ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025: ಭದ್ರಾವತಿ ಪಟ್ಟಣದಲ್ಲಿ ಬೀಗ ಹಾಕಿದ್ದ ಮನೆಯನ್ನ ಗುರಿಯಾಗಿಸಿಕೊಂಡ ಕಳ್ಳರು ಸುಮಾರು 92 ಗ್ರಾಂ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ನಗದು ಸೇರಿದಂತೆ ಒಟ್ಟು ₹3,93,600 ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯ ಎಫ್ಐಆರ್ ಪ್ರಕಾರ, ಗಮನಿಸುವುದಾದರೆ, ಇಲ್ಲಿನ ಎಂಪಿಎಂ ಲೇಔಟ್‌ನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಕಳೆದ ಅಕ್ಟೋಬರ್ ಆರರಂದು, ಇಲ್ಲಿನ ಮನೆಯ ನಿವಾಸಿಗಳು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಗ್ರಾಮಕ್ಕೆ ತಿಥಿಯೊಂದರ ಕಾರ್ಯಕ್ಕೆ ತೆರಳಿದ್ದರು. ಇತ್ತ ಮನೆಯಲ್ಲಿದ್ದ ನಿವಾಸಿಗಳ ಮಗ ಅಕ್ಟೋಬರ್ ಏಳರಂದು ಬೆಂಗಳೂರಿಗೆ ತೆರಳಿದ್ದರು.
ಶಿವಮೊಗ್ಗ : ವೀರಭದ್ರ ಟಾಕೀಸ್ ಬಳಿ ಕುಸಿದು ಬಿದ್ದಿದ್ದ ವ್ಯಕ್ತಿ ಸಾವು! ಕೈ ಮೇಲಿತ್ತು ಸೂರ್ಯನ ಟ್ಯಾಟು!
ಈ ಮಧ್ಯೆ ಅಕ್ಟೋಬರ್ 7-8 ರ ನಡುವೆ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಹಿಂಬದಿಯ ಕಬ್ಬಿಣದ ಬಾಗಿಲನ್ನು ಮುರಿದು ಒಳನುಗ್ಗಿದ್ದ ಕಳ್ಳರು ಮಾಂಗಲ್ಯ ಸರ, ಬಳೆ, ಕಿವಿಯೋಲೆ, ಉಂಗುರ, ಬೆಳ್ಳಿಯ ಬಟ್ಟಲು, ಲೋಟ,ಕುಂಕುಮ ಬಟ್ಟಲು, ದೀಪಕಂಬ, ಲಕ್ಷ್ಮೀ ಮುಖವಾಡ ಸೇರಿದಂತೆ ₹3,93,600 ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. (in Bhadravathi Gold, Silver Worth ₹3.8 Lakh Stolen)

ಲಾಭಾಂಶದ ಆಸೆಗೆ ಗೋಲ್ಡ್ ಮೇಲೆ ಇನ್ವೆಸ್ಟ್ ಮಾಡಿ 18 ಲಕ್ಷ ಕಳೆದುಕೊಂಡ ವ್ಯಕ್ತಿ : ಏನಿದು ಘಟನೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

