Bhadravathi : ಶಿವಮೊಗ್ಗ ಭದ್ರಾವತಿ ಹೆದ್ದಾರಿಯ ಕಡದಕಟ್ಟೆಯಲ್ಲಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆಯನ್ನು ಇಂದು ಮಧ್ಯಾಹ್ನ 12 ಗಂಟೆಗೆ ಸಂಸದ ಬಿವೈ ರಾಘವೇಂದ್ರ ಉದ್ಘಾಟನೆ ಮಾಡಲಿದ್ದಾರೆ.

bhadravathi : 23 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ
ಕಳೆದ ಮೂರು ವರ್ಷಗಳ ಹಿಂದೆ 2022 ನೇ ಇಸವಿಯಲ್ಲಿ ಸುಮಾರು 23 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಕಾರ್ಯವನ್ನ ಆರಂಭಿಸಲಾಗಿತ್ತು. ಹೈದರಾಬಾದ್ನ ಎಸ್ ಆರ್ ಸಿ ಇನ್ ಪ್ರಾ ಪ್ರೈವೆಟ್ ಲಿಮಿಟೆಡ್ ಕಂಪನಿ ಸೇತುವೆ ನಿರ್ಮಾಣದ ಗುತ್ತಿಗೆಯನ್ನು ಪಡೆದಿತ್ತು. ಸೇತುವೆ ಕಾಮಗಾರಿ ತಡವಾಗುತ್ತಿದ್ದರಿಂದ ಶಿವಮೊಗ್ಗ ಹಾಗೂ ಭದ್ರಾವತಿ ನಡುವೆ ಸಂಚರಿಸುವ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂದು ಆ ಸೇತುವೆ ಇಂದು ಉದ್ಘಾಟನೆಯಾಗಲಿದ್ದು, ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.
