಯೆ! ಕಾರಣವೇನು? ಪೊಲೀಸ್​ ಇಲಾಖೆಗೆ ವಿರುದ್ಧವೇಕೆ ಕೇಳಿಬರ್ತಿದೆ ದೂರು?

ಶಿವಮೊಗ್ಗ ಜಿಲ್ಲೆ  ತೀರ್ಥಹಳ್ಳಿ : ತಾಲೂಕಿನ ಶೇಡ್ಗಾರ್ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ  ಕಟ್ಟೆಹಕ್ಲಿನಲ್ಲಿ  22 ವರ್ಷದ ಯುವಕನೊಬ್ಬ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮೃತ ಯುವಕ ಸ್ಥಳೀಯ ನಿವಾಸಿ ಮಿಥುನ್​ ಶೆಟ್ಟಿ ಎಂದು ಗೊತ್ತಾಗಿದೆ. 

ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಈತನ ಸಾವಿಗೆ ಪೊಲೀಸ್ ಇಲಾಖೆಯ ಅಧಿಕೃತ ಕಾರಣ ಗೊತ್ತಾಗಿಲ್ಲ., ಸ್ಥಳೀಯರು ಕ್ರಿಕೆಟ್ ಬೆಟ್ಟಿಂಗ್​ನ ಸಾಲವೇ ಆತ್ಮಹತ್ಯೆಗೆ ಕಾರಣ ಎನ್ನುತ್ತಿದ್ದಾರೆ. ಪೊಲೀಸರು ಅಸ್ವಾಭಾವಿಕ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿಯೇ ಸದ್ದು ಮಾಡುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾತನಾಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ಧಾರೆ. 


ಯಶವಂತಪುರ-ಶಿವಮೊಗ್ಗ ರೈಲಿಗೆ ಸಿಲುಕಿಗೆ ತುಮಕೂರು ಮೂಲದ ಟ್ರೈನಿ ಪೊಲೀಸ್ ಕಾಲು ಕಟ್! ಶಿವಮೊಗ್ಗದ ಮಹಾದೇವಿ ಟಾಕೀಸ್ ಬಳಿಯ ನಿಲ್ದಾಣದಲ್ಲಿ ಘಟನೆ

ಯಶವಂತಪುರ – ಶಿವಮೊಗ್ಗ (16581/Yesvantpur – Shivamogga Town Express)  ರೈಲಿಗೆ ಸಿಲುಕಿ ತರಭೇತಿಯಲ್ಲಿರುವ ಪೊಲೀಸ್ ಸಿಬ್ಬಂದಿಯ ಕಾಲು ತುಂಡಾಗಿದೆ. ಈ ಘಟನೆ ಶಿವಮೊಗ್ಗ ನಗರದ ಮಹಾದೇವಿ ಟಾಕೀಸ್ ಬಳಿ ಇರುವ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ. ಇವತ್ತು ಮಧ್ಯಾಹ್ನ ನಡೆದ ಘಟನೆಯಲ್ಲಿ ನಾಗರಾಜ್​ ಎಂಬವರ ಕಾಲು ಕಟ್ ಆಗಿದ್ದು, ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. 

ಘಟನೆ ನಡೆದಿದ್ದೇಗೆ?

ಯಶವಂತಪುರದಿಂದ ಬರುತ್ತಿದ್ದ ಟ್ರೈನ್​ನಲ್ಲಿ ನಾಗರಾಜ್​ ರವರು ಆಗಮನಿಸಿದ್ದಾರೆ. ನಿಲ್ದಾಣದ ಬಳಿ ಅವರು ಇಳಿಯುವಾಗ ಎಡವಿ ಟ್ರೈನ್​ನ ಚಕ್ರಕ್ಕೆ ಕಾಲು ಸಿಲುಕಿಕೊಂಡಿದೆ. ತಕ್ಷಣವೇ ಅಲ್ಲಿದ್ದವರು ಬಂದು ನಾಗರಾಜ್​ರನ್ನ ರಕ್ಷಿಸಿದ್ಧಾರೆ. ಮೂಲತಃ ತುಮಕೂರಿನ ಕುಣಿಗಲ್ ಮೂಲದವರಾದ ನಾಗರಾಜ್​, ಕಡೂರಿನಲ್ಲಿರುವ ಪೊಲೀಸ್​ ತರಭೇತಿ ಸಂಸ್ಥೆಯಲ್ಲಿ ತರಭೇತಿ ಪಡೆಯುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.  

 

 

Share This Article