ಶಿವಮೊಗ್ಗದ 3 ಕ್ಷೇತ್ರಗಳಿಗೆ ಜೆಡಿಎಸ್​ ಅಭ್ಯರ್ಥಿಗಳ ಘೋಷಣೆ/ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?

ಜಾತ್ಯಾತೀತ ಜನತಾದಳ ಇವತ್ತು ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 93 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರು ನಿಕ್ಕಿಯಾಗಿದೆ. 

ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್​/ ಕೇಳೋರೆ ಇಲ್ಲದ ಅನಾಥೆ ಸಾವಿಗೆ, ನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್​/ EXCLUSIVE JP REPORT

ನಮ್ಮ ಸೋಶಿಯಲ್​ ಮೀಡಿಯಾ :   ಟ್ವಿಟ್ಟರ್ : ಫೇಸ್​ಬಕ್  : ಇನ್​ಸ್ಟಾಗ್ರಾಮ್  : ಟೆಲಿಗ್ರಾಂ : ವಾಟ್ಸ್ಯಾಪ್​

ಮಲೆನಾಡು ಟುಡೆ. ಕಾಂ, ಈ ಹಿಂದೆಯೇ ಎಕ್ಸ್​ಕ್ಲ್ಯೂಸಿವ್ ಆಗಿ ಜೆಡಿಎಸ್​ ಅಭ್ಯರ್ಥಿಗಳ ಹೆಸರನ್ನು ವರದಿ ಮಾಡಿತ್ತು. ಈ ಪೈಕಿ, ದಿಡೀರ್​ ಬೆಳವಣಿಗೆಯಲ್ಲಿ ಬಳಿಗಾರ್​ರವರು ಬಿಜೆಪಿ ಸೇರಿದ್ದರು. ಇದೀಗ ಜೆಡಿಎಸ್​ ಪ್ರಕಟಿಸಿರುವ ಅಧಿಕೃತ ಪಟ್ಟಿಯಲ್ಲಿ ಮೂರು ಕ್ಷೆತ್ರಗಳಿಗೆ ಮೂವರ ಹೆಸರು ಖಾಯಂ ಆಗಿದೆ. 

 ಇದನ್ನು ಸಹ ಓದಿ :ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಭದ್ರಾವತಿ ಕ್ಷೇತ್ರಕ್ಕೆ ಮಾಜಿ ಶಾಸಕ ಅಪ್ಪಾಜಿ ಗೌಡ ಅವರ ಪತ್ನಿ ಶಾರದಾ ಅಪ್ಪಾಜಿಗೌಡ, ತೀರ್ಥಹಳ್ಳಿ ಕ್ಷೇತ್ರಕ್ಕೆ ಯಡೂರು ರಾಜಾರಾಮ್ ಅವರ ಹೆಸರನ್ನು ಪ್ರಕಟಿಸಲಾಗಿದೆ.

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಇನ್ನೂ ಶಿವಮೊಗ್ಗ ನಗರ , ಸೊರಬ ಹಾಗೂ ಸಾಗರ ಕ್ಷೇತ್ರ ಮತ್ತು ಶಿಕಾರಿಪುರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಜೆಡಿಎಸ್​ ಇನ್ನಷ್ಟೆ ಮಾಡಬೇಕಿದೆ. ಶಿವಮೊಗ್ಗ ನಗರ ಕ್ಷೇತ್ರದಿಂದ ಎಂ.ಶ್ರೀಕಾಂತ್​ರವರು ಕಣಕ್ಕಿಳಿಯಬೇಕು ಎಂಬ ಒತ್ತಾಯ ಕಾರ್ಯಕರ್ತರದ್ಧಾಗಿದೆ. ಸದ್ಯ ಅವರ ಹೆಸರು ಜೆಡಿಎಸ್​ನ ಮೊದಲ ಪಟ್ಟಿಯಲ್ಲಿ ಕಂಡುಬಂದಿಲ್ಲ.

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ನಮ್ಮ ಸೋಶಿಯಲ್​ ಮೀಡಿಯಾ :   ಟ್ವಿಟ್ಟರ್ : ಫೇಸ್​ಬಕ್  : ಇನ್​ಸ್ಟಾಗ್ರಾಮ್  : ಟೆಲಿಗ್ರಾಂ : ವಾಟ್ಸ್ಯಾಪ್​

Leave a Comment