ಶಿವಮೊಗ್ಗದ ಮುಸಲ್ಮಾನರು ಗಲಾಟೆ ಮಾಡೋರಲ್ಲ ನನಗೆ ನೂರಕ್ಕೆ ನೂರು ಗೊತ್ತು ! ಹಿಂದೂಗಳಲ್ಲೂ ಕೆಲ ತಲೆಹರಟೆಗಳಿದ್ದಾರೆ! ವೈರಲ್​ ಆಯ್ತು ಕೆ.ಎಸ್​. ಈಶ್ವರಪ್ಪರ ಹೇಳಿಕೆ

I know 100 per cent that the Muslims of Shimoga don't make ruckus! Eshwarappa's statement

ಶಿವಮೊಗ್ಗದ ಮುಸಲ್ಮಾನರು ಗಲಾಟೆ ಮಾಡೋರಲ್ಲ ನನಗೆ ನೂರಕ್ಕೆ ನೂರು ಗೊತ್ತು ! ಹಿಂದೂಗಳಲ್ಲೂ ಕೆಲ ತಲೆಹರಟೆಗಳಿದ್ದಾರೆ! ವೈರಲ್​ ಆಯ್ತು ಕೆ.ಎಸ್​. ಈಶ್ವರಪ್ಪರ ಹೇಳಿಕೆ
ಶಿವಮೊಗ್ಗದ ಮುಸಲ್ಮಾನರು ಗಲಾಟೆ ಮಾಡೋರಲ್ಲ ನನಗೆ ನೂರಕ್ಕೆ ನೂರು ಗೊತ್ತು ! ಹಿಂದೂಗಳಲ್ಲೂ ಕೆಲ ತಲೆಹರಟೆಗಳಿದ್ದಾರೆ! ವೈರಲ್​ ಆಯ್ತು ಕೆ.ಎಸ್​. ಈಶ್ವರಪ್ಪರ ಹೇಳಿಕೆ

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗದ ಮುಸಲ್ಮಾನರು ಗಲಾಟೆ ಮಾಡೋರಲ್ಲ ನನಗೆ ನೂರಕ್ಕೆ ನೂರು ಗೊತ್ತು. ಹಿಂದೂಗಳಲ್ಲಿಯು ಕೆಲ ತಲೆಹರಟೆಗಳಿದ್ದಾರೆ. ನಾನು ಇಲ್ಲ ಅನ್ನಲ್ಲ. ಮುಸ್ಲಿಮರಲ್ಲಿಯು ತಲೆಹರಟೆಗಳಿದ್ದಾರೆ. ಅವರೊಂದು ನಾಲ್ಕು ಜನ ಇವರೊಂದು ನಾಲ್ಕು ಜನ ಸೇರ್ಕೊಂಡು ತಲೆಹರಟೆ ಕೆಲಸಮಾಡಿದಾಗ ಗಲಾಟೆ ಶುರುವಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿರುವ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. 

ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ಶಫಿ ಎಂಬವರ ಫೇಸ್​ಬುಕ್​ನಲ್ಲಿ, ಈ ವಿಡಿಯೋ ಮೊದಲು ಪ್ರಕಟವಾಗಿದ್ದು, ಆನಂತರ ಸೋಶಿಯಲ್ ಮೀಡಿಯಾಗಳಲ್ಲಿ ಪರ-ವಿರೋಧ ಚರ್ಚೆಗಳೊಂದಿಗೆ ಹಂಚಿಕೆಯಾಗುತ್ತಿದೆ. 

ಏನಿದೆ ವಿಡಿಯೋದಲ್ಲಿ? 

