india Book of Records : ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ ( ಏಜ್ ಇಸ್ ಜಸ್ಟ್ ಎ ನಂಬರ್ ) ಈ ವಾಕ್ಯವನ್ನು ನಾವು ಆಗಾಗ ಕ್ರೀಡಾ ವಲಯ ಸೇರಿದಂತೆ ಇನ್ನಿತರೇ ಪ್ರದೇಶದಲ್ಲಿ ಕೇಳಿಯೇ ಇರುತ್ತೇವೆ. ಸಾಧನೆ ಮಾಡಬೇಕೆಂಬ ಛಲ ನಮ್ಮಲ್ಲಿದ್ದರೆ ಯಾವ ವಯಸ್ಸು ಅಡ್ಡ ಬರುವುದಿಲ್ಲ.ಅದಕ್ಕೆ ನಿದರ್ಶನವೆಂಬಂತೆ ಇಲ್ಲೊಬ್ಬ 1 ವರ್ಷ 11 ತಿಂಗಳ ಮಗು ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾನೆ.
ಹೌದು ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಹಳ್ಳಿಯ ನಿವಾಸಿ ಚೇತನ್ ಕುಮಾರ್ ಮತ್ತು ದಿವ್ಯ ಅವರ ಪುತ್ರ ಆರ್ಯನ್ ವಿಷಿಷ್ಟ ಸಾಧನೆ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದ್ದಾನೆ.
india Book of Records : ಆರ್ಯನ್ ಮಾಡಿದ ಸಾಧನೆ ಏನು
1.11 ವರ್ಷದ ಪುಟಾಣಿ ಆರ್ಯನ್ ಎನ್.ಸಿ. 38 ವಿವಿಧ ಬಗೆಯ ವಿಷಯಗಳನ್ನು ಗುರುತಿಸಿ ಜ್ಞಾಪಕ ಶಕ್ತಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ ಆಗಿದ್ದಾನೆ. ಈ ಮಗು 25 ತರಕಾರಿ, 8 ಗ್ರಹಗಳು, 23 ದೇಶಗಳ ಧ್ವಜಗಳು, 11 ಬಣ್ಣಗಳು, 21 ವೃತ್ತಿಪರರು, 8 ಕೀಟಗಳು, 8 ಪುಸ್ತಕಗಳು, 9 ಸಮುದ್ರ ಪ್ರಾಣಿಗಳು, 10 ಸಂಗೀತ ವಾದ್ಯಗಳು, 24 ಕಾರು ಲೋಗೋಗಳು, 11 ದೇಹದ ಆಂತರಿಕ ಭಾಗಗಳು, 24 ಸ್ವಾತಂತ್ರ್ಯ ಹೋರಾಟಗಾರರು, 25 ಹಣ್ಣು, 30 ವಾಹನಗಳು, 7 ದೇವತೆಗಳು, 14 ಗಣಿತ ಚಿಹ್ನೆಗಳು ಹೀಗೆ 38 ವಿವಿಧ ಬಗೆಯ ವಿಷಯಗಳನ್ನು ಗುರುತಿಸಿ ಅದನ್ನು ಹೇಳುತ್ತಾನೆ. ಈ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ದಾಖಲೆ ಮಾಡಿ ವಿಶಿಷ್ಟವಾದ ಕಿರಿಯ ಮಗು ಅನ್ನೋ ಸಾಧನೆ ಮಾಡಿ ಐಬಿಆರ್ ಸಾಧಕ ಬಿರುದು ಪಡೆದಿದ್ದಾನೆ.
