ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್​ ನ್ಯೂಸ್ / ದಾವಣಗೆರೆ, ಆನವೇರಿ, ಮಲೆಬೆನ್ನೂರು, ಹರಿಹರ ಕೃಷಿಕರಿಗೆ ಅನುಕೂಲ

Malenadu Today

ಜ. 1 ರಿಂದ ಬೇಸಿಗೆ ಬೆಳೆಗಾಗಿ ಭದ್ರಾ ಅಚ್ಚುಕಟ್ಟು ನಾಲೆಗಳಿಗೆ ನೀರು

ಶಿವಮೊಗ್ಗ: 2022-23 ನೇ ಸಾಲಿನ ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ಬೇಸಿಗೆ ಬೆಳೆಗಳಿಗಾಗಿ ಜನವರಿ 1 ರ ರಾತ್ರಿಯಿಂದ ಭದ್ರಾ ಎಡ ದಂಡೆ ನಾಲೆ ಹಾಗೂ ಜನವರಿ 3 ರ ರಾತ್ರಿಯಿಂದ ಬಲದಂಡೆ ನಾಲೆಗಳಿಗೆ ನೀರು ಹರಿಸಲಾಗುವುದು.

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ – ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ರೈತ ಮುಖಂಡರು, ಅಚ್ಚುಕಟ್ಟು ರೈತರು ಹಾಗೂ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. 

 ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ಜನವರಿ 01 ರ ರಾತ್ರಿಯಿಂದಲೇ ಎಡದಂಡೆ ನಾಲೆಗೆ ಹಾಗೂ ಜನವರಿ 03 ರ ರಾತ್ರಿಯಿಂದಲೇ ಭದ್ರಾ ಬಲದಂಡೆ ನಾಲೆ, ಆನವೇರಿ ಶಾಖಾನಾಲೆ, ದಾವಣಗೆರೆ, ಮಲೇಬೆನ್ನೂರು ಶಾಖಾನಾಲೆ ಮತ್ತು ಹರಿಹರ ಶಾಖಾ ನಾಲೆಗಳಿಗೆ ನೀರನ್ನು ಹರಿಸಲಾಗುತ್ತಿದೆ. 

ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಭ್ರಷ್ಟರು ಎಸಿ ಆಗುವುದು ಬೇಡ/ ರಾಜ್ಯ ಸರ್ಕಾರಕ್ಕೆ ಒತ್ತಾಯ/ ಏನಿದು ಬೇಡಿಕೆ ವಿವರ ಇಲ್ಲಿದೆ ಓದಿ

ಭದ್ರಾ ಅಚ್ಚುಕಟ್ಟಿನಲ್ಲಿ ಬರುವ ಎಲ್ಲಾ ರೈತರು ಇಲಾಖೆಯೊಂದಿಗೆ ಸಹಕರಿಸುವಂತೆ ಭ. ಯೋ.ನೀ.ಸ.ಸಮಿತಿಯ ಸದಸ್ಯ ಕಾರ್ಯದರ್ಶಿ ಎನ್. ಸುಜಾತ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಮ್ಮ ಸೋಶಿಯಲ್​ ಮೀಡಿಯಾ :   ಟ್ವಿಟ್ಟರ್ : ಫೇಸ್​ಬಕ್  : ಇನ್​ಸ್ಟಾಗ್ರಾಮ್  : ಟೆಲಿಗ್ರಾಂ : ವಾಟ್ಸ್ಯಾಪ್​

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article