theft crime : ಒಂದು ಕೇಸ್​ನಲ್ಲಿ ಇಬ್ಬರ ಬಂಧನ | ವಿಚಾರಣೆ  ವೇಳೆ ಬಯಲಾಯ್ತು 16 ಪ್ರಕರಣ

theft crime : ಶಿವಮೊಗ್ಗ ಪೊಲೀಸರು ಕಳ್ಳತನದ ಪ್ರಕರಣವೊಂದನ್ನು ಭೇದಿಸಿದ್ದು, ಕಳ್ಳರಿಂದ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ಮೌಲ್ಯದ ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

theft crime : ಏನಿದು ಘಟನೆ

ಏಪ್ರಿಲ್​ 05 ರಂದು ಶಿಕಾರಿಪುರದ ಸುಭೇದಾರ್​ ಕೇರಿಯ ವಾಸಿ ಫೈಜಾನ್​ ಭಾಷಾ ಎಂಬುವವರು ಪಲ್ಸರ್​ ಎಂಬ ಬೈಕ್​ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಹಿನ್ನೆಲೆ ಶಿಕಾರಿಪುರ ಟೌನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಕಳ್ಳರ ಪತ್ತೆಗಾಗಿ ಶಿಕಾರಿಪುರ ಟೌನ್​ ಪೊಲೀಸರ ನೇತೃತ್ವದಲ್ಲಿ ತನಿಖಾ  ತಂಡವನ್ನು ರಚಿಸಲಾಗಿತ್ತು. ಈ ಹಿನ್ನಲೆ ಕಳ್ಳರ ಪತ್ತೆಗಾಗಿ ಬಲೆ ಬೀಸಿದ ಪೊಲೀಸರಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ  ಆರೋಪಿಗಳಾದ ಪ್ರತಾಪ್, 33 ವರ್ಷ, ದೊಡ್ಡಲಿಂಗೇನಹಳ್ಳಿ, ತರೀಕೆರೆ ಚಿಕ್ಕಮಗಳೂರು ಮತ್ತು ಭೋಜರಾಜ, 32 ವರ್ಷ, ಬಿಳಚೋಡ್ ಗ್ರಾಮ, ಜಗಳೂರು ದಾವಣಗೆರೆ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆ ವೇಳೆ ಈ ಇಬ್ಬರ ಮೇಲೆ  ವಿವಿಧ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ  ಕಳ್ಳತನಕ್ಕೆ ಸಂಬಂಧಿಸಿದಂತೆ ಕೇಸ್​ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಆರೋಪಿಗಳಿಂದ ಒಟ್ಟು 20 ಲಕ್ಷದ 50 ಸಾವಿರ ಮೌಲ್ಯದ 16 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ

Leave a Comment