ಶಿವಮೊಗ್ಗ ಜಿಲ್ಲೆ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಉಳಿಸಿಕೊಳ್ಳುವ ಹೋರಾಟ ನಿಧಾನವಾದರೂ ಸಹ, ಬರಬರುತ್ತಾ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಾರ್ಮಿಕರ ಹೋರಾಟದ ಪರಿಣಾಮವಾಗಿ, ಈ ಮೊಲದು ಏನೂ ಆಗದು ಎಂದು ಕೈಚೆಲ್ಲಿದ್ದ ರಾಜಕೀಯ ಪಕ್ಷಗಳು ಪಸ್ತುತ ಹೊಸ ಹೊಸ ಮಾತುಗಳನ್ನು ಆಡುವಂತಾಗಿದೆ. ಇನ್ನೂ ರಾಜಕೀಯವಾಗಿಯು ವಿಐಎಸ್ಎಲ್ ಹೋರಾಟ ಚುನಾವಣಾ ಟ್ರಂಪ್ ಕಾರ್ಡ್ ಆಗುತ್ತಿದೆ.ಇದಕ್ಕೆ ಪೂರಕವಾಗಿ ಮಾತಕೊಟ್ಟಂತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ನಿನ್ನೆ ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಎದುರು ಬಂದು ಪ್ರತಿಭಟನೆ ನಡೆಸಿದ್ರು.
ಈ ವೇಳೆ ಮಂಡ್ಯದಿಂದ ಬಂದು ಶಿವಮೊಗ್ಗದಲ್ಲಿ ರಾಜಕೀಯ ಶಕ್ತಿಯಾಗಿ ಬೆಳೆದಿದ್ದೀರಿ ಈ ಮಣ್ಣಿನ ಋಣಕ್ಕಾದರೂ ವಿಐಎಸ್ಎಲ್ನ್ನು ಉಳಿಸಿಕೊಳ್ಳಿ ಎಂದು ಮಂಡ್ಯ ಹಾಗೂ ಭದ್ರಾವತಿ ನಡುವಿನ ಭಾವನಾತ್ಮಕ ನಂಟು ಬೆರೆಸಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಹೆಚ್ಡಿಕೆ ಸವಾಲು ಹಾಕಿದರು. ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ .
ಸರ್.ಎಂ ವಿಶ್ವೇಶ್ವರಾಯ ಹಾಗು ಮೈಸೂರು ಮಹಾರಾಜರ ಪರಿಶ್ರಮದ ಫಲವಾಗಿ ಸ್ಥಾಪನೆಗೊಂಡಿರುವ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ರಾಜ್ಯದ ಜನತೆಗೆ ಉಳಿಸಿಕೊಡುವ ಮೂಲಕ ಬಿಎಸ್ವೈ ಶಿವಮೊಗ್ಗ ಜಿಲ್ಲೆಯ ಜನರ ಋಣ ತೀರಿಸಬೇಕೆಂದರು
ಕನಿಷ್ಟ ಮೂರು ತಿಂಗಳು ಉಳಿಸಿ
ಮಾಜಿ ಸಿಎಂ ಕುಮಾರಸ್ವಾಮಿ (hd kumaraswamy)ಬಿಎಸ್ವೈರಿಗೆ ಸವಾಲಿನ ಮಾತು ಹಾಕುತ್ತಾ ಕನಿಷ್ಟ ಪಕ್ಷ ಮುಂದಿನ 3 ತಿಂಗಳವರೆಗೆ ಯಾವುದೇ ಬೆಳವಣಿಗೆಗಳು ನಡೆಯದಂತೆ ನೋಡಿಕೊಳ್ಳಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ. ನಮ್ಮ ಸರ್ಕಾರ ಶೇ.40 ಕಮಿಷನ್ ದಂಧೆಗೆ ಕಡಿವಾಣ ಹಾಕಿ ಜನರ ತೆರಿಗೆ ಹಣದಲ್ಲಿ ಈ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲಿದೆ. ಉಕ್ಕು ಪ್ರಾಧಿಕಾರ ಯಾವುದೇ ಬಂಡವಾಳ ಹೂಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ಬಳಿ ನಾವು ಭಿಕ್ಷೆ ಬೇಡುವುದು ತಪ್ಪುತ್ತದೆ ಎಂದರು.
ಮೋದಿ ಆಗಮನದ ವೇಳೆ ಹೋರಾಟಕ್ಕೆ ಕರೆ
ಇನ್ನೂ ವಿಮಾನ ನಿಲ್ದಾಣದ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ಯಾವ ಪುರಷಾರ್ಥಕ್ಕೆ ಏರ್ಪೋರ್ಟ್ ಕಟ್ಟಿಕೊಂಡು ಓಡಾಡುತ್ತಿದ್ಧಾರೋ? ಕಾರ್ಮಿಕರನ್ನು ಬೀದಿಪಾಲು ಮಾಡಿದ್ಧಾರೆ. ಇದರ ನಡುವೆ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರಂತೆ. ಸಾವಿರ ಸಾವರಿ ಸಂಖ್ಯೆಯಲ್ಲಿ ಅಂದು ಹೋರಾಟ ಸಂಘಟಿಸಿ ಪ್ರತಿಭಟನೆ ತೀವ್ರಗೊಳಿಸಿ, ನಾನು ಬರುತ್ತೇನೆ, ಇಲ್ಲಿನ ಸಂಸದರಿಗೆ ಪ್ರಶ್ನಿಸುವ ದೈರ್ಯವಿಲ್ಲ. ಚುನಾವಣೆಗೆ ಬಂದು ಬಾಯಿಯೋ ಬೆಹೆನೋ ಅನ್ನೋದಲ್ಲ ಎಂದು ಟೀಕಿಸಿದರು.
\
