KSRTC ಆಯ್ತು, ಇದೀಗ ಖಾಸಗಿ ಬಸ್‌ಗಳ ದರ ಏರಿಕೆ ? ಬಸ್‌ ಮಾಲೀಕರ ಒತ್ತಾಯವೇನು?

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 8, 2025 ‌‌   

KSRTC ಬಸ್‌ ಟಿಕೆಟ್‌ ದರ ಏರಿಕೆ ಬೆನ್ನಲ್ಲೆ ಖಾಸಗಿ ಬಸ್‌ಗಳ ಮಾಲೀಕರು ಬಸ್‌ ಟಿಕೆಟ್‌ ದರ ಏರಿಸಲು ಅನುಮತಿ ಕೋರುತ್ತಿದ್ದಾರೆ. ಈ ಸಂಬಂಧ ಶಿವಮೊಗ್ಗದಲ್ಲಿ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಶೇ.20ರಷ್ಟು ಪರಿಷ್ಕರಣೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಬಸ್‌ ಮಾಲೀಕರ ಸಂಘ ಶಿವಮೊಗ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. 

- Advertisement -

ಮನವಿಯಲ್ಲಿ ಸಚಿವ ಸಂಪುಟ ತೀರ್ಮಾನದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚು ಮಾಡಲಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಬಸ್‌ಗಳ ದರ ಏರಿಕೆ ಅವಕಾಶ ಕಲ್ಪಿಸಬೇಕು ಸಚಿವ ರಾಮಲಿಂಗ ರೆಡ್ಡಿ ಖಾಸಗಿ ಸಾರಿಗೆ ಬಸ್‌ಗಳಿಗೂ ಏಕರೂಪ ದರ ನಿಗದಿಪಡಿಸಿ ದರಪರಿಷ್ಕರಣೆಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಲಾಗಿದೆ. 

ಕಳೆದ 10 ವರ್ಷಗಳಿಂದ ಪ್ರಯಾಣ ದರ ಪರಿಷ್ಕರಿಸಿಲ್ಲ. ಈ ಬಗ್ಗೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮೂರು ಸರ್ಕಾರಗಳು ಬದಲಾವಣೆಯಾಗಿದೆ. ಕರೋನಾ ಸಂದರ್ಭದಲ್ಲಿ ಬಸ್ ದರ ಹೆಚ್ಚಳ ಮಾಡಿಲ್ಲ. ಶಕ್ತಿ ಯೋಜನೆ ಮತ್ತು ಅತಿವೃಷ್ಟಿ ಕಾರಣದಿಂದ ಖಾಸಗಿ ಬಸ್ ಮಾಲೀಕರು ನಷ್ಟಕ್ಕೊಳ್ಳಗಾಗಿದ್ದಾರೆ. ಈ ಉದ್ಯಮವನ್ನೇ ನಂಬಿರುವ ಸಾವಿರಾರು ನೌಕರರಿದ್ದಾರೆ. ಹೊಸ ವಾಹನಗಳ ಖರೀದಿ ಬೆಲೆ, ಬಿಡಿ ಭಾಗಗಳ ಬೆಲೆ, ಹೆಚ್ಚಾಗಿದ್ದು, ಪ್ರಮಾಣದಲ್ಲಿ ದರ ಪರಿಷ್ಕರಣೆ ಆಗಿಲ್ಲ. ಇದಕ್ಕಾಗಿ ಪ್ರಯಾಣದ ಪರಿಷ್ಕರಣೆ ಆಯೋಗವನ್ನು ರಚಿಸಿ ಸಂದರ್ಭಕ್ಕೆ ತಕ್ಕಂತೆ ಬಸ್ ದರ ಪರಿಷ್ಕರಣೆಗೆ ಅನುವು ಮಾಡಿಕೊಟ್ಟಲ್ಲಿ, ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಲಾಗಿದೆ.

SUMMARY |  Minister Ramalinga Reddy, Shivamogga District Collector, appeal for private bus ticket price hike after KSRTC bus ticket price hike

KEY WORDS | Minister Ramalinga Reddy, Shivamogga District Collector , private bus ticket price hike , KSRTC bus ticket price hike

Share This Article