ಟ್ಯಾಂಕ್ ಮೊಹಲ್ಲಾ ಮಸೀದಿ ಬಳಿಯಲ್ಲಿ ಗಣಪತಿ ಮೆರವಣಿಗೆ ಸಾಗುತ್ತಿದ್ದ ವೇಳೆ ನಡೆದಿದ್ದೇನು?

Here is the details of the incident that took place during the Ganapati procession yesterday at Tank Mohalla in Shimoga city.ಶಿವಮೊಗ್ಗ ನಗರದ ಟ್ಯಾಂಕ್ ಮೊಹಲ್ಲಾ ದಲ್ಲಿ ನಿನ್ನೆ ಗಣಪತಿ ಮೆರವಣಿಗೆ ವೇಳೇ ನಡೆದ ಘಟನೆಯ ವಿವರ ಇಲ್ಲಿದೆ

ಟ್ಯಾಂಕ್ ಮೊಹಲ್ಲಾ ಮಸೀದಿ ಬಳಿಯಲ್ಲಿ ಗಣಪತಿ ಮೆರವಣಿಗೆ ಸಾಗುತ್ತಿದ್ದ ವೇಳೆ ನಡೆದಿದ್ದೇನು?

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಶಿವಮೊಗ್ಗದ ಟ್ಯಾಂಕ್​ ಮೊಹಲ್ಲಾದಲ್ಲಿ ಗಣಪತಿ ವಿಸರ್ಜನೆ ವೇಳೆ ನಿನ್ನೆ ಸಣ್ಣಪುಟ್ಟ ಘಟನೆಯೊಂದು ನಡೆದಿದ್ದು, ರಾತ್ರಿಯೇ ಸ್ಥಳಕ್ಕೆ ಎಸ್​ಪಿ ಮಿಥುನ್ ಕುಮಾರ್ ಭೇಟಿಕೊಟ್ಟು ಪರಿಸ್ಥಿತಿಯನ್ನು ಕಂಟ್ರೋಲ್ ಮಾಡಿದ್ದಾರೆ. 

ಇಲ್ಲಿನ ಕೇಸರಿ ಪಡೆಯ ಗಣಪತಿ ವಿಸರ್ಜನೆಯ ಮೆರವಣಿಗೆ ಟ್ಯಾಂಕ್​ ಮೊಹಲ್ಲಾದಲ್ಲಿ ನಡೆಯುತ್ತಿತ್ತು. ಈ ವೇಳೇ ಅಲ್ಲಿಯ ಮಸೀದಿ ಬಳಿಯಲ್ಲಿ ಮೆರವಣಿಗೆ ಸಾಗಿ ಬಂದಿದೆ.

ಅದೇ ಸಂದರ್ಭದಲ್ಲಿ ಪೇಪರ್​ ಚೂರುಗಳು ಒಮ್ಮೆಲೆ ಹಾರುವ ಪಟಾಕಿಯೊಂದನ್ನ ಹೊಡೆಯಲಾಗಿದೆ. ಈ ಪೇಪರ್​ ಪಟಾಕಿಯನ್ನು ಹೊಡೆದಿದ್ದಕ್ಕೆ ಅಲ್ಲಿದ್ದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. 

ಇನ್ನೂ ಸ್ಥಳದಲ್ಲಿ ವಿಚಾರ ಮಾತಿನ ಚಕಮಕಿಗೆ ತಿರುಗಿದ ಬೆನ್ನಲ್ಲೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ಬಂದು ಸನ್ನಿವೇಶವನ್ನು ಕಂಟ್ರೋಲ್​ಗೆ ತೆಗೆದುಕೊಂಡಿದ್ದಾರೆ.

ಕೆಎಸ್​ಆರ್​ಪಿ ಹಾಗೂ ಹೆಚ್ಚುವರಿ ಭದ್ರತಾ ಸಿಬ್ಬಂದಿ ಜೊತೆಗೆ ಎಸ್​ಪಿ ಮಿಥುನ್ ಕುಮಾರ್​ ಕೂಡ ಸ್ಥಳಕ್ಕೆ ಬಂದು ಪರಿಸ್ತಿತಿಯನ್ನು ನಿಯಂತ್ರಿಸಿದ್ದಾರೆ. ಗಣಪತಿ ಮೆರವಣಿಗೆಯನ್ನು ಮುಂದಕ್ಕೆ ಸಾಗಿಸಿದಷ್ಟೆ ಅಲ್ಲದೆ ಇನ್ನೊಂದು ಕೋಮಿನವರ ದೂರುಗಳನ್ನು ಆಲಿಸಿದ್ದಾರೆ. 

ಇನ್ನೂ ರಾತ್ರಿಯಾಗಿದ್ದರಿಂದ ಪೊಲೀಸ್ ಬಂದೋಬಸ್ತ್ ಮೂಲಕ ಸ್ಥಳದಲ್ಲಿ ಜಮಾಯಿಸಿದ್ದವರನ್ನ ಮನೆಗೆ ಹೋಗುವಂತೆ ಸೂಚಿಸಲಾಯ್ತು. ಸದ್ಯ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ಶಾಂತವಾಗಿದೆ.  


ಇನ್ನಷ್ಟು ಸುದ್ದಿಗಳು