heavy rain hulikal agumbe kollur ghat road / ಭಾರೀ ಮಳೆ! ಕುಸಿಯುತ್ತೆ ಚಕ್ರ! 3 ಘಾಟಿಯಲ್ಲಿಯು ಜಾಗ್ರತೆ!

Malenadu Today

heavy rain hulikal agumbe kollur ghat road ಶಿವಮೊಗ್ಗದಲ್ಲಿ ಇವತ್ತು ಕೂಡ ಮಳೆ ಮುಂದುವರಿದಿದೆ. ಇದರ ನಡುವೆ ನಿನ್ನೆ ದಿನ ಮಳೆಯಿಂದಾಗಿ ಯಡೂರು ಸಮೀಪ ಎರಡು ಲಾರಿಗಳು ಮಣ್ಣಿನಲ್ಲಿ ಸಿಲುಕಿದ್ದವು. ಕಳೆದ ಮೂರು ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ ಭೂಮಿಯ ಮಣ್ಣು ಸಡಿಲಗೊಂಡು,  ಹೆವಿವೆಹಿಕಲ್​ಗಳು ರೋಡಿನಿಂದ ಕೆಳಕ್ಕೆ ಇಳಿದ ಸಂದರ್ಭದಲ್ಲಿ ಚಕ್ರಗಳು ಹುಗಿಕೊಳ್ಳುವುದು ಸಾಮಾನ್ಯ. ಇದೇ ರೀತಿಯಲ್ಲಿ ಹೊಸನಗರ ತಾಲ್ಲೂಕಿನಲ್ಲಿ  ಮಾಸ್ತಿಕಟ್ಟೆ-ಯಡೂರು ರಸ್ತೆಯ ಯಡೂರು-ಕರ್ಕಿಹಕ್ಕಲು ಬಳಿ ಎರಡು ದೊಡ್ಡ ಲಾರಿಗಳು ಸಿಲುಕಿಕೊಂಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತು. ಪರಿಣಾಮವಾಗಿ, ವಾಹನಗಳನ್ನು ಮಾಸ್ತಿಕಟ್ಟೆ ಮತ್ತು ಕಾನುಗೋಡು ಮೂಲಕ ತೀರ್ಥಹಳ್ಳಿ ಕಡೆಗೆ ತಿರುಗಿಸಲಾಗಿತ್ತು. ಇನ್ನೂ ಇತ್ತ  ನಾಗೋಡಿ-ಕೊಲ್ಲೂರು ಘಾಟಿ ರಸ್ತೆಯಲ್ಲಿ  ಬೃಹತ್ ಮರವೊಂದು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ಇತ್ತ ಆಗುಂಬೆ ಹಾಗೂ ಬಾಳೆಬರೆ ಘಾಟಿಯಲ್ಲಿ ಜೋರು ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. 

heavy rain hulikal agumbe kollur ghat road

 

Share This Article