3-4 ತಿಂಗಳಿನಲ್ಲಿ ಕಡಿದು ಗುಡ್ಡೆ ಹಾಕುವುದು ಏನೂ ಇಲ್ಲ ಅಂತಾ ಗೊತ್ತಿದೆ, ಆದರೂ ಸಚಿವಗಿರಿ ಬೇಕಷ್ಟೆ

ನಮ್ಮಿಬ್ಬರದ್ದು ಈಗಾಗಲೇ ಆಗಿದೆ, ಇನ್ನೂ ನಾಲ್ವರ ಪಟ್ಟಿ ಹಿಡಿದು ಬಸವರಾಜ ಬೊಮ್ಮಾಯಿರವರು, (CM Basavaraj Bommai) ಹೈಕಮಾಂಡ್ ಬಳಿ ಚರ್ಚಿಸ್ತಾರೆ, ಆನಂತರ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಗೊತ್ತಾಗಲಿದೆ ಎಂದಿದ್ದಾರೆ.

3-4 ತಿಂಗಳಿನಲ್ಲಿ ಕಡಿದು ಗುಡ್ಡೆ ಹಾಕುವುದು ಏನೂ ಇಲ್ಲ ಅಂತಾ ಗೊತ್ತಿದೆ, ಆದರೂ ಸಚಿವಗಿರಿ ಬೇಕಷ್ಟೆ
ಕೆ.ಎಸ್​.ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ

ಇನ್ನೇನು ಹಾ ಹೂ ಅನ್ನುವಷ್ಟರಲ್ಲಿ ಎಲೆಕ್ಷನ್​ ಡಿಕ್ಲೇರ್ ಆಗುತ್ತದೆ. ಅದರ ನಡುವೆ ಸಚಿವ ಸಂಪುಟ ಸರ್ಜರಿ ಬೇಕಾ ಎಂಬ ಪ್ರಶ್ನೆ ಬಿಜೆಪಿಯಲ್ಲಿಯೆ ಎದ್ದಿದೆ. ಇದರ ನಡುವೆ ಹಿರಿಯ ಮುಖಂಡ ಕೆ.ಎಸ್​.ಈಶ್ವರಪ್ಪರವರೇ ನನಗೆ ಸಚಿವ ಸ್ಥಾನ ಕೊಡಿ ಎಂದು ಪಟ್ಟು ಹಿಡಿದಿರೋದು ಕಮಲ ಪಾಳಯದಲ್ಲಿಯೇ ಇರಿಸು ಮುರಿಸು ಮೂಡಿಸ್ತಿದೆಯಷ್ಟೆ ಅಲ್ಲದೆ, ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟ..ಕಷ್ಟ ಎಂಬಂತಾಗಿದೆ.

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ಅತ್ತ ಕೇಂದ್ರ ಬಿಜೆಪಿ ಸಂಪುಟ ಸರ್ಜರಿಗೆ ಹೂಗುಟ್ಟುತ್ತಿಲ್ಲ, ಇತ್ತ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ (K S Eshwarappa,) ಹಾಗೂ ರಮೇಶ್​ ಜಾರಕಿಹೊಳಿ (Ramesh Jarkiholi)ಪಟ್ಟು ಬಿಡುತ್ತಿಲ್ಲ. ಇದರ ನಡುವೆ ಬೆಳಗಾವಿ ಅಧಿವೇಶನಕ್ಕೆ ( Belagavi Session) ಹೋಗಲ್ಲ ಎನ್ನುತ್ತಿದ್ದ ಈ ಇಬ್ಬರು ನಾಯಕರು ಇದೀಗ ಅಧಿವೇಶನಕ್ಕೆ ಹಾಜರಾಗಿದ್ದಾರೆ. 

ಇದನ್ನು ಸಹ ಓದಿ : ಶರಾವತಿ ಸಂತ್ರಸ್ತರ ಪರ ಸಂಸತ್​ನಲ್ಲಿ, ಮೋದಿ ಸರ್ಕಾರಕ್ಕೆ ಸಂಸದ B.Y. ರಾಘವೇಂದ್ರರವರು ಸಲ್ಲಿಸದ ಮನವಿಯಲ್ಲಿ ಏನಿದೆ? ವಿವರ ಓದಿ

ಈ ವೇಳೆ ಮಾತನಾಡಿದ ಕೆ.ಎಸ್​.ಈಶ್ವರಪ್ಪ, ಸಿಎಂ ಬಸವರಾಜ ಬೊಮ್ಮಾಯಿಯವರಿಂದ ಸಚಿವ ಸ್ಥಾನ ಸಿಗುವ ಭರವಸೆಯನ್ನು ವ್ಯಕ್ತಪಡಿಸಿದರು. ಸಿಎಂ ಮೇಲೆ ನಂಬಿಕೆ ಇಟ್ಟು ನಾನು ಮತ್ತು ರಮೇಶ್ ಜಾರಕಿಹೊಳಿ ಸದನಕ್ಕೆ ಹಾಜರಾಗುತ್ತಿದ್ದೇವೆ ಎಂದಿದ್ದಾರೆ. ಅಲ್ಲದೆ, ನಮ್ಮಿಬ್ಬರದ್ದು ಈಗಾಗಲೇ ಆಗಿದೆ, ಇನ್ನೂ ನಾಲ್ವರ ಪಟ್ಟಿ ಹಿಡಿದು ಬಸವರಾಜ ಬೊಮ್ಮಾಯಿರವರು, (CM Basavaraj Bommai) ಹೈಕಮಾಂಡ್ ಬಳಿ ಚರ್ಚಿಸ್ತಾರೆ, ಆನಂತರ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಗೊತ್ತಾಗಲಿದೆ ಎಂದಿದ್ದಾರೆ. 

ಇದನ್ನು ಸಹ ಓದಿ : ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್​ರವರಿಗೆ ಕಾಂಗ್ರೆಸ್​ ಟಿಕೆಟ್ ಖಚಿತ

ಈ ಮಧ್ಯೆ ಪ್ರಶ್ನೆಗೆ ಉತ್ತರಿಸ್ತಾ , ಕೆ.ಎಸ್​.ಈಶ್ವರಪ್ಪನವರು, ನಮ್ಮಿಬ್ಬರಿಗೂ ಕ್ಲೀನ್ ಚಿಟ್ ಸಿಕ್ಕಿದೆ, ಹಾಗಿದ್ದರೂ ಕ್ಯಾಬಿನೆಟ್​ಗೆ ಯಾಕೆ ತೆಗೆದುಕೊಂಡಿಲ್ಲ ಎಂದು ರಾಜ್ಯದ ಜನರು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ನಮ್ಮ ಬಳಿ ಉತ್ತರವಿಲ್ಲ. ನಮಗೆ ಸಚಿವ ಸ್ಥಾನ ಹೊಸದೇನು ಅಲ್ಲ, ಮೇಲಾಗಿ  3-4 ತಿಂಗಳಲ್ಲಿ ಕಡಿದು ಗುಡ್ಡೆ ಹಾಕೋದು ಏನು ಇಲ್ಲ ಎಂದು ನಮಗೂ ಗೊತ್ತು. ಇದು ಒಂದು ರೀತಿಯ ಪ್ರೆಸ್ಟೀಜ್ ಅಷ್ಟೇ. ಕಾರ್ಯಕರ್ತರಿಗೆ ಉತ್ತರ ಕೊಡಬೇಕಾಗಿದೆ ಎಂದು ತಮ್ಮ ನಿಲುವನ್ನ ಸಮರ್ಥಿಸಿಕೊಂಡಿದ್ದಾರೆ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link