ಮೂರು ದಿನಗಳ ಹಿಂದಿನ ವಿಡಿಯೋ ಇದಾಗಿದ್ದು, ಅಲ್ಪಸಂಖ್ಯಾತ ಮುಖಂಡರು ಕೆ.ಎಸ್​.ಈಶ್ವರಪ್ಪನವರೊಂದಿಗೆ ಸೇರಿದ್ದ ಸಭೆಯಲ್ಲಿ ಮಾಜಿ ಸಚಿವರು ಮಾತನಾಡಿದ್ದಾರೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರ ಮಾತು ಇಲ್ಲಿದೆ.. 

‘‘ ಶಿವಮೊಗ್ಗದ ಮುಸಲ್ಮಾನರು ಗಲಾಟೆ ಮಾಡೋರಲ್ಲ ನನಗೆ ನೂರಕ್ಕೆ ನೂರು ಗೊತ್ತು. ಹಿಂದೂಗಳಲ್ಲಿಯು ಕೆಲ ತಲೆಹರಟೆಗಳಿದ್ದಾರೆ. ನಾನು ಇಲ್ಲ ಅನ್ನಲ್ಲ. ಮುಸ್ಲಿಮರಲ್ಲಿಯು ತಲೆಹರಟೆಗಳಿದ್ದಾರೆ. ಅವರೊಂದು ನಾಲ್ಕು ಜನ ಇವರೊಂದು ನಾಲ್ಕು ಜನ ಸೇರ್ಕೊಂಡು ತಲೆಹರಟೆ ಕೆಲಸಮಾಡಿದಾಗ ಗಲಾಟೆ ಶುರುವಾಗುತ್ತದೆ, ಇಲ್ಲಾಂದ್ರೆ ತಣ್ಣಗೆ ಇರುತ್ತದೆ. ನಾನು ಏನು ಹೇಳಲು ಹೊರಟಿದ್ದೇನೆ. ನಾನು ತಪ್ಪು ಮಾಡಿದ್ರೆ ಇಲ್ಲಿಯೇ ಸಭೆಯಲ್ಲಿ ಹೇಳಿ, ಸಮಾಜದಲ್ಲಿ ಅಣ್ಣತಮ್ಮಂದಿರಂತೆ ಇರುತ್ತೇವೆ. ನಾನ್ಯಾವ ವಿಚಾರಕ್ಕೆ ಗಲಾಟೆ ಮಾಡುತ್ತೇನೆ ಎಂದರೆ ಉದಾಹರಣೆಗೆ ಹೇಳುವುದಾದರೆ, ಶಿವಪ್ಪನಾಯಕ ಸರ್ಕಲ್​ನಲ್ಲಿ ಎಸ್​ಡಿಡಿಪಿಐನವರು ಒಂದು ಸಮ್ಮೇಳನ ಮಾಡಿದ್ರರು. ಆ ಸಮ್ಮೇಳನದಲ್ಲಿ ಯಾವನೋ ಒಬ್ಬ ಹಿಂದೂಸ್ತಾನ್​ ಮುರದಾಬಾದ್, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ. ಸುಮ್ಮನಿರುತ್ತಾರಾ? ಯಾರಾದ್ರೂ ಇದನ್ನ ಕೇಳಿಕೊಂಡು, ನೀವು ಸುಮ್ಮನಿರುತ್ತೀರಾ? ನಾನು ಬಾಯಿ ಬಿಟ್ಟು ಹೇಳುತ್ತೇನೆ ನೀವು ಸುಮ್ಮನಿರ್ತೀರಿ, ಆದರೆ ನಾನು ಸುಮ್ಮನಿರಲಿಲ್ಲ. ಮತ್ತೆ ಅಂದು ವಾಪಸ್ ಹೋಗುತ್ತಾ ಗಾಜನೂರು ಹತ್ತರ ತಲವಾರ್ ಬೀಸಿದ್ರು. ಯಾರು? ಅಂದರೆ ಶಿವಮೊಗ್ಗದವರಲ್ಲ,  ಯಾರೋ ಒಬ್ಬ ಸತ್ತ.  ಇದಕ್ಕೆ ಶಿವಮೊಗ್ಗ ಮುಸಲ್ಮಾನರು ಕಾರಣನಾ? ಉದಾಹರಣೆಗೆ ಹರ್ಷ ಸತ್ತ. ರಾತ್ರಿ ಬಂದು ಯಾರೋ ಹೊಡೆದೋದ್ರು. ಸುಮ್ಮಸಮ್ಮನೆ ನಮ್ಮ ನಿಮ್ಮ ಮಕ್ಕಳನ್ನ ಹೊಡೆದ್ರೆ ಸುಮ್ಮನಿರೋದಕ್ಕಾಗುತ್ತಾ? ಖಂಡಿಸಬೇಕಾ ಬೇಡವಾ? ನಾನಂತು ಖಂಡಿಸ್ತೇನೆ, ಬಿಜೆಪಿಯಲ್ಲಿ ಬಹಳ ಜನ ಮಾಡಲ್ಲ, ಆ ಪ್ರಶ್ನೆ ಬೇರೆ. ಆದರೆ ನನಗೆ ತಡೆದುಕೊಳ್ಳಲಾಗಲ್ಲ. ಕೆಟ್ಟದನ್ನು ಎಂದೂ ಕೂಡ ನಾನು ಬಿಡೋದಿಲ್ಲ. ಎಲ್ಲಾ ಮುಸಲ್ಮಾನರ ಬಗ್ಗೆ ನಾವು ಹೇಳೋದಿಲ್ಲ, ಗೂಂಡಾಗಿರಿ ಮಾಡಿ ತೊಂದರೆ ಕೊಡುವವರ ಬಗ್ಗೆ ನಾನು ಖಂಡಿಸ್ತೀನಿ ಎಂದಿದ್ದಾರೆ.’’

