leopard : ಮನೆಯ ಜಗಲಿಯಲ್ಲಿ ಹಾದು ಹೋದ ಚಿರತೆ | ಸಿಸಿಟಿವಿಯಲ್ಲಿ  ದೃಶ್ಯ ಸೆರೆ

 ಎಪಿಎಂಸಿ ಮಾಜಿ ಸದಸ್ಯೆ ಟಿ.ವಿ ಸುಜಾತ ಅವರ ತೋಟದ ಮನೆಯಲ್ಲಿ ಸೋಮವಾರ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಅದರ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ.

leopard : ನಾಯಿಯ ಬೇಟೆಗೆಂದು ಬರುವ ಚಿರತೆ

ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮಕ್ಕೆ ಸಮೀಪದಲ್ಲಿರುವ ಟಿವಿ ಸುಜಾತರವರ ಮನೆಯಲ್ಲಿ ರಾತ್ರಿ 9:30ರ ಸುಮಾರಿಗೆ ಸಾಕು ನಾಯಿಗಳು ಬೊಗಳಲು ಆರಂಭಿಸಿದವು. ಇದರಿಂದ ಮನೆಯವರು ನಾಯಿಗಳು ಏಕೆ ಬೊಗಳುತ್ತಿವೆ ಎಂದು ಪರಿಶೀಲಿಸಲು ಕಿಟಕಿ ತೆಗೆದು ನೋಡಿದ್ದಾರೆ. ಆಗ ಮನೆಯ ಜಗಲಿಯ ಮೇಲೆ ಚಿರತೆಯೊಂದು ಹಾದುಹೋಗಿದೆ.ಇದನ್ನು ನೋಡಿದ ಮನೆಯವರು ಆತಂಕಗೊಂಡಿದ್ದಾರೆ.ಈ ಹಿಂದೆಯೂ ಸಹ ಇವರ ಮನೆಯಲ್ಲಿ ಚಿರತೆಗಳು ನಾಯಿ ಹಾಗೂ ಬೆಕ್ಕುಗಳ ಬೇಟೆಗೆಂದು ಬಂದು ನಾಯಿಯನ್ನು ಹೊತ್ತೊಯ್ದಿರುವ ದೃಷ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿತ್ತು.

Leave a Comment