READ | ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! 2 ವರ್ಷ ಹೂತಿಟ್ಟ ಸತ್ಯ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು! ತೀರ್ಥಹಳ್ಳಿಯಲ್ಲಿ ಸಿಕ್ಕ ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

ಸದ್ಯ ಈ ವಿಡಿಯೋದ ಸ್ಕ್ರೀನ್ ರೆಕಾರ್ಡ್​ಗಳು ವಾಟ್ಸ್ಯಾಪ್​ ಗ್ರೂಪ್​ಗಳಲ್ಲಿ ಹರಿದಾಡುತ್ತಿದ್ದು, ಮಾಜಿ ಸಚಿವರ ಹೇಳಿಕೆಯನ್ನು ತಮ್ಮದೇ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಅಲ್ಲದೆ ಈ ಸಂಬಂಧ ಚರ್ಚೆಗಳು ಸಹ ನಡೆಯುತ್ತಿವೆ. 

READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS :ks eshwarappa,ks eshwarappa news,ks eshwarappa speech,ks eshwarappa latest news,ks eshwarappa interview,dk shivakumar vs ks eshwarappa,ks eshwarappa fight,ks eshwarappa today news,ks eshwarappa statement,ks eshwarappa resignation,ks eshwarappa status,ks eshwarappa reaction,minister ks eshwarappa,eshwarappa,ks eshwarappa news updates,ks eshwarappa live,ks eshwarappa flag,k s eshwarappa,eshwarappa today news,eshwarappa news,ks eshwarappa bhashan karnataka election 2023,karnataka assembly election 2023,karnataka assembly election,karnataka assembly elections,karnataka elections,karnataka election,karnataka elections 2023,karnataka assembly elections 2023,karnataka election news,karnataka news,karnataka,karnataka vidhan sabha election 2023,2023 election,karnataka latest news,karnataka politics,2023 assembly election,assembly election 2023,karnataka election survey,karnataka election campaign  #jpstory #jp flshback #jpexclusive #jp malenadu #malenadutoday, #malnadutoday, #todaynews  #shivamoggalivetoday #shivamogganewstoday, #malnadtoday.com #